ಮನೆಯಂಗಳದಲ್ಲಿ ಆಗತಾನೆ ಕುಡಿಯೊಡೆದು ಚಿಗುರಿದ ಕುಸುಮವೊಂದು ತಂಗಾಳಿ ಬೀಸಿ ದಂಗೆ ಓಲಾಡುತ್ತ ಕಣ್ಣಂಚಿಗೆ ಹೊಸ ಲೋಕ ಸೃಷ್ಟಿಸಿದಂತೆ ಬಳಕುತ್ತಿತ್ತು.ಅಬ್ಬಾ! ಎಂಥ ಚೆಂದ! ಮೊನ್ನೆ ಮೊನ್ನೆಯಷ್ಟೇ ಹಚ್ಚಿದ್ದ ಗಿಡ ಬದುಕು ವುದಿಲ್ಲವೆಂದು ತಿಳಿದಿದ್ದೆ.ಅದರೆಡೆಗೆ ಗಮನಿಸು ವುದನ್ನು ಬಿಟ್ಟಿದ್ದೆ.ಆದ್ರೆ ಇಂದು ಅದರ ತಿಳಿ ಗಂಪಿನ ಮೃದುವಾದ ಪಕಳೆಗಳು ರೇಷ್ಮೆಯ ಹೊಳಪು ಹೊತ್ತು ಮನಗೆದ್ದಿದ್ದವು. ಅಧ್ಬುತ ಸೌಂದರ್ಯ ಪ್ರಜ್ಞೆಯ ಕಣಜವಿ ಪ್ರಕೃತಿಯೆಂಬು ದನ್ನು ಎಲ್ಲರು ಒಪ್ಪಲೇ ಬೇಕು. ಇದುವರೆಗೂ ಇದನ್ನು ಬೇಧಿಸಲು ಯಾರಿಗೂ ಆಗಿಲ್ಲ…. ಅಮ್ಮಾ ಸಂಕ್ರಾಂತಿಯ ಹಬ್ಬದ ಕುರಿತು ನಿನಗೆ ಗೊತ್ತಾ? ಆಶ್ಚರ್ಯ ಯಾಕೆ ಹಾಗೆ ಕೇಳತಿಯಾ? ಗೊತ್ತಿದ್ದರೆ ಹೇಳಮ್ಮಾ ಅಷ್ಟು ವಿಶೇಷವಾಗಿ ಆಚರಿಸಲು ಕಾರಣ?

ನಿಜ ಮಗಳೇ ಹಬ್ಬಗಳು ವ್ಯಕ್ತಿ ವ್ಯವಸ್ಥೆಯ ಸಮಾಜದ ಪರಂಪರೆಗೆ ಹಿಡಿದ ಕನ್ನಡಿ.ಇವು ಗಳ ಮೂಲ ಉದ್ದೇಶ ಅರಿತು ಆಚರಿಸುವಷ್ಟು ತಾಳ್ಮೆ ನಮ್ಮಲ್ಲಿರಬೇಕು.ಹಬ್ಬಕ್ಕೊಂದು ಜೋಡಿ ಹೊಸ ಬಟ್ಟೆಯನ್ನು ಧರಿಸಿ ಹಬ್ಬದೂಟ ಮಾಡಿ ಸಂಭ್ರ ಮಿಸುವ ಕ್ಷಣವಾಗಿದೆ. ಸಂಕ್ರಾಂತಿ ಹಬ್ಬ ಕೇವಲ ನಮಗಷ್ಟೇ ಅಲ್ಲ ನಮ್ಮನ್ನು ಅವಲಂಬಿಸಿ ನಮ್ಮೊಡನೆ ಹಗಲು ರಾತ್ರಿ ಜೊತೆಯಾಗಿ ಕೃಷಿಯ ಆಧಾರ ಸ್ತಂಭವಾದ, ದನಕರುಗಳಿಗೆ ಶೃಂಗಾರ ಮಾಡಿ ನಲಿವಂತ ಸುಸಮಯ.ಋತುಮಾನಗ ಳಿಗೆ ಅನುಗುಣ ವಾಗಿ ಬದಲಾಗುತ್ತಿರುವ ವಾತಾವರಣಕ್ಕೆ ಹೊಂದಿಕೊಳ್ಳುವ ಮನಸ್ಸು ಮಾಗುತ್ತಿರುವುದು ಸಂಕ್ರಾಂತಿಯ ವಿಶೇಷ.

