ರಂಗ ಸಂಘಟನೆ ಅದೂ ಇತ್ತೀಚಿನ ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚು ಸವಾಲುಗ ಳನ್ನು ಎಸೆಯುತ್ತಿದೆ. ಇಲ್ಲಿ ರಂಗ ಸಂಘಟನೆ ಅಂದರೆ ವಿಶಾಲ ಅರ್ಥದಲ್ಲಿ ಎಲ್ಲ ಪ್ರದರ್ಶಕ ಕಲೆ ಗಳಿಗೆ ಅಂತ ಅರ್ಥ ಮಾಡಿಕೊಂಡರೆ, ಅದು ಬೇರೆ ಬೇರೆಯಾಗಿ ಕಾಣುತ್ತದೆ. ಉದಾಹರಣೆಗೆ ಸಂಗೀತ ಕಾರ್ಯಕ್ರಮ ಮತ್ತು ನಾಟಕ ಕಾರ್ಯ ಕ್ರಮ ಎರಡರಲ್ಲಿ ಭಿನ್ನತೆ ಇದೆ, ಮಡಿವಂತಿಕೆ ಇದೆ, ಅಷ್ಟೇ ಅಲ್ಲ ಭಾವನಾತ್ಮಕ ಸಂಬಂಧಗಳ ಭಿನ್ನತೆ, ಹಾಗೂ ಸಾಮಾಜಿಕ ಪ್ರತಿಷ್ಠೆಗಳಲ್ಲಿ ತಾರತಮ್ಯತೆ, ಗುಣಮಟ್ಟದ ಆತಿಥ್ಯದ ಅಪೇಕ್ಷೆ ಗಳು, ಗೌರವಧನ ಭಿನ್ನತೆ, ಕಲಾವಿದರ ಇಗೋ, ನಾನು ಅನ್ನುವ ಭಾವ ಗಳು, ರಂಗಮಂದಿರ ಸೌಲಭ್ಯಗಳು, ವೇದಿಕೆ ಮೇಲಿನ ಪರಿಕರಗಳು, ಪ್ರಚಾರ ಅವಕಾಶ ಗಳು ಹಾಗೂ ಹೀರೊ- ಹೀರೋಯಿನ್ ಗಳ ವೈರುಧ್ಯಗಳು ಹೀಗೆ ನೂರೆಂಟು ಅಂತರಗಳ ನ್ನು ನಾವು ಗಮನಿಸಬ ಹುದಾಗಿದೆ. ಇವೆಲ್ಲವೂ ಸಂಘಟನೆಯ ಕೆಲಸ ದಲ್ಲಿ ಪ್ರಭಾವ ಬೀರುತ್ತವೆ. ಸಂಘಟಕ ಸಂಸ್ಥೆ ಅಥವಾ ಅದರ ಹಿಂದಿರುವರ ಸಾಮರ್ಥ್ಯ ಮತ್ತು ಕಪ್ಪನ್ನ ಬಿಳಿ ಮಾಡುವ ಹುನ್ನಾರಗಳು, ಆ ಸನ್ನಿ ವೇಶ, ಸಂದರ್ಭ ಮತ್ತು ಅದರಲ್ಲಿ ದುಡಿದುಕೊ ಳ್ಳಬಹುದಾದ ಎಲ್ಲ ಅವಕಾಶಗಳ ಉಪಯೋಗ ಅಥವಾ ದುರುಪಯೋಗ ಮಾಡಿಕೊಳ್ಳುವ ಭಾವಗಳು ಎಲ್ಲವೂ ಒಂದು ರೀತಿಯಿಂದ ಸಾಮರ್ಥ್ಯ ಮತ್ತು ದೌರ್ಬಲ್ಯ ಗಳೂ ಹೌದು.

ಇನ್ನು ಇವೆಲ್ಲವುಗಳ ಹಿಂದಿರಬಹುದಾದ ಪ್ರಾಯೋಜಕತ್ವದ ಸಂಪನ್ಮೂಲಗಳು. ಕಾರ್ಪೊ ರೇಟ್ ಸಾಮಾಜಿಕ ಜವಾಬ್ದಾರಿ ಅನ್ನುವ ಸುಂದರ ಆಕರ್ಷಕ ಅವಕಾಶ ಎಂಥ ವಿಶ್ವಾಮಿ ತ್ರರ ತಪಸ್ಸನ್ನು ಭಂಗ ಮಾಡುವ ಮೇನಕೆ ಇದ್ದಂತೆ. ಈ ಅವಕಾಶ ಎಲ್ಲರಿಗೂ ಸುಲಭವಾಗಿ ಸಿಗುವಂಥದ್ದು ಅಲ್ಲ. ಅದಕ್ಕೆ ಕೇಳುವವನಿಗೆ, ಹೇಳುವವನಿಗೆ ಸ್ಥಾನ, ಕೆಲವು ದುಷ್ಟ ಮತ್ತು ಶಿಷ್ಟ ಶಕ್ತಿಗಳು ಮತ್ತು ಏನಾದ ರೂ ಒಳ್ಳೆಯದನ್ನು ಮಾಡಬೇಕು ಅನ್ನುವ ಹಂಬಲ ಇರಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾಗಿ ದುಡಿ ಯುವ ಜನ ಇರಬೇಕು ಯಾರದೋ ರೊಕ್ಕಾ ಎಲ್ಲಮ್ಮನ ಜಾತ್ರಿ ಅಂತಾರಲ್ಲ ಹಂಗ.

