ಎಲ್ಲ ಸಮಾಜಗಳಲ್ಲಿ ಮೊದಲಿನಿಂದಲೂ ಬಡವರ, ಕೂಲಿಕಾರರ, ಜೀತದಾಳುಗಳ ಬಗ್ಗೆ ತಾರತಮ್ಯ ಧೋರಣೆ, ಅಸಡ್ಡೆ ಮತ್ತು ಅಪನಂ ಬಿಕೆ ಎದ್ದು ಕಾಣುತ್ತ ಬಂದಿದೆ. ಶ್ರೀಮಂತರಾದ ವರು ದುರ್ಬಲರ ಶ್ರಮವನ್ನಾಗಲಿ, ಅವರ ಪ್ರಾಮಾಣಿ ಕತೆಯನ್ನಾಗಲಿ ಮತ್ತು ಅವರ ಭಾವ ನೆಗಳನ್ನಾ ಗಲಿ ಗೌರವಿಸದೆ, ಅವರ ಪರಿಶ್ರಮ ದಲ್ಲೆ ತಮ್ಮ ಬದುಕನ್ನು ಕಟ್ಟಿಕೊಳ್ಳ ಲು ಪ್ರಯತ್ನಿ ಸುತ್ತಾರೆ.

ಪ್ರಸ್ತುತ ಕೇಶವ ಮಳಗಿ ಗುರುಗಳು ಅನುವಾ ದಿಸಿದ ರಶ್ಯನ್ ಭಾಷೆಯಲ್ಲಿ ಬರೆದಿರುವ ಲಿಯೋ ಟಾಲಸ್ಟಾಯ ಅವರ ‘ಅಲ್ಯೋಶ ದಿ ಪಾಟ್’ ಎಂಬಕತೆಯನ್ನು‘ಕುಡಿಕೆ ಅಲ್ಯೋಶ‘ ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡಕ್ಕೆ ಅನುವಾ ದಿಸಿರುವರಾದರೂ ಅದನ್ನು ಓದುತ್ತಾ ಓದುತ್ತ ಅದು ಅನುವಾದಿತ ಕತೆ ಎಂದು ಅನ್ನಿಸುವುದೆ ಇಲ್ಲ.ಬಹುಶಃ ಟಾಲಸ್ಟಾಯ ಅವರ ಈ ಕತೆಯ ನ್ನು ಓದದ ವರ ಕೈಯಲ್ಲಿ ಕೊಟ್ಟರೆ ಕೇಶವ ಮಳಗಿ ಗುರುಗಳ ಈ ಕತೆ ಅನುವಾದಿತ ಕತೆ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟು ಸಹಜ ವಾಗಿ ಕತೆಯನ್ನು ಅನುವಾದಿಸಿರುವುದು ಮಳಗಿ ಗುರುಗಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ ಯಾಗಿದೆ.