ಅದರಲ್ಲೂ ಸಂಕ್ರಾತಿಯ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪವಾಗಿ ಸಂಚರಿಸಲು ಪ್ರಾರಂಭಿಸುತ್ತಾನೆ. ಹೀಗಾಗಿ ಇನ್ನು ಮೇಲೆ ಹಗಲು ದೀರ್ಘಾವಾಗು ತ್ತದೆ, ರಾತ್ರಿ ಕಡಿಮೆಯಾಗು ತ್ತದೆ. ಇನ್ನೊಂದು ವಿಶೇಷ ವೆಂದರೆ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯು ತ್ತದೆ ಎಂಬ ನಂಬಿಕೆಯಿದೆ. ಪೂರ್ವಜರು ಮಾಡಿದ ಎಲ್ಲ ಆಚರಣೆಗೆ ಒಂದೊಂದು ಮಹತ್ವ ವಿದೆ.

ಅಮ್ಮಾ….ಸಂಕ್ರಾಂತಿಗೆ ಎಳ್ಳು, ಬೆಲ್ಲ, ಹುರಿ ಗಡಲೆ, ಕೊಬ್ಬರಿಯ ಮಿಶ್ರಣವನ್ನು ಕೊಡಲು ಕಾರಣ ವೇನಮ್ಮ ಅವಳ ಮುಗ್ದ ಪ್ರಶ್ನೆಗೆ.ಜ್ಞಾನ ವಿಜ್ಞಾನಗಳ ಸಮ್ಮಿಲನ.ಅವಳ ಕುತೂಹಲಕ್ಕೆ ಖುಷಿಯಾ ಯಿತು.ನಾನು ನನ್ನಮ್ಮನನ್ನು ಕಾಡಿದ್ದು ನೆನಪಾ ಯಿತು.ಚಳಿಗಾಲದ ಅವಧಿ ಯಲ್ಲಿ ಚರ್ಮ ಒಡೆ ಯುವುದು ಸಾಮಾನ್ಯ, ಆ ಸಂದರ್ಭದಲ್ಲಿ ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಯಾಗಿರುವುದು ಇದಕ್ಕೆಲ್ಲ ಕಾರಣ. ಪುನಃ ಚರ್ಮದ ಹೊಳಪು ಮರಳಿಸಲು ಕಡಿಮೆಯಾದ ಕೊಬ್ಬಿನಾಂಶ ದೇಹಕ್ಕೆ ಲಭ್ಯ ವಾಗಲೆಂದು ಎಳ್ಳು, ಬೆಲ್ಲ,ಶೇಂಗಾಬೀಜಗಳ ಮಿಶ್ರಣವನ್ನು ಆ ನೆವ ದಿಂದ ತಿನ್ನಲು ಕೊಡು ತ್ತಾರೆಂಬ ಪ್ರತೀತಿ ಇದೆ ಮಗಾ ಎಲ್ಲವೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಹಬ್ಬಗಳು ಆಚರಿಸ ಲ್ಪಡುವವೆಂಬುದನ್ನು ಅರಿಬೇಕು.

