ಸಂತಸದಿ ತೇಲುತ ಬರುತಿದೆ ಸಂಕ್ರಾಂತಿ
ಹೃದಯದಿ ನಲಿಯುತ ತರುತಿದೆ ಸಂಪ್ರೀತಿ
ಜಗದ ನೋವನು ಮರೆಸಲು
ಜನರ ನಲಿವನು ಬೆರೆಸಲು
ನೋವ ಮರೆಸಿ ನಲಿವ ಬೆರೆಸಿ
ಸಂತಸದಿ ತೇಲುತ ಬರುತಿದೆ ಸಂಕ್ರಾಂತಿ
ಮುಗ್ಧಮನಗಳ ಒಗ್ಗೂಡಿಸಲು
ಮತಬೇಧಗಳ ಒದ್ದೋಡಿಸಲು
ಮನಕೂಡಿಸಿ ಮತ ಓಡಿಸಿ
ಸಂತಸದಿ ತೇಲುತ ಬರುತಿದೆ ಸಂಕ್ರಾಂತಿ
ವಿಜ್ಞಾನದ ಅವತಾರ ತೋರಿಸಲು
ಸುಜ್ಞಾನದ ಝೆಂಕಾರ ಮೊಳಗಿಸಲು
ಜ್ಞಾನವ ತೋರಿಸಿ ಝೆಂಕಾರ ಮೊಳಗಿಸಿ
ಸಂತಸದಿ ತೇಲುತ ಬರುತಿದೆ ಸಂಕ್ರಾಂತಿ….
ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 🎊🎉
✍️ಶಿವಾನಂದ ನಾಗೂರ ಧಾರವಾಡ