ಆಸೆಯ ಕಥೆ ಮುಗಿವ ಮುನ್ನವೇ
ನೀನೇಕೆ ಇಟ್ಟೆ ಪೂರ್ಣವಿರಾಮ.
ಬಯಕೆ ತೀರಲಿಲ್ಲ, ಕನಸು ಪೂರ್ಣವಾಗಲಿಲ್ಲ, ಮೋಹದಾಸೆ ಜೊತೆಯಲಿ, ಬೆನ್ಹತ್ತಿ ಬರುತ್ತದೆ
ಬೇತಾಳನಂತೆ ಕ್ಷಣಕ್ಷಣಕ್ಕೂ ಹುಚ್ಚು ಹಿಡಿಸಿದೆ//
ಕನಸಿತ್ತು ಹತ್ತಾರು ಎದೆಯೊಳಗೆ
ಅವಕಾಶ ಮಾತ್ರ ಸೀಮಿತವಾಗಿತ್ತೆನಗೆ
ಕಾಲವು ಕಾಳಸರ್ಪನಂತೆ ಕಾಡುತಲಿತ್ತು.
ಕೊರತೆಯೊಳಗೆ ಕೊರಗುವುದೇಕೆ ಎನ್ನುತ್ತ
ಮನಸ್ಸು, ಒಂದರೆಗಳಿಗೆಯ ಸಂಗಮದೊಳಗೆ ತೃಪ್ತಗೊಂಡಿತ್ತು//
ಈಗೀಗ ಮಾತಿಲ್ಲ ಮನಸ್ಸು ಬಯಕೆ ಬಿಡುತ್ತಿಲ್ಲ!
ಕಾಲಚಕ್ರದಡಿ ಆಸೆ ಸಿಕ್ಕು ನುಚ್ಚುನೂರಾಗಿದೆಯಲ್ಲ!
ನೀನಿಟ್ಟ ವಿದಾಯದ ವಿರಾಮ ಕಾಡುತ್ತಿದೆಯಲ್ಲ.
ಕೇಳಬಯಸುತ್ತಿದೆ ಕಾರಣ ಸಮಾಧಾನವಾಗುತ್ತಿಲ್ಲ!
ಮುಗಿಯವ ಮುನ್ನವೇ ಏಕಿಟ್ಟೆ? ವಿರಾಮ.
✍️ಡಾ.ನವೀನ್ ಕುಮಾರ್ ಎ.ಜಿ(ಅಂಗನ)
ಶಿಕ್ಷಕರು ಹಾಗೂ ಸಾಹಿತಿ
ಯಲ್ಲಾಪುರ
ಭಗ್ನ ಪ್ರೇಮಿಯ ಬಯಕೆ ದೂರ ತೀರವ ಸೇರಿದಂತೆ.ಪ್ರಶ್ನೆಯ ಹೊರತು ಮತ್ತೇನು ಉಳಿದಿಲ್ಲ..ಕವಿತೆ ಚೆನ್ನಾಗಿದೆ ಸಹೋದರ…
LikeLike