ಇಲ್ಲಿ ಬಿರುಸುಗೊಂಡ ಗಾಯಕೆ ಮದ್ದು ಅರೆಯುವವರಾರು
ಇಲ್ಲಿ ಗಾಜು ಹೊಕ್ಕ ಹೃದಯಕೆ ಮದ್ದು ಅರೆಯುವವರಾರು

ಹೇಳಲೂ ಕೇಳಲೂ ನೂರು ವೇದನೆಗಳ ಸರಕುಂಟು ಆಟ ಮುಗಿವವರೆಗೆ
ಇಲ್ಲಿ ನಿತ್ಯ ಹರಿವ ಸಪ್ತಸಾಗರಕೆ ಮದ್ದು ಅರೆಯುವವರಾರು

ಹಲವು ಜಂಜಡಗಳ ಮಧ್ಯೆ ನಲುಗುವ ನಿತ್ಯ ಪುಷ್ಪವು ಈ ಬಾಳು
ಪಾತಾಳಕೆ ಧುಮುಕುವ ಮನಕೆ‌ ಮದ್ದು ಅರೆಯುವವರಾರು

ಜೋಗಿಯೂ ನೀನಾಗಲಿಲ್ಲ ಯೋಗಿಯೂ ನೀನಾಗಲಿಲ್ಲ
ಇಲ್ಲಿ ನಿತ್ಯ ಹರಿವ ಭವಸಾಗರಕೆ ಮದ್ದು ಅರೆಯುವವರಾರು

ಕದಲದೆ ಕೂಡುವ ಹಾಗೂ ಇಲ್ಲ ಚಲನೆ ಗತಿಶೀಲವೆಲ್ಲ ವ್ಯಾಕುಲದೆಳಗೆಲ್ಲ
ಜಾಲಿ ನಿರ್ಜೀವ ಮಾಡುವ ವಿಷಕೆ ಮದ್ದು ಅರೆಯುವವರಾರು

✍️ವೇಣು ಜಾಲಿಬೆಂಚಿ
ರಾಯಚೂರು.