ಕತೆಯ ನಾಯಕ ಅಲ್ಯೋಶ ಒರ್ವ ಅತ್ಯಂತ ಮುಗ್ಧ ಮತ್ತು ಪ್ರಾಮಾಣಿಕ ಹುಡುಗ. ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಹೊಣೆಗಾರಿಕೆ ಯನ್ನು ತಂದೆಯಿಂದ ಪಡೆದುಕೊಂಡವ ನಾಗಿದ್ದ. ಬದುಕನ್ನು ಬಂದಂತೆ ಸ್ವೀಕರಿಸುವ ಗುಣವುಳ್ಳವ ನಾಗಿದ್ದ. ಹತ್ತೊಂಬತ್ತನೇ ವಯಸ್ಸಿಗೆ ಬಂದಾಗ ಅಲ್ಯೋಶ, ತನ್ನ ಅಣ್ಣ ಜೀತದಾಳಾಗಿ ದುಡಿಯು ತ್ತಿದ್ದ ಕೆಲಸಕ್ಕೆ ಸೇರಬೇಕಾಗುತ್ತದೆ. ಆದರೆ ಅದ್ಯಾವುದರ ಬಗ್ಗೆ ಅನ್ಯಥಾ ಯೋಚಿಸದ ಅಲ್ಯೋಶ ಅತ್ಯಂತ ಪ್ರಾಮಾಣಿಕ ಮತ್ತು ಪರಿಶುದ್ಧ ಮನಸ್ಸಿನಿಂದ ಕೆಲಸ ಮಾಡುತ್ತಿದ್ದರೂ ಆ ವ್ಯಾಪಾರಿ ಮಾತ್ರ ಇವನ ಮೇಲೆ ಅಪನಂಬಿಕೆ ಯ ದೃಷ್ಟಿಯನ್ನು ಇಟ್ಟಿರುತ್ತಿದ್ದ. ಅಂಥ ಸಂದರ್ಭ ದಲ್ಲಿ ವ್ಯಾಪಾರಿ ಮನೆಯ ಅಡುಗೆ ಕೆಲಸದವ ಳೊಂದಿಗೆ ಸಲುಗೆ ಬೆಳೆದು ಅವಳಿಂದಲೆ ಪರಸ್ಪರ ಮದುವೆ ಮಾಡಿಕೊಳ್ಳಲು ನಿರ್ಧರಿಸುವುದು ಕೂಡ ಅವನ ಯಾವುದೆ ವಾಂಛೆಗೆ ಸಂಬಂಧ ಪಟ್ಟದ್ದಾಗಿರುವುದಿಲ್ಲ. ಅವನು ಯಾವುದಕ್ಕೂ ಜೋತು ಬಿದ್ದವನಲ್ಲ. ಯಾವುದರ ಬಗೆಗೂ ಆಸೆಪಟ್ಟವನೂ ಅಲ್ಲ. ತಾನಾಯಿತು ತನ್ನ ಕೆಲಸ ವಾಯಿತು ಎಂದುಕೊಂಡು ಬದುಕು ನಡೆಸಿದಂತೆ ನಡೆಯುವ ಸ್ವಭಾವದವನಾಗಿದ್ದ. ಒಂದು ದಿನ ಅಲ್ಯೋಶ ಮತ್ತು ಉತ್ಸಿನ್ಯ ಪರಸ್ಪರ ಮದುವೆ ಯಾಗುವ ವಿಷಯವನ್ನು ವ್ಯಾಪಾರಿಯ ಹೆಂಡತಿ ತನ್ನ ಸ್ವಾರ್ಥಕ್ಕಾಗಿ ತಡೆ ಯುವಂತೆ ತನ್ನ ಗಂಡನಿಗೆ ಹೇಳಿ, ವ್ಯಾಪಾರಿ ಅಲ್ಯೋಶನ ತಂದೆಗೆ ಕೆಟ್ಟದಾಗಿ ಹೇಳಿದಾಗ, ಅದರಿಂದ ತನ್ನ ತಂದೆ ಯಿಂದ ಬೈಸಿಕೊಂಡ ಅಲ್ಯೋಶ ಮರುಮಾತ ನಾಡದೆ ತನ್ನ ಕೆಲಸ ದಲ್ಲಿ ನಿರತನಾಗಿದ್ದ. ಆದರೆ ಅದೊಂದು ದಿನ ಮನೆಯ ಮೇಲಿನ ಹಿಮವನ್ನು ತೆಗೆಯುತ್ತಿರ ಬೇಕಾದರೆ ನಿಷ್ಕಲ್ಮಷ ಹೃದಯದವ ನಾದ ಅಲ್ಯೋಶನ ಮನಸ್ಸಿನಲ್ಲಿ ಉತ್ಸಿನ್ಯಳ ನೆನಪು ಮೂಡಿ ಅವನು ಜಾರಿ ಮೇಲಿಂದ ಬಿದ್ದಿರಬಹು ದೆನೋ ಎಂಬ ಭಾವ ಅವನು ಕೊನೆಗೆ ಉತ್ಸಿನ್ಯಳೊಂದಿಗೆ ಮಾತನಾಡುತ್ತ ಪದೆ ಪದೆ ನೀರನ್ನು ಕುಡಿಯುತ್ತಾ, ಯಾವುದರ ಕುರಿತೋ ಮನಸ್ಸಿನಲ್ಲಿ ಸೆಳೆತವನ್ನಿಟ್ಟುಕೊಂಡು ಕೊರಗು ತ್ತ ಮೌನವಾಗಿ ದೇವರಲ್ಲಿ ಪ್ರಾರ್ಥಸುತ್ತ ಒಳಗೊಳಗೆ ರೋಧಿಸುತ್ತ ಅಸುನೀಗುವುದು ಓದುಗರಲ್ಲಿ ಮೌನ ಆಕ್ರೋಶವನ್ನುಂಟು ಮಾಡುತ್ತದೆ.

