ಓ ಆದಿ ಪ್ರೇಕ್ಷಕ ಪರಮೇಶ್ವರನೆ
ಜೀವನ ನಾಟಕದ ಮಾಲಿಕನೆ
ಶರಣು ಶರಣಯ್ಯ ಏಕನಾಥನೆ
ಕರುಣೆ ತೋರಯ್ಯ ಗಂಗಾಧರನೆ//
ತಲೆಯಲಿ ಗಂಗೆಯನು ಹೊತ್ತು
ಅರ್ಧಶರಿರವ ಪಾರ್ವತಿಗೆ ಇತ್ತು
ಪ್ರಪಂಚವೇ ನಿನ್ನ ಸೊತ್ತು
ದೂರ ಮಾಡು ಕಂದಮಗಳ ಆಪತ್ತು//
ಕ್ರಿಯಾತ್ಮಕ ಮನೋರಥ ಕಾರ್ಯದಲಿರಿಸಿ
ಸನ್ಮಾರ್ಗದಲಿ ನಿಸ್ವಾರ್ಥವನು ಅನುಸರಿಸಿ
ಜೀವನ ಪಯಣವ ಸ್ವಚ್ಛಗೊಳಿಸು
ಶ್ರೀಧರನೇ ಹೊಸ ತೋರಿಸು//
ಶಿಷ್ಟರ ರಕ್ಷಕನೆ
ದುಷ್ಟರ ಶಿಕ್ಷಕನೆ
ಹಾಲಹಲ ಕುಡಿದು ಜಗವ ಗೆದ್ದ
ಜಗವಸುತ ಮಂಜುನಾಥನೆ//
ತಂತ್ರ ಕುತಂತ್ರ ಮೆಟ್ಟಿನಿಂತು
ಜೀವನ ಕತ್ತಲೆಯ ಬಡೆದೊಡಿಸುತ
ಬಾಳಿಗೆ ಬೆಳಕನು ಆವರಿಸು
ಶಶಿಧರನೇ ದಯೆ ತೊರಿಸು//
ಮೌನದಲಿ ಮುಗುಳ್ನಗೆ
ನೀ ರಕ್ಷಕ ನಮ್ಮ ಬಾಳಿನ ಸಿರಿಗೆ
ಪರಿವರ್ತನೆಯ ಸಂಗಮದ ಕಾಶಿನಾಥನೆ
ನಿನ ನಾಮಕೆ ಸಾಟಿಯೆಲ್ಲಿದೆ ಶಿವಶಂಕರನೇ//
✍️ಚೇತನಾ.ಫ.ಕೀರೆಸೂರ
ಧಾರವಾಡ