ನಾಡಿನ ವಾಸ್ತು ಶಿಲ್ಪ ಪರಂಪರೆಯಲ್ಲಿ ಕಲ್ಯಾಣ ಚಾಲುಕ್ಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ತಮ್ಮ ಕಾಲದಲ್ಲಿ ವಿಭಿನ್ನ ಶೈಲಿಯ ನ್ನು ಅಳವಡಿಸುವ ಮೂಲಕ ದೇವಾಲಯದ ನಿರ್ಮಾಣದ ಕಲ್ಪನೆಗೆ ಹೊಸ ಸ್ವರೂಪವನ್ನ ನೀಡಿದರು.ಅವರ ಬಹಳ ದೇವಾಲಯಗಳು ಉತ್ತರ ಕರ್ನಾಟಕ ದಲ್ಲಿ ಹಾಸು ಹೊಕ್ಕಿದೆ. ಅಂತಹ ಚಾಲುಕ್ಯರ ಸುಂದರ ದೇವಾಲಯ ಗಳಲ್ಲಿ ಹಾವೇರಿ ನಗರದಲ್ಲಿರುವ ಪುರಸಿದ್ದೇಶ್ವರ ದೇವಾಲಯವೂ ಒಂದು.

ಹಾವೇರಿಯು ಪ್ರಾಚೀನ ನಗರವಾಗಿದ್ದು ಇತಿಹಾ ಸದಲ್ಲಿ ಉಲ್ಲೇಖವಿದೆ.ನಳಪುರಿ ಎಂದು ಕರೆಯ ಲಾಗುತ್ತಿದ್ದ ಇದು ಅಂದಿನ ಪ್ರಮುಖ ಅಗ್ರಹಾರ ವಾಗಿತ್ತು.1067 ರಲ್ಲಿನ ರಾಷ್ತ್ರಕೂಟ ಅರಸರು ನೀಡಿದ ಶಾಸನದಲ್ಲಿ ಈ ಅಗ್ರಹಾರದ ಉಲ್ಲೇಖ ವಿದೆ.ಶಾಸನಲ್ಲಿ ಇಲ್ಲಿನ 400 ಬ್ರಾಹ್ಮಣ ಕುಟುಂಬ ಗಳಿಗೆ ಗ್ರಾಮಗಳನ್ನು ದತ್ತಿನೀಡಿದ ಉಲ್ಲೇಖವಿದೆ. ಇತಿಹಾಸದಲ್ಲಿ ನಳಪುರಿ–ಹಾವರಿ–ಹಾಹರಿ ಎಂಬ ಉಲ್ಲೇಖವಿದೆ. ಕಲ್ಯಾಣ ಚಾಲುಕ್ಯರ ಆರನೇ ವಿಕ್ರಾಮದಿತ್ಯ ಈ ದೇವಾಲಯವನ್ನು ಸ್ವಯಂಭೂ ಸಿದ್ದೇಶ್ವರ, ಸಿದ್ದನಾಥ, ಪುರಸಿದ್ಧೇ ಶ್ವರ ಹಾಗು ವಿಷಪ್ರಹರಿ ಎಂದು ಕರೆದಿದ್ದಾನೆ. ಮೂಲತ: ಸಿದ್ದೇಶ್ವರನ ಶಿಲ್ಪವಿದ್ದು ನಂತರ ಶಿವ ಲಿಂಗವಾಗಿ ಪರಿವರ್ತಿತವಾಗಿರಬಹುದು. ಈಗ ಸ್ವತ್ರಂತ್ರ ಜಿಲ್ಲಾ ಕೇಂದ್ರವಾಗಿರುವ ಹಾವೇರಿಯ ಲ್ಲಿನ ಈ ದೇವಾಲಯ ಕಲ್ಯಾಣ ಚಾಲುಕ್ಯರ ಮೇರು ಕೃತಿಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ.