ಕತೆಯಲ್ಲಿ ಬರುವ ನಾಯಕ ಅಲ್ಯೋಶ ಒಬ್ಬ ದುರಂತ ನಾಯಕ.ಅವನು ಮುಗ್ಧ,ಶ್ರಮಜೀವಿ ಯಾಗಿದ್ದ. ಅವನಿಗೂ ಭಾವನೆಗಳಿರುತ್ತವೆ ಎಂಬುದನ್ನು ತಂದೆಯಾದವನಾದರೂ ಅರಿತು ಕೊಳ್ಳಬೇ ಕಾಗಿತ್ತು. ಆದರೆ ಹಾಗೆ ಆಗದೆ ಅದು ಅವನ ದುರಂತಕ್ಕೆ ಕಾರಣವಾಗುತ್ತದೆ. ಮನುಷ್ಯ ನ ಮುಗ್ಧತೆ, ನಿಷ್ಕಲ್ಮಷ ಗುಣ ಅವನನ್ನು ದುರಂತಕ್ಕೆ ಈಡುಮಾಡುತ್ತದೆ ಎಂಬುದು ಕತೆಯ ಜೀವಾಳವಾಗಿದೆ. ಕೌಟಿಲ್ಯ ಹೇಳಿದಂತೆ,
‘ಯಾರೂ ಅಂಕುಡೊಂಕಾಡ ಮರಗಳನ್ನು ಕಡಿಯುವುದಿಲ್ಲ. ಎಲ್ಲರ ಕಣ್ಣು ನೆಟ್ಟಗೆ ಬೆಳೆದ ಮರಗಳ ಮೇಲೆಯೇ ಇರುತ್ತದೆ’
ಎನ್ನುವ ಹಾಗೆ ಅಲ್ಯೋಶನ ಮುಗ್ಧ ಸ್ವಭಾವವೆ ಅವನಿಗೆ ಮುಳುವಾಗುತ್ತದೆ.ರಶಿಯಾದ ಸಾಮಾಜಿಕ ಮೌಲ್ಯಗಳ ಹಿನ್ನಲೆಯಲ್ಲಿ ಮೂಲ ಕತೆ ನಿರ್ಮಾಣವಾಗಿದ್ದು,ಅದರಲ್ಲಿ ಬಂಡವಾಳ ಶಾಹಿ ಪ್ರಭುತ್ವದ ದರ್ಪ ಮತ್ತು ಕಾರ್ಮಿಕರು ಅದರ ವಿರುದ್ಧ ಧ್ವನಿ ಎತ್ತದ ಕೇವಲ ದುಡಿಮೆ ಯ ಲಗಾಮಿನಲ್ಲಿಯೆ ಜೀವನ ಸವೆಸುತ್ತ ತಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಒಳ ಗೊಳಗೆ ತಣ್ಣಗೆ ಕೊರಗುತ್ತ ಮೌನವಾಗುವ ಈ ಕತೆ ಭಾರತೀಯ ಸಮಾಜಕ್ಕೂ ಕಾಲಕಾಲಕ್ಕೆ ಪ್ರಸ್ತುತವೆನಿಸುವಂತಹದ್ದಾಗಿದೆ. ಕಾರಣ ಟಾಲ್ ಸ್ಟಾಯ್ ಅವರ ಬಹುತೇಕ ಸಾಹಿತ್ಯ ನಮ್ಮ ಭಾರತೀಯ ಸಮಾಜದ ಮೇಲೆ ಬೆಳಕು ಬೀರುವಂತಹುದೆ ಆಗಿದೆ.

ಒಟ್ಟಾರೆಯಾಗಿ ಈ ಕತೆ ಸಮಾಜದಲ್ಲಿನ ಉಳ್ಳ ವರಿಗೆ, ಪ್ರಜೆಗಳನ್ನು ಕಡೆಗಣಿಸುವ ಸರ್ಕಾರ ಗಳಿಗೆ, ಆಡಳಿತ ವರ್ಗಕ್ಕೆ ಇದೊಂದು ಮೌನ ಪ್ರತಿಭಟನೆ ಎಂಬುದನ್ನು ತಮ್ಮ ಅನುವಾದಿತ ಕತೆಯ ಮೂಲಕ ಕೇಶವ ಮಳಗಿ ಗುರುಗಳು ಸಾಬೀತು ಮಾಡಿದ್ದಾರೆ, ಓದುಗರ ಹೃದಯವನ್ನು ತಟ್ಟಿದ್ದಾರೆ.

ಆದ್ದರಿಂದ ಇಂಥ ಚಿಂತನಾರ್ಹ ಕತೆಯನ್ನು ಓದಿಸಿ ಚಿಂತನೆಗೆ ಹಚ್ಚಿದ ಕೇಶವ ಮಳಗಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು.
✍️ಸುರೇಶ ಮದ್ದಾರ
ಮದವಾಲ
ತಾ:ಗೋಕಾಕ ಜಿ:ಬೆಳಗಾವಿ