ಸಹಿಸಿ ಬಿಡು ಮನವೇ
ದುಡುಕದಿರು ಮತ್ತೇ.

ದಹಿಸಿ ಬಿಡು ಮನವೇ
ಮದ ಮತ್ಸರಗಳ ಹೀಗೆ.

ದಮನಿಸಿ ಬಿಡು ಮನವೇ
ರಾಗ ದ್ವೇಷಗಳು ಬಗೆಬಗೆ.

ಸಮನ್ವಯಿಸಿ ಬಿಡು ಮನೇ
ಭಿನ್ನತೆಯ ಹಂಗೇಕೆ.

ಧ್ಯಾನಿಸಿ ಬಿಡು ಮನವರಿಕೆ
ಅವಮಾನಿಸಿದವರ ಮುನಿಸೇಕೆ.

ವ್ಯವಹರಿಸಿ ಬಿಡು ಮನವೇ
ಲಾಭದ ನಿರೀಕ್ಷೆಯ ಹುಸಿಗೊಳಿಸಿ.

ಪ್ರಭಾವಿಸು ಮನವೇ
ಸಂಬಂಧಗಳ ಗುನುಗುನಿಸಿ.

ಪೋಷಿಸು ಮನವೇ
ಒಂದೆಂಬ ಹೂಗಳ ಪೋಣಿಸಿ.

ಕಾರ್ಯಮಗ್ನನಾಗಿಸು ಮನವೇ
ಕೀರ್ತಿ ಪತಾಕೆಯ ಬಯಸದೇ.

ಸಂವರ್ಧಿಸು ಮನವೇ
ಹಿಂಜರಿಕೆಯ ಹಿಂದೋಡದೆ.

ಸಂಚಯಿಸು ಮನವೇ
ಸಂಬಂಧಗಳ ಬೆಸೆದು.

ನಿರ್ಮೋಹಿಸು ಮನವೇ
ರೂಪಾದಿಗಳ ಕಡಿದು.

✍️ ರೇಷ್ಮಾ‌ ಕಂದಕೂರ
ಸಿಂಧನೂರ