ಶಿವಮೊಗ್ಗ ಜಿಲ್ಲೆಗೆ ನಾಡಿನ ವಾಸ್ತು ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ನಾಡಿನ ಅತ್ಯಂತ ಪುರಾತನ ದೇವಾಲಯವಾದ ತಾಳ ಗುಂದದ ಪ್ರಣವೇಶ್ವರ ದೇವಾಲಯದಿಂದ ಹಲವು ರಾಜ ಮನೆತನಗಳಿಂದ ದೇವಾಲಯ ಗಳು ನಿರ್ಮಾಣವಾಗಿದ್ದು ಇತಿಹಾಸದ ಕೊಂಡಿ ಯಂತಿದೆ.  ಅವುಗಳಲ್ಲಿ ಪುರಾತನ ನರಸಿಂಹ ಮೂರ್ತಿ, ಹೊಯ್ಸಳರ ದೇವಾಲಯ ಹಾಗು ಶೃಂಗೇರಿಯ ಮಠ ಸೇರಿದಂತೆ ಅಪುರೂಪದ ವಾಸ್ತು ದೇವಾಲಯಗಳ ಹೊಂದಿರುವ ಗ್ರಾಮ ವೆಂದರೆ ತುಂಗಾ ಭದ್ರಾ ನದಿಯ ಸಂಗಮದಲ್ಲಿ ರುವ ಶಿವಮೊಗ್ಗ ಜಿಲ್ಲೆಯ ಕೂಡಲಿ ಗ್ರಾಮ.

ಇತಿಹಾಸ ಪುಟದದಲ್ಲಿ ಕೂಡಲಿ ಪ್ರಮುಖ ಅಗ್ರಹಾರವಾಗಿತ್ತು. ಪುರಾಣದಲ್ಲಿ ಯಮಪುರಿ ಎಂದು ಕರೆಯಲಾಗುತ್ತಿದ್ದ  ಇಲ್ಲಿನ ನರಸಿಂಹ ನಿಂದ ನಾರಸಿಂಹ ಕ್ಷೇತ್ರವೆಂದು ಹೇಳಲಾಗಿದೆ. ಬನವಾಸಿಯ ಕದಂಬರ ಕಾಲದಲ್ಲಿಯೇ ಇದು ಪ್ರಮುಖ ಕೇಂದ್ರವಾಗಿತ್ತು. ಕಲ್ಯಾಣ ಚಾಲುಕ್ಯ ರು,ಹೊಯ್ಸಳರು,ವಿಜಯಗರ,ಕೆಳದಿ,ಸಾಂತರು ಹಾಗು ಇತರ ಅರಸರು ಇಲ್ಲಿ ಸಾಕಷ್ಟು ದತ್ತಿ ನೀಡಿದ ಉಲ್ಲೇಖ ನೋಡಬ ಹುದು. ಇನ್ನು ಕೆಳದಿ ನೃಪವಿಜಯದಲ್ಲಿ ತುಂಗಾ- ಭದ್ರ ಸಂಗಮದಲ್ಲಿ ಸೋಮಶೇಖರಪುರ ಎಂಬ ಅಗ್ರಹಾರ ನಿರ್ಮಿಸಿದ ಉಲ್ಲೇಖ ವೂ ಇದೆ. ಬಹುಷ: ಅದು ಇದೇ ಅಗ್ರಹಾರವಾಗಿರಬಹು ದು.ಇನ್ನು16ನೇ ಶತಮಾನದಲ್ಲಿ ಇಲ್ಲಿನ ಕೆಳದಿ ಸಂಸ್ಥಾನಕ್ಕೆ ಐದು ಗ್ರಾಮಗಳನ್ನು ದತ್ತಿ ನೀಡಿದ ಉಲ್ಲೇಖವಿದೆ.

ಚಿಂತಾಮಣಿ ನರಸಿಂಹ ದೇವಾಲಯ

ರಾಮೇಶ್ವರ ದೇವಾಲಯಕ್ಕೆ ಸನಿಹದಲ್ಲಿ ಈ ದೇವಾಲಯವಿದೆ.  ದೇವಾಲಯ ಗರ್ಭಗುಡಿ, ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಪುರಾತನವಾದ ಸುಮಾರು 3 ಆಡಿ ಎತ್ತರದ ನರಸಿಂಹನ ಮೂರ್ತಿ ಇದೆ. ಕೇವಲ ನರಸಿಂಹ ಶೈಲಿಯ ಈ ಮೂರ್ತಿ ಸುಮಾರು 5 – 6 ನೇ ಶತಮಾನಕ್ಕೆ ಸೇರಿದ ಈ ಶಿಲ್ಪ ವೀರಾಸನ ಭಂಗಿ ಯಲ್ಲಿದ್ದು ಬಲಗೈನಲ್ಲಿ ಚಿಂತಾಮಣಿ ಇದ್