ರಂಗಭೂಮಿ ರಂಗುಗಳು ಜನೆವರಿ 1 2021 ರಿಂದ ಮೂಡಿ ಬಂದ ಒಂದು ರಂಗಭೂಮಿಯ ರಂಗುಗಳನ್ನು ನಿತ್ಯೋತ್ಸವದ ಅಂಗವಾಗಿ 1ನೇ ಜನೆವರಿಯಿಂದ ಮುಂಜಾನೆ ಪ್ರತಿನಿತ್ಯ ಮುಂಜಾನೆ 9ಕ್ಕೆಸುಮಾರು 8 ರಿಂದ 25 ನಿಮಿಷ ನಾಟಕದ ಒಂದೊ ಎರಡೋ ಆಯ್ದ ಉಕ್ತಿಗಳ ಸುತ್ತ ತೂರಿ ಬಿಡುವ ಚಿಂತನ ಮಂಥನ ಕಾರ್ಯ ಕ್ರಮವಾಗಿದ್ದು ಸುಮಾರು 46 ಜನ ವಿದ್ವಾಂಸರು ಗಳು ನಿರ್ದೇಶಕರು, ನಟರು ನಟಿಯರು ಸಂಘ ಟಕರು, ಹಲವಾರು ನಾಟಕಕಾರರ ಹಲವು ನಾಟಕಗಳಲ್ಲಿ ಬರುವ ಹಲವು ಪಾತ್ರಗಳ ತಾವೇ ಆಯ್ಕೆ ಮಾಡಿದ ಸಂಭಾಷಣೆಗಳಿಗೆ ತಮಗೆ ಅನಿಸಿದ ಅನಿಸಿಕೆ ಗಳನ್ನು ತೂರುತ್ತ ರಂಗ ಆಕಾಶ ಅವಕಾಶದಲ್ಲಿ ಹಲವು ರಂಗುಗಳನ್ನು ನಿರ್ಮಿಸುತ್ತ, ನಾಟಕ ಕಾರ ಸೃಷ್ಟಿಸಿದ ಪಾತ್ರಕ್ಕೆ ಹಲವು ರೀತಿಯ ಮೇಕಪ್ ಮಾಡುತ್ತ, ಮುಖ ವಾಡ ಹಾಕಿಸುತ್ತ ತಮ್ಮದೇ ಆದ ವಿಶಿಷ್ಟ ರಂಗು ತೋರಿಸಿದ್ದು ನಟ ನಟಿಯರು ನಿರ್ದೇಶಕರಿಗೆ “ಹೀಗೂ ಇರಬಹುದಲ್ಲಾ ಹೀಗೂ ಪಾತ್ರವನ್ನು ಅರ್ಥ ಮಾಡಿಕೊಳ್ಳಬಹುದಲ್ಲ ಅಂತ ಮುಖ ಪುಸ್ತಕ ನೋಡು ಓದುಗರಿಗೆ ಅನುಭವ ಮಾಡಿ ಸುವ ಸ್ರಜನಶೀಲತೆ ತೋರಿಸಿತು.

ಇದರಲ್ಲಿ ಅರವಿಂದ ಕುಲಕರ್ಣಿ, ಹರ್ಷ್ ಡಂಬಳ ಡಾ.ವಿ.ಟಿ. ನಾಯಕ್, ವಿಜಯಾ ನಾಯಕ್, ಆರತಿ ಕುಲಕರ್ಣಿ, ಮೇಘನಾ ಜಹಾಗಿರದಾರ, ಡಾ.ಲಕ್ಷ್ಮೀಶ್ ಹೆಗಡೆ, ಪ್ರಜ್ಞಾ ಮತ್ತಿಹಳ್ಳಿ, ಡಾ.ನಳಿನಿ ರಮೇಶ್, ಡಾ.ವಿಭಾ ಪುರೋಹಿತ್ ಗೀತಾ ಹೆಗಡೆ, ಜಯಶ್ರೀ ಹೆಗಡೆ,ಆರ್.ಜಿ. ಹೆಗಡೆ ನಂದಾ ಹಂಪಿಹೋಲಿ ಡಾ.ಕೃಷ್ಣ ಕಟ್ಟಿ, ಪ್ರೇಮಾ ನಡುವಿನಮನಿ, ವಿದ್ಯಾ ಸಾಗರ್ ದೀಕ್ಷಿತ, ವ್ಯಾಸ ದೇಶಪಾಂಡೆ, ಮನೋಹರ್ ನಾಯಕ್, ಶ್ರೀಮತಿ ಕಡಮೆ, ಜ್ಯೋತಿ ದೀಕ್ಷಿತ್, ಸೀತಾ ಹೆಗಡೆ, ಜಯತಿರ್ಥ್ ಜಹಾಗೀರದಾರ, ಉಷಾ ನರಸಿಂಹಮ್, ಡಾ.ಪದ್ಮ ಕುಲಕರ್ಣಿ ಬೆಳಗಾವಿ, ಕೆ.ಗುಂಡಣ್ಣ, ಬಸವಲಿಂಗಯ್ಯ,ಡಾ.ವಿಶ್ವನಾಥ್ ವಂಶಾಕ್ರತ ಮಠ, ಡಾ.ರಾಮ್ ಮರಾಠೆ, ಡಾ.ಬಸವರಾಜ ದೋನುರ್ ಹೀಗೆ ಸುಮಾರು 70+ಪರಿಣಿತ ರನ್ನು ಇಂತಹ ಐತಿಹಾಸಿಕ ಕಾರ್ಯ ಕ್ರಮದಲ್ಲಿ ರಂಗುಗಳ ಸಪ್ತಾಹ ರೂಪದಲ್ಲಿ ನೀಡಲು ಆಮಂತ್ರಿಸಲಾಗಿತ್ತು.

ಕೆಲವರು ಇದೇನು ಕಾರ್ಯಕ್ರಮ? ‘ಯಾಕೆ ಮಾಡಬೇಕು? ಹೀಗೇ ಮಾಡಬೇಕೆ? ದುಡ್ಡಿಲ್ಲದೆ ಯಾಕೆ ಮಾಡಬೇಕು? ಏನು ಪ್ರಯೋಜನ? ಈ ಗದ್ದಲದಲ್ಲಿ ನಮ್ಮ ಪ್ರತಿಭೆಯ ರಂಗು ದಂಗಾಗು ವಂತೆ ಮಾಡಿದರೆ? ಇಂಥಹ ಕಪೋಲಕಲ್ಪಿತ ವಿಚಾರಗಳ ಬಿರುಗಾಳಿ ಗೆ ಧರಿಸಿದ ವಸ್ತ್ರಹಾರಿ ಸಿಕೊಂಡು ದೂರವೇ ಉಳಿದರು. ಒಟ್ಟಿನಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿತ್ತು. ಡಾ.ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು ಸಾಣೇಹಳ್ಳಿಅವರು ಡಿಸೆಂಬರ್ 31ರಂದು ಮುಂಜಾನೆ 9ಕ್ಕೆ ಅಭಿನಯ ಭಾರತಿ ಮುಖ ಪುಸ್ತಕದ ಮೂಲಕ ಮಂಗಳ ಅನುಗ್ರಹ ಭಾಷಣ ಮತ್ತು ಹೊಸ ವರ್ಷದ ಸ್ವಾಗತವನ್ನು ರಂಗ ಭೂಮಿ ಕಲಾವಿದರ ಪರವಾಗಿ ಮಾಡಿ ದ್ದಾರೆ.

ಇದೊಂದು ಹೊಸ ಪ್ರಯತ್ನ ನಾಟಕ ಕಲಿಕೆ ಯಲ್ಲಿ ತೊಡಗಿಕೊಂಡವರಿಗೆಲ್ಲ ಒಂದು ಅಕ್ಯಾಡೆಮಿಕ್ ಅನುಭವ ನೀಡಿದರೆ ಸಾಮಾನ್ಯ ವಾಚಕ ವೀಕ್ಷಕ ಶ್ರೋತೃಗಳಿಗೆ ಹೀಗೂ ಉಂಟು ಅನ್ನುವ ಅರಿವು ಮೂಡಿಸು ವ ಪ್ರಯತ್ನ. ಸುಂದರ ಸನ್ನಿವೇಶ, ಕಾಲಘಟ್ಟಕ್ಕೆ ತಕ್ಕಂತೆ ಶಬ್ದ ಮತ್ತು ವಾಕ್ಯಗಳು ಹುಟ್ಟಿಸುವ ಹಲವು ಧ್ವನಿಗಳನ್ನು ಅರ್ಥಗಳ ಹುಡುಕಾಟ ವಾಗಿತ್ತು. ತನ್ನ ಮೂಲಕ ಬೆಳಕಿನ ಸಪ್ತವರ್ಣ ಗಳಾಚೆ ಕಾಣದ ಆದರೆ ಅನುಭವಿ ಸುವ ತರಂಗಗಳು ಎಬ್ಬಿಸುವ ಹಲವು ರಂಗುಗ ಳನ್ನು ಗುಂಗುಡಿಸುವ ಪ್ರಯತ್ನವಾಗಿತ್ತು.

✍️ಅರವಿಂದ‌ ಕುಲಕರ್ಣಿ
ರಂಗಭೂಮಿ‌ ಚಿಂತಕರು,‌ಧಾರವಾಡ