ಶಿವರಾತ್ರಿ..!

ಜೀವದ ಜಾಗರಣೆಯಲ್ಲ
ಭಾವದ ಜಾಗರಣೆ
ಶಿವನಾಮ ಸ್ಮರಣೆಯಲ್ಲ
ಶಿವತತ್ವ ಅನುಕರಣೆ
ಬರಿದೆ ಆರಾಧನೆಯಲ್ಲ
ಸಂಪೂರ್ಣ ಸಮರ್ಪಣೆ.!


ಸಾರ..!

ಭಸ್ಮಧಾರಿ ಶಂಕರ
ಸ್ಮಶಾನವಾಸಿ ಹರ
ಬಾಳಿನ ನಗ್ನಸತ್ಯಗಳ
ನಿತ್ಯ ಸತ್ಯ ಹರಿಕಾರ.!
ಈ ಬದುಕು ನಶ್ವರ
ಆ ಬೆಳಕು ಆಧಾರ
ಎಂಬರಿವಿನ ಸಾಕ್ಷಾತ್ಕಾರ
ಸ್ವರೂಪವೇ ಈಶ್ವರ.!

ಶಿವತತ್ವ..!

ಅರಿವಿನಾ ಹಣೆಗಣ್ಣು
ತೆರೆದು ನಿಂತರಷ್ಟೇ
ಕಾಮಕ್ರೋಧ ಬೂದಿ.!
ಶಿರದಿ ಶುಭ್ರಜಲವಿರಿಸಿ
ತಂಪಾಗಿ ಕುಳಿತರಷ್ಟೇ
ಸಾಧನೆಗಳಿಗೆ ನಾಂದಿ
ಯಶಸ್ಸಿನಾ ಹಾದಿ.!

✍️ಎ.ಎನ್.ರಮೇಶ್  ಗುಬ್ಬಿ