ಶಬ್ದಗಾರುಡಿಗ,ವರಕವಿ,ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ದ.ರಾ.ಬೇಂದ್ರೆಯವರ ೧೨೬ ನೇ ಜನ್ಮ ದಿನವನ್ನು ಇಂದು ಡಾ.ದ‌.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್,ಧಾರವಾಡ ಇದರ ವತಿಯಿಂದ ಸಾಧನಕೇರಿ ಯ ಬೇಂದ್ರೆ ಭವನದಲ್ಲಿ ಆಚರಿಸಲಾಗುತ್ತಿದ್ದೆ. ಜನನ: ೩೧/೦೧/೧೮೯೬. ಮರಣ:೨೬/೧೦/೧೯೮೧

ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ತಜ್ಞ ಡಾ.ಸೋಮಶೇಖರ ಇಮ್ರಾಪುರ ಇವರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ತಮ್ಮ ಕಾವ್ಯಗಳಲ್ಲಿ ಜಾನಪದ ಸೊಗಡನ್ನು ತುಂಬಿ ಕಾವ್ಯ ರಚಿಸಿದ ಅಂಬಿಕಾತನಯ ದತ್ತರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮ ಜಾನಪದ ಸಾಹಿತ್ಯದಿಂದ ರಸಿಕರ ಹೃದಯ ಗೆದ್ದಿರುವ ಡಾ.ಸೋಮಶೇಖರ ಇಮ್ರಾಪೂರ ಇವರಿಗೆ ನೀಡುತ್ತಿ ರುವುದು ಹೆಚ್ಚು ಅರ್ಥಪೂರ್ಣವಾಗಿದೆ.

ಡಾ.ಸೋಮಶೇಖರ ಇಮ್ರಾಪೂರ ಇವರ ಜೀವನ ಮತ್ತು ಸಾಹಿತ್ಯ ಕೃಷಿ

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮ ದಲ್ಲಿ ದಿ.೧೪/೨/೧೯೪೦ ರಂದು ಗುರಪ್ಪ ಮತ್ತು ಸಂಗಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ‌ ಮತ್ತು ಪ್ರೌಢಶಿಕ್ಷಣವನ್ನು ಅಬ್ಬಿಗೇರಿ ಹಾಗೂ ಹೊಳೆ ಆಲೂರಿನಲ್ಲಿ ಪೂರೈಸಿದ ಅವರು ಜೆ.ಎಸ್.ಎಸ್.ಕಾಲೇಜಿನಿಂದ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ‌ ಭಾಷಾ ವಿಜ್ಞಾನ)ಪದವಿ ಯನ್ನು ಮತ್ತು ಪಿ.ಎಚ್.ಡಿ ಪದವಿಯನ್ನು(ಜನಪದ ಒಗಟುಗಳು ಪ್ರಬಂಧ) ಸ್ವರ್ಣಪದಕದೊಂದಿಗೆ ಪೂರೈಸಿದರು. ಕೆಲಕಾಲ ಜೆ.ಎಸ್.ಎಸ್.ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಇಮ್ರಾಪೂರ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ,ಜಾನಪದ ಸಂಶೋಧಕರಾಗಿ, ರೀಡರ್ ಆಗಿ, ಸಿಂಡಿಕೇಟ್ ಹಾಗೂ ಸಿನೇಟ್ ಸದಸ್ಯ ರಾಗಿ ಕಾರ್ಯನಿರ್ವಹಿಸಿ ಜಾನಪದ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಡಾ.ಸೋಮಶೇಖರ ಇಮ್ರಾಪೂರ ಇವರಿಗೆ ಅಂಬಿಕಾಯನಯದತ್ತ ರಾಷ್ಟ್ರೀಯ ಪ್ರಾಶಸ್ತಿ ಲಭಿಸಿದ್ದು ಇದಕ್ಕಾಗಿ ಅವರಿಗೆ ಶ್ರಾವಣ ಬಳಗದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಡಾ.ಸೋಮಶೇಖರ ಇಮ್ರಾಪೂರರವರ ಕೃತಿಗಳು

ಕಾವ್ಯಕೃತಿಗಳು

  • ಬಿಸಿಲ ಹೂ
  • ಬೆಳದಿಂಗಳು
  • ಬೆಂಕಿ
  • ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
  • ಬಿರುಗಾಳಿ
  • ಹುತ್ತಗಳು
  • ಬೇವು-ಬೆಲ್ಲ
  • ಚಿತ್ತ-ಚಿತ್ತಾರ

ವಿಮರ್ಶಾ ಕೃತಿಗಳು

  • ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ
  • ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ)

ಜಾನಪದ ಕೃತಿಗಳು

  • ಜಾನಪದ ವಿಜ್ಞಾನ
  • ನಮ್ಮ ಜಾನಪದ ಸಮೀಕ್ಷೆ
  • ಜಾನಪದ ಕಿತ್ತೂರಿನ ಕಿಡಿಗಳು
  • ಜಾನಪದದಲ್ಲಿ ನರಗುಂದ ಬಾಬಾಸಾಹೇಬ
  • ಹಂತಿ,ಗೀಗಿ ಮತ್ತು ಲಾವಣಿ ಸಂಪ್ರದಾಯಗಳು
  • ಜಾನಪದ ವ್ಯಾಸಂಗ
  • ಜನಪದ ಒಗಟುಗಳು (ಮಹಾಪ್ರಬಂಧ)
  • ಜಾನಪದ ಆಲೋಕ

ಸಂಪಾದಿತ ಕೃತಿಗಳು

  • ಮೂವತ್ತಾರು ಮುಖ ಅರವತ್ಮೂರು ಕವನಗಳು
  • ಸಾವಿರದ ಒಗಟಗಳು
  • ಜನಪದ ಮಹಾಭಾರತ
  • ಹನುಮಂತನ ಲಿಂಗಧಾರಣ
  • ಚಿತ್ರಕೇತು
  • ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ
  • ಮಹಿಳಾ ಜಾನಪದ

ಪುರಸ್ಕಾರಗಳು

  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
  • ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮಿನಭಾವಿ ಪ್ರಶಸ್ತಿ
  • ಜಾನಪದ ತಜ್ಞ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ

ಮಾಹಿತಿ ಕೃಪೆ: ವಿಕಿಪಿಡಿಯಾ ಹಾಗೂ ಕಣಜ

✍️ರವಿಶಂಕರ ಗಡಿಯಪ್ಪನವರ