ಅಮ್ಮಾ…ದನಕುಗಳಿಗೆ ಯಾಕೆ ಸಿಂಗಾರ ಮಾಡು ವರು? ನಾನಂತೂ ನೋಡಿಲ್ಲ. ಟಿವಿಯಲ್ಲಿ ನೋಡಿದ್ದೆ.ಧಾನ್ಯಗಳ ಪೂಜೆ ಮಾಡುತ್ತಾರಲ್ಲ ಯಾಕೆ? ಒಮ್ಮೆ ಒಂದು ಪ್ರಶ್ನೆ ಸಾಕೆನಿಸಿತ್ತು.ಆತ ಬಿಡವ್ವಾ ಆಮೇಲೆ ಹೇಳತಿನಿ ಎಳ್ಳು ಬೆಲ್ಲ ಮಿಶ್ರಣ ಮಾಡಿಕೊಡತಿನಿ ತಾಳೆ ಬಂಗಾರಿ ಎಂದರೂ ಸೆರಗ ಹಿಡಿದು ಇಲ್ಲ ಹೇಳಿಗ‌‌…ಯಾಕಂತ? ಸರಿ ಕಣೇ ಹೇಳತಿನಿ ಬಾ ವರ್ಷವಿಡಿ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಜೀವಿ ಯೆಂದರೆ ದನಕರುಗಳು. ಅಲ್ಲದೆ ವರ್ಷದ ಕೊನೆಯಲ್ಲಿ ರೈತನ ಮೊಗ ದಲ್ಲಿ ಸಂತಸದ ನಿಟ್ಟುಸಿರು ಬರುವುದು ಕಷ್ಟ ಪಟ್ಟು ಬೆಳೆ ಕಣ್ಮುಂದೆ ರಾಶಿಯಾಗಿ ಒಂದುಗೂ ಡಿಸಿದಾಗ ಫಸಲು ಫಲವಾಗಿ ರಾಶಿಯಾದಾಗ ಹಸಿವನ್ನು ನೀಗಿಸಲು ಭೂತಾಯಿ ಅನ್ನ ನೀಡಿದ ಸುಂದರ ಗಳಿಗೆಯಿದು.ಹೀಗಾಗಿ ಪ್ರಕೃತಿಯ ನಮಿಸುವುದು ಬಹುಮುಖ್ಯ.

ದನಕರುಗಳಿಗೆ ಮೈತೊಳೆದು ಕೊರಳಿಗೆ ಗೆಜ್ಜೆ ಕಟ್ಟಿ, ಕೊಂಬಿಗೆ ಬಣ್ಣ ಬಳಿದು,ರಿಬ್ಬನ್ ಕಟ್ಟಿ ಹೂ ಮುಡಿಸಿ, ಬಲೂನಗಳಿಂದ ಶೃಂಗರಿಸಿ ಮೆರವ ಣಿಗೆ ಮಾಡಿಸಿ.. ಕಿಚ್ಚು ಹಾಯಿಸುವು ದರ ಉದ್ದೇಶ ಹೊಲದ ಕೆಲಸ ಮುಗಿದ ಮೇಲೆ ವಿಶ್ರಾಂತಿ ಪಡೆದ ದನಕರುಗಳ ಮೈಯಲ್ಲಿ ಚಿಕ್ಕಾಡಿ,ಜಗಣೆಯಂತ ಕ್ರಿಮಿಕೀಟಗಳು ಸೇರಿ ಕೊಂಡು ಅವುಗಳಿಗೆ ಕಾಟ ಕೊಡುತ್ತಿರುತ್ತವೆ. ಅದನ್ನು ತೊಲಗಿಸಲು ಬೆಂಕಿ ಹಾಯಿಸಿದಾಗ ಕ್ರೀಮಿಗಳು ಬೆಂಕಿಗೆ ಆಹುತಿಯಾಗಿ, ದನಕರು ಗಳು ಆರೋಗ್ಯದಿಂದ ಇರಲು ಸಹಾಯ ಮಾಡು ತ್ತದೆ ಪುಟ್ಟ.

