ಭಾವೈಕ್ಯತೆಯ ಬೀಜ ಬಿತ್ತಿ
ಸಾಮರಸ್ಯವ ಮನದಿ ನೆಟ್ಟು
ಸರ್ವಧರ್ಮ ಸಮನ್ವಯತೆಯ ನೇತಾರ.
ಸಕಲ ಧರ್ಮ ಸಾರ ಒಂದೆಂದೆ
ಮಾನವೀಯತೆ ಕೊಂಡಿ ಬೆಸೆದು
ಅಲ್ಲಾ ಅಲ್ಲಮನ ಜೊತೆಗೂಡಿಸಿದೆ.
ಇಲ್ಲ ಸಲ್ಲದ ನೆವವ ಕಳಚಿ
ವ್ಯಕ್ತತ್ವಕೆ ಕನ್ನಡಿಯ ಹಾಗೆ
ಸೌಹಾರ್ದತೆಯ ಹೂವ ಕಂಪು ಸೂಸಿದೆ.
ವಾತ್ಸಲ್ಯಕೆ ಮತ್ತೊಂದು ಹೆಸರಾದೆ
ಮಥ ಪಂಥದ ಹಂಗು ಸರಿಸಿ
ಜೀವ-ಆತ್ಮದ ನಂಟನು ಬೆಸೆದೆ.
ಪ್ರಾಮಾಣಿಕ ಮೂಲತತ್ವದ ತಳಹದಿ
ವಿಕಾರ ಮನಸಿಗೊಂದಿಷ್ಟು ಸಲಹೆ
ಕೇಳುಗರ ಮನ ಪ್ರಫುಲ್ಲತೆಗೆ ಕಾರಣವಾದೆ.
ಭಿನ್ನತೆಯ ಕಳಚಿ ಪ್ರೀತಿಸುವುದರ ಮಹತ್ವದಿ
ವಿಚಾರಧಾರೆಯ ಮನೆ-ಮನಗಳಲಿ ಹರಡಿದೆ.
ಕನ್ನಡ ಕಬೀರನಂತೆ
ಒಳಿತಿಗಾಗಿ ಸಂಕಲ್ಪ ಸಾರಿದೆ
ಓ ದಿವ್ಯಾತ್ಮ ನಿನಗೆ ವಂದನೆ.
ನೀವೆಂದು ಅಜರಾಮರ
ನಿಮ್ಮ ನೆನಪು ಅಮರ
ಸಜ್ಜನಿಕೆಯ ಪ್ರತಿರೂಪಕೆ ವಂದನೆ.
✍️ರೇಷ್ಮಾ ಕಂದಕೂರ
ಸಿಂಧನೂರು
……..ಕಂಡೊಡನೆ ಸೌಹಾರ್ದತೆ-ಮಾತನಾಡಿಸಿದರೆ ಪೂಜ್ಯ ಭಾವ ಮೂಡಿಸುತಿದ್ದ ಒಬ್ಬ
ಮಹಾನ್ ಸಂತ…. such exits diminishes us immeasurably…ಈ ಜಗತ್ತಿಗೆ
ಇನ್ನೋರ್ವ ಇಂತಹ ಸಂತ ಸಿಕ್ಕಾನೆಯೆ….ಕಷ್ಟ…. ಈತ ತೋರಿದ ಮಾನವೀಯ ಅಂತಃ-
-ಕರಣ ರೂಡಿಸಿಕೊಂಡ್ರೆ ಅದಷ್ಟೇ ನಮ್ಮನ್ನೆಲ್ಲಾ ಕಾಪಾಡತ್ತೆ….ಪದ್ಯ ಆತನನ್ನು ಚೆನ್ನಾಗಿ
ಪರಿಚಯಿಸತ್ತೆ….ಕವಯಿತ್ರಿ…. ಪ್ರಕಾಶಕರಿಗೆ ನಮೋನ್ನಮಃ…..🙏🙏🙏🙏🌺🌺🌺
LikeLike