ನೆಲಮಟ್ಟಕಿಂತ ತಗ್ಗಿನಲಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ನವರಂಗಕ್ಕೆ (ಮುಖಮಂಟಪ) ಮೂರು ದಿಕ್ಕಿನಿಂದ ಪ್ರವೇಶವಿದೆ. ಗರ್ಭಗುಡಿ ಯಲ್ಲಿ ಪುರಸಿದ್ಧೇಶ್ವರ ಎಂದು ಕರೆಯುವ ಸ್ವಯಂಭೂ ಶಿವಲಿಂಗವಿದ್ದು ಪಶ್ಚಿಮಾಭಿಮು ಖವಾಗಿದೆ. ಕಲಾತ್ಮಕವಾದ ಬಾಗಿಲುವಾಡ ಹೊಂದಿರುವ ಗರ್ಭಗುಡಿಯಲ್ಲಿನ ದ್ವಾರದಲ್ಲಿನ ಜಾಲಂದ್ರಗಳು ಗಮನ ಸೆಳೆಯುತ್ತದೆ. ಲಲಾಟ ದಲ್ಲಿ ಸಾಮಾನ್ಯವಾಗಿ ಕಾಣಬರುವ ಗಜಲಕ್ಷ್ಮೀ ಯ ಕೆತ್ತೆನೆ ಇಲ್ಲಿ ಕಾಣ ಬರುವದಿಲ್ಲ.ಅದರ ಬದ ಲಾಗಿ ಸಿದ್ದನಾಥನ ಕುಳಿತ ಬಂಗಿಯಲ್ಲಿನ ಶಿಲ್ಪ ಕಾಣಬರುವುದು ವಿಶೇಷ. ಮಕರ ತೋರಣ ದಲ್ಲಿ ತ್ರಿಮೂರ್ತಿಗಳ ಕೆತ್ತೆನೆ ಗಮನಾರ್ಹ.
ಇನ್ನು ಅಂತರಾಳದಲ್ಲಿ ನಂದಿಯ ಶಿಲ್ಪವಿದ್ದು ನವ ರಂಗದಲ್ಲಿ ಸುಂದರ ಚಾಲುಕ್ಯರ ಶೈಲಿಯ ಕಂಬ ಗಳಿವೆ. ಅಂತರಾಳ ದೇವ ಕೋಷ್ಟಕದಲ್ಲಿ ಕಾಳ ಮುಖ ಪಂಥದ ಸುಂದರ ಧ್ಯಾನದಲ್ಲಿ ರುವ ಪದ್ಮಾಸೀನ ಸಿದ್ದನಾಥ ಮೂರ್ತಿಯಿದೆ. ಹಾಗಾಗಿ ಕಾಳಮುಖರ ಪ್ರಮುಖ ಕೇಂದ್ರವಾ ಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಅದರಲ್ಲೂ ನಾಥ ಪರಂಪರೆಯ ಕುರುಹು ಕಾಣಸಿಗುವು ವದರಿಂದ ಪ್ರಮುಖ ನಾಥ ಕೇಂದ್ರದ ಸಾಧ್ಯತೆ ಗಳನ್ನು ಕಾಣಬಹುದು. ಇನ್ನು ನವರಂಗದ ಒಂಬತ್ತು ಅಂಕರ್ಣದ ಭುವನೇಶ್ವರಿಯಲ್ಲಿ ಸುಂದರ ಪದ್ಮದ ಕೆತ್ತೆನೆ ಇದ್ದು ಮದ್ಯದಲ್ಲಿ ಶಿವನ ಕೆತ್ತೆನೆ ಕಾಣಬರುವುದು. ಆದರೆ ಉಳಿದ ಭುವನೇಶ್ವರಿ ಯಲ್ಲಿ ಸಾಮಾನ್ಯ ವಾಗಿ ಕಂಡು ಬರುವ ಅಷ್ಟ ದಿಕ್ಪಾಲಕರ ಬದಲಾ ಗಿ ಅಷ್ಟ ಮಾತೃಕೆಯರು ಕಾಣುವುದು ವಿಶೇಷ.ಇಲ್ಲಿ ಬ್ರಾಹ್ಮಿ, ವೈಷ್ಣವಿ, ಮಹೇಶ್ವರಿ,ಕೌಮಾರಿ, ಇಂದ್ರಾಣಿ, ವಾರಾಹಿ, ನರಸಿಂಹಿ,ಮಗ್ಗು ಚಾಮುಂಡಾ ಅವರ ಕೆತ್ತೆನೆ ಕಂಡು ಬರುವದು ವಿಷೇಶ.ಈ ರೀತಿಯ ಅಷ್ಟ ಮಾತೃಕೆಯರ ಕೆತ್ತೆನೆ ಕರ್ನಾಟಕದ ದೇವಾಲಯ ಗಳಲ್ಲಿಯೇ ವಿರಳ. ನವರಂಗದಲ್ಲಿ ಯೋಗ, ವಿಷ್ಣು, ಗಣೇಶ, ಉಮಾಮಹೇಶ್ವರ, ಸೂರ್ಯ ಹಾಗು ಆದಿಶಕ್ತಿಯ ಶಿಲ್ಪಗಳಿವೆ. ನವರಂಗದಲ್ಲಿ ಕಕ್ಷಾಸನ ಇದ್ದು ಬಹುತೇಕ ಮಂಟಪದಂತೆ ತೋರುತ್ತದೆ.