ಯಾವಾಗಲೂ ಸಂಕ್ರಾಂತಿಯ ಸಂಭ್ರಮದಲ್ಲಿ ಎಳ್ಳು ಬೆಲ್ಲ ಪರಸ್ಪರ ಹಂಚುತ್ತಾ…ದ್ವೇಷ ಅಸೂಯೆಗಳನ್ನು ದೂರತಳ್ಳಿ,ಕೆಟ್ಟ ಮಾತು ಗಳನ್ನು ಆಡದೆಒಬ್ಬರಿಗೊಬ್ಬರು ಸಿಹಿಯನ್ನು ಹಂಚಿ ಒಳ್ಳೊಳ್ಳೆಯ ಮಾತುಗಳನ್ನು ಆಡುತ್ತೆ ವೆಂದು ಪ್ರಮಾಣ ಮಾಡವುದು ಪರಂಪರೆ. ಸಹ ಬಾಳ್ವೆಯಿಂದ ಇರುವಂತೆ ಪಣತೊಡಲು ಈ ಹಬ್ಬ ಸಹಾಯಕವಾಗಿದೆ.ಹಬ್ಬಗಳು ಮೌಲ್ಯ ವನ್ನು ಕಳೆದುಕೊಳ್ಳುತ್ತಿವೆ.ಆಡಂಬರದ ಆಚರ ಣೆಗೆ ಒಳಗಾಗಿ ನೈಜತೆಗೆ ಮಾರಕವಾಗು ವಂತಹ ದಿನಗಳು ಬರದಂತೆ ಪ್ರತಿ ಕುಟುಂಬದ ಸದಸ್ಯರು ಕಾಯ್ದುಕೊಳ್ಳುವುದು ಅನಿವಾರ್ಯ. ಹಬ್ಬಗ ಳಲ್ಲಿ ಹಿರಿಕಿರಿಯರು ಬೆರೆತಾಗ ಅದೊಂದು ಸಂಭ್ರಮ. ನನ್ನಮ್ಮ ನಾ ಹೇಳಿದ್ದು ಸ್ವಲ್ಪವಾ ದರೂ ನೀನು ಇಷ್ಟೊಂದು ತಿಳದು ಕೊಂಡು ಮಗಳಿಗೆ ಹೇಳಿದಿ ಯಲ್ಲ, ಮೊಮ್ಮಗಳು ಅಜ್ಜ ಅಜ್ಜಿ ಯರಿಗೆ ಎಳ್ಳು ಬೆಲ್ಲ ನೀಡಿ ಆಶೀರ್ವಾದ ಪಡೆ ದಾಗ ಅವರ ಮುಖ ದಲ್ಲಿ ಹೆಮ್ಮೆ ಕಾಣುತ್ತಿತ್ತು.

ಹಬ್ಬಗಳು ಬಾಂಧವ್ಯದ ಮೆರಗನ್ನು ಹೆಚ್ಚಿಸುವ ಸಾಧನಗಳು.ಸಂಸ್ಕೃತಿ,ಸಂಪ್ರದಾಯ, ಪ್ರೀತಿ, ನಂಬಿಕೆ, ವಿಶ್ವಾಸ ಜೊತೆಯಾಗಬೇಕು ಅಂದಾಗ ಮಾತ್ರ ಹಬ್ಬಕ್ಕೊಂದು ಬೆಲೆ. ಅಜ್ಜ ಅಜ್ಜಿಯರ ಪ್ರೇಮ,ವಿಭಕ್ತ ಕುಟುಂಬಗಳಲ್ಲಿ ಲಭಿಸುವುದು ದುರ್ಲಭ. ದೊರೆತರೆ ಪುಣ್ಯವೇ ಸರಿ.ಎಳ್ಳು ಬೆಲ್ಲ ಕಡಲೆ ಬೆರೆತ ಮಿಶ್ರಣವನ್ನು ಪುಟ್ಟ ಡಬ್ಬಿಗೆ ಹಾಕಿ ಕೈ ಗಿಟ್ಟೆ.ಅಜ್ಜಿ ಕೊಟ್ಟ ಹತ್ತರ ನೋಟನ್ನು ಡಬ್ಬ ದಲ್ಲಿ ಹಾಕುತ್ತಾ, ಅಮ್ಮಾ ಅಕ್ಕಪಕ್ಕದ ಮನೆಗಳಿಗೆ ಎಳ್ಳುಬೆಲ್ಲ ಕೊಟ್ಟಬರತಿನಿ ನನ್ನ ಉತ್ತರಕ್ಕೆ ಕಾಯದೆ ಗೆಳತಿಯರ ಜೊತೆಗೂಡಿ ಹೊರಗೊ ಡಿದ ಪುಟಾಣಿಯ ಕಂಡು ಖುಷಿಯಾಯಿತು… ಅಮ್ಮಾ…ನೀ ಹೇಳಿದ ಸಂಕ್ರಾಂತಿ ವಿಷಯ ಗೆಳತಿಯರಿಗೂ ಹೇಳುವೆನೆಂದಾಗ ಮನದೊಳಗೆ ಸಂತಸ ಮೂಡಿತ್ತು. ಗೊತ್ತಿದ್ದ ವಿಷಯವನ್ನು ವರ್ಗಾಯಿಸುವುದು ಹಿರಿಯ ರಾದ ನಮ್ಮ ಜವಾಬ್ದಾರಿಯೆನಿಸಿತ್ತು.

✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