ಗದಗದ ಹೊಂಬಳ ನಾಡಿನ ಹೊಂಬೆಳಕು ಕಣವಿ
ಪಾವ೯ತಿ-ಸಕ್ಕರೆಪ್ಪರವರ ಸಿಕ್ಕರೆ ನುಡಿಯ ಸಿಹಿ ತುಣುಕು ಕಣವಿ

ಮಾಧ್ಯಮಿಕದಿಂದ ಸ್ನಾತಕದವರೆಗೂ ವಿದ್ಯಾಕಾಶಿ ಧಾರವಾಡದಲ್ಲಿ ಓದಿದಿರಿ
ಓದಿದ ವಿದ್ಯಾಲಯದಲ್ಲೇ ಜೀವನ ಯಾನಕ್ಕೆ ಆಶ್ರಯ ಪಡೆದಿರಿ

ಸಾಹಿತ್ಯ ಪಯಣದಲ್ಲಿ ಕೈಹಿಡಿದು,
ಹೆಜ್ಜೆಗೆ ಹೆಜ್ಜೆಯಾಗಿದ್ದು ಸಹಧಮಿ೯ಣಿ ಶಾಂತಾ
ಅಲ್ಲಿಂದ ನೀವು ರಚಿಸಿದ ಕೃತಿಗಳು ಅನಂತ

“ಆಕಾಶಬುಟ್ಟಿಯ” ಕನ್ನಡದ ಕುಸುಮಗಳಿಂದ ಅಲಂಕರಿಸಿದಿರಿ
“ಮಣ್ಣಿನ ಮೆರವಣಿಗೆ” ಮಾಡುತ್ತ “ದೀಪಧಾರಿ”ಯಾದಿರಿ*

“ಎರಡುದಡ”ಗಳಲ್ಲಿ ನಡೆಯಲಾಗದೆಂದಿರಿ
“ನೆಲಮುಗಿಲ” ಒಂದು ಮಾಡಿದಿರಿ

“ನವಿಲೂರ ಮನೆ” ಯಿಂದ “ಧ್ವನಿ”ಯಾದಿರಿ
“ಶಿಶರದಲ್ಲಿ ಬಂದ ಸ್ನೇಹಿತನಿಗೆ” “ಹೊಂಬೆಳಕ”ಆರತಿಯನೆತ್ತಿದಿರಿ”*

“ಹಕ್ಕಿಪುಚ್ಚಗಳ” ಪರಿಚಯಿಸಿದಿರಿ
ಕನ್ನಡದ ಏಳ್ಗೆಗೆ “ಜೀವಧ್ವನಿಯಾದಿರಿ”

ಸಾಹಿತ್ಯ ಸಮ್ಮೇಳನದ ಸಾರಥಿಯಾದಿರಿ
ಸಮನ್ವಯತೆ ಗೆ “ನವ್ಯಧ್ವನಿ”ಯಾದಿರಿ

ಕನ್ನಡಾಂಬೆಗೆ “ಚೆಂಬೆಳಕಿನಲ್ಲಿ”ಮಂಗಲ ಕೋರಿದಿರಿ
ವಿಶ್ವಭಾರತಿಗೆ ಕನ್ನಡದ ಆರುತಿ ಮಾಡಿಸಿದಿರಿ

“ಕಾವ್ಯಾಕ್ಷಿಯ” “ಮಧುಚಂದ್ರನ” ವೀಕ್ಷಿಸಿ
ಕಾರ್ತೀಕದಮೋಡ”ದಲ್ಲಿ ತೇಲಿಸಿ,
“ಜೀವನ ಸಿದ್ಧಿ”ಯ ದಾರಿ ತೋರಿಸಿ

ಮೊಳಗಲಿ ಮಂಗಳ ಜಯಭೇರಿ ಎಂದು ಸತ್ತಂತೆ ಕುಳಿತವರೂ ತಟ್ಟನೇಳುವಂತೆ
ನರನಾಡಿಗಳು ಚೇತನಗೊಂಡು ಎದ್ದು ನಿಲ್ಲುವಂತೆ ಮಾಡಿದಿರಿ

“ವಿಶ್ವ ಸದಾ ವಿನೂತನ”
“ವಿದ್ಯೆಯೇ ಚೇತನ”
ಸವ೯ಹೃದಯಗಳ ಸಂಸ್ಕಾರಕ್ಕೆ ದಾರಿ ಎಂದು ಸಾರಿದಿರಿ

“ಕನ್ನಡ ಕವಿ ರತ್ನನಾಗಿ” “ನಾಡೋಜ”ನಾಗಿ ನೂರಾರು ಪ್ರಶಸ್ತಿಗಳಿಂದ ಕನ್ನಡಾಂಬೆಯ ಚರಣವನ್ನಲಂಕರಿಸಿ
ತುಂಬು ಜೀವನವನ್ನು ಸಾಥ೯ಕತೆಯಲ್ಲಿ ಮುಗಿಸಿ
ಅನಂತದ ಹೊಂಬೆಳಕಲ್ಲಿ ಒಂದಾದಿರಿ ಭುವನೇಶ್ವರಿಯ ಆಲಯದ ಸದಾ ಬೆಳಗುವ ಜ್ಯೋತಿ ನೀವಾಗಿಹಿರಿ”

✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