ಇನ್ನು ದೇವಾಲಯಕ್ಕೆ ಸುಂದರ ಔತ್ತರೇಯ ಡ್ರಾವಿಡ ಶೈಲಿಯ ಶಿಖರ ಇದ್ದು ಸುಂದರವಾದ ಚಿಕಣಿ ಕೆತ್ತೆನೆ ಹೊಂದಿದೆ,ಇಲ್ಲಿನ ಹೊರಭಿತ್ತಿಯ ಲ್ಲಿ ನಾಗ-ನಾಗಿಣಿ,ಸೂರ್ಯ,ಮಹಿಷಾಸುರ, ಉಮಾಮಹೇಶ್ವರ ಹಾಗು ಶಿವಲಿಂಗ ಮುಂತಾದ ಕೆತ್ತೆನೆ ಇದೆ. ಇನ್ನು ಹೊರಭಿತ್ತಿಯ ಅಲಂಕಾರ ಸುಂದರವಾಗಿದ್ದು ಇಲ್ಲಿನ ಚಿಕ್ಕ ಶಿಖರಗಳಲ್ಲಿ ಔತ್ತರೇಯ ಮಾದರಿಯಲ್ಲದೆ ಭೂಮಿಜ ಶೈಲಿ ಯೂ ಕಾಣ ಬರುವುದು ವಿಶೇಷ.

ಇನ್ನು ಇಲ್ಲಿನ ಆವರಣದಲ್ಲಿ ಎಡ ಭಾಗದಲ್ಲಿ ಸಹ ಇರುವ ಗುಡಿ ಗರ್ಭಗುಡಿ, ಅಂತರಾಳ ಹಾಗು ನವರಂಗ ಇದ್ದು ಗರ್ಭಗುಡಿಯಲ್ಲಿ ಸುಂದರವಾದ ಉಗ್ರನರಸಿಂಹನ ಮೂರ್ತಿ ಇದೆ. ಹಿರಣ್ಯಕಶುಪು ವನ್ನು ತೊಡೆಯ ಮೇಲೆ ಇರಿಸಿಕೊಂಡು ಉದರ ಬಗೆಯುತ್ತಿರುವ ಈ ಮೂರ್ತಿ ಅದ್ಭುತ ಶಿಲ್ಪ. ಶಾಸನದಲ್ಲಿ ಇಲ್ಲಿ ಇಂದ್ರೇಶ್ವರ ದೇವಾಲಯದ ಉಲ್ಲೇಖವಿದ್ದು ವಿದ್ವಾಂಸರು ಬಹುಶ: ಇದು ಆ ದೇವಾಲಯ ವೇ ಇರಬಹುದು ಎನ್ನುತ್ತಾರೆ. ಉತ್ತರಾಭಿ ಮುಖವಾಗಿರುವ ಈ ದೇವಾಲಯದ ಹೊರಭಿತ್ತಿ ನಿರಾಂಡಂಭರವಾಗಿದೆ.
ಹಾವೇರಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವೀರಭದ್ರ ಆಂಜನೇಯ ಹಾಗೂ ಕಲ್ಮೇಶ್ವರ ದೇವಾಲಯಗಳಿದ್ದು ಆಂಜನೇಯ ದೇವಾಲ ಯ ಸಂಪೂರ್ಣ ನವೀಕರಣ ಗೊಂಡಿದೆ. ಕಲ್ಮೇಶ್ವರ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಸುಂದರವಾದ ಭುವನೇ ಶ್ವರಿ ಹೊಂದಿದೆ. ಇಲ್ಲಿನ ಬಾಗಿಲುವಾಡದಲ್ಲಿ ಸಹ ತ್ರಿಮೂರ್ತಿ ಗಳ ಕೆತ್ತೆನೆ ಇದ್ದು ನವರಂಗದಲ್ಲಿ ನಂದಿ ಇದ್ದು ಗರ್ಭಗುಡಿ ಯಲ್ಲಿ ಶಿವಲಿಂಗವಿದೆ.
ತಲುಪವ ಬಗ್ಗೆ : ಹಾವೇರಿ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಇದ್ದು ಸುಲಭವಾಗಿ ತಲುಪಬ ಹುದು.ಇಲ್ಲಿ ದೇವಾಲಯಗಳನ್ನು ನಗರದಲ್ಲಿ ಇರುವ ಕಾರಣ ಸುಲಭವಾಗಿ ತಲುಪಬಹುದು.
✍️ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು