ಮಾಡಿದ್ದೀರಿ, ತಾವು ತಮ್ಮ ಪಾಲಿನ ಸಾಹಿತ್ಯದಡುಗೆ
ಹದಕೆ ಬೆರಸದೆ ಸಿಕ್ಕ ಸಿಕ್ಕದ್ದನ್ನು/

ರಮ್ಯ ಸವಿಯನು ಕಡು ರುಚಿಯನು ಸವಿದುಣ್ಣುವನಿಗೆ
ಪ್ರತಿ ಅಗುಳಿನ ನುಡಿ ಮಾಣಿಕ್ಯದ ಬಗೆ/

ನವ್ಯ ನವೋದಯ ಪ್ರಗತಿಶೀಲ ಬಂಡಾಯದೊಳಗೆ ಬರೆಹ
ಬದುಕಿನ ಅಭಿವ್ಯಕ್ತಿಯ ವ್ಯಕ್ತಿತ್ತ್ವ ಹಲವು ತರಹ/

ಬರೆಹದೊಳಗೆ ಸಾಮಾಜಿಕ ಕಳಕಳಿ
ಅಹಮಿಕೆಯಿಲ್ಲದ ಹೃದಯವಂತಿಕೆ ತಮ್ಮೊಳಗೆ/

ಚೆಂಬೆಳಕಿನ ಹೊಂಬೆಳಕು ನಿಮ್ಮ ಬದುಕು
ತಮ್ಮ ಆದರ್ಶಪ್ರಿಯತೆ ಸದಾ ನಮ್ಮಗಳ ಪಾಲಿಗಿರಬೇಕು/

ನಮನಗಳು ನುಡಿಯ ಈ ಕವಿತೆಯಲಿ
ಸದಾ ನೆನಪಲಿ ತಮ್ಮ ಕವಿತೆ ಬಾಯಲಿ/

ಡಾ.ನವೀನ್ ಕುಮಾರ್ ಎ.ಜಿ