ಬಂದಿದೆ ಈ ವರ್ಷವೂ ಜನವರಿ ಇಪ್ಪತ್ತಾರು
ಹೊರಟಿದೆ ಮನದೊಳಗೆ ನೆನಪಿನ ತೇರು.
ಶಾಲಾ ಕಾಲೇಜುಗಳಲಿ ಸಂಭ್ರಮಿಸಿದ ಈ ಉತ್ಸವ
ರಾಷ್ಟ್ರಭಕ್ತಿಯ ಮೆರೆವ ಸಂತಸದ ಗಣರಾಜ್ಯೋತ್ಸವ
ಈ ದಿನದಿಂದಾಯ್ತು ಭಾರತ ಸರ್ವತಂತ್ರ ಗಣತಂತ್ರ
ನಮ್ಮದಾಯಿತು ನವ ಸಂವಿಧಾನ ಎಲ್ಲರಿಗೂ ಪ್ರೀತಿಪಾತ್ರ.
ಭಾರತೀಯರು ನಾವು ಎಂಬುವುದೇ ಹೆಮ್ಮೆ
ನಮ್ಮದು ಉದಾತ್ತ ಸಂಸ್ಕೃತಿ ಅನ್ನುವ ಗರಿಮೆ
ವಿಶ್ವದಾದ್ಯಂತ ಪಸರಿಸಲಿ ನಮ್ಮ ಹಿರಿಮೆ
ತಾಯಿನಾಡು ನುಡಿಗಳೆಡೆ ಸದಾ ಇರಲಿ ಒಲುಮೆ.
ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
✍️ಸುಜಾತ ರವೀಶ್,ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು
ಸುಜಾತಾ ರವೀಶ್
LikeLike