ಎಲ್ಲಮ್ಮನ ಜಾತ್ರಿ ಅಂದಕೂಡಲೇ ಚುನಾವಣೆ ನೆನಪು ಬರ್ತಾವ ಆಗ ಯಾರ್ಯಾರು ರಾಜಕಾರ ಣಿಗಳು ಸಹಾಯ ಮಾಡಿರತಾರಲ್ಲಾ ಅವರೆಲ್ಲ ಈ ಕಾರ್ಪೊರೇಟ್ ತಿರುಗಾಟ ಆಪೇಕ್ಷಿಸಿದರ ಆಶ್ಚರ್ಯ ಪಡಬೇಕಾಗಿಲ್ಲ. ಋಣ ಅನ್ನೋದರ ಅರ್ಥ ಅರ್ಥ ಆಗಲಿಕ್ಕೆ ಸುರು ಆಗ್ತದ. ಗೊತ್ತಿಲ್ಲದೆ, ಅನಿವಾರ್ಯವಾಗಿ ಹಾಸಿಗೆ ಹಾಸಿ ಹಸನ್ಮುಖಿ ಆದರಾದೇನು ಅದರಾಗ ಏನೂ ತಪ್ಪು ಇಲ್ಲ, ಸರಿನೂ ಇಲ್ಲ ಅಂತ ಹೆಂಗ ಹೇಳೋದು. ಇಲ್ಲೇ ಇನ್ನೊಂದು ವಿಷಯ ಬರೋದು. ಅದು conflict ಆಫ್ ಇಂಟೆರೆಸ್ಟ್ ಅಂದರ ಆಸಕ್ತಿ ಗಳ ಘರ್ಷಣೆ. ಯಾವಾದ ರಾಗ ಹೆಚ್ಚು ಆಕರ್ಷಣೆ ಇರತದೋ ಅದರಾಗ ಕೆಲಸಾ ಮಾಡೋದು ಜಾಸ್ತಿ, ಒಂದು ಕಡೆ ಜಾಸ್ತಿ ಇನ್ನೊಂದು ಕಡೆ ಕಡಿಮಿ ಮಾಡಸ್ತ ದ. ಇದೊಂದು ತರಹಾ ಮಲತಾಯಿಯ ಧೋರಣೆ, ಯಾವಾದರ ಒಂದು ಬಡವಾಗೋ ದು ತಪ್ಪುವು ದಿಲ್ಲ. ಇದು ಸಂಘಟನೆ ದೃಷ್ಟಿ ಯಿಂದ ಮುಖ್ಯವಾಗ್ತದ.

ಸಂಘಟನೆ ಒಳಗ ಇರೋವರು ಆದಷ್ಟು ಒಂದಕ್ಕನ ಮಿಸಲಾಗಿದ್ದರ ಒಳ್ಳೆಯದು. ಒಂದ ಸಂಘಟನಾಕ ರೊಕ್ಕಾ ಎತ್ತೋದು, ಕುಡಿಸೋ ದು, ಜಮಾ ಮಾಡೋದು ಇದ್ದರೆ ಒಳ್ಳೆಯದು ಇಲ್ಲಾಂದ್ರೆ ಕೇಳುವರಿಂದ ಹಿಡಿದು ತಗೊಳ್ಳುವ ವರೆಗೆ, ಎಲ್ಲರಿಗೂ ಮುಜುಗುರ ಯಾಕಂದ್ರ ಆಮ್ಯಾಲ ಅಲ್ಲಿಯೂ ತಾರತಮ್ಯ ಪ್ರಾಶಸ್ತ ನಿಡೋದು ಸುರು ಆಗ್ತದ. ಕೆಲವರಿಗೆ ಕೇಳುವ ಕಲಾ, ಹೇಳುವ ಕಲಾ ಮತ್ತು ಅವರ ವ್ಯಕ್ತಿತ್ವ ಅವಲಂಬಿಸಿರ್ತದ. ಆಕಸ್ಮಿಕವಾಗಿ ಅಂವಾ ಒಳ್ಳೆಯ ನಟಾ ಆಗಿದ್ದರೆ ಹವ್ಯಾಸಿ ರಂಗದಾಗ ಅವನಗತಿ ಮುಗಿದೇ ಹೋತು.ಸಾವಕಾಶವಾಗಿ ಅವನ ಭಿಕ್ಷೆ ಬೇಡುವ ಕೌಶಲ್ಯ ಹೆಚ್ಚಾಗಿ ಸಾವ ಕಾಶವಾಗಿಯೇ ಅವನ ನಟನೆಯ ಕೊಲೆ ನೇಪಥ್ಯದಲ್ಲಿ ನಡೆದು ಹೋಗುತ್ತದೆ.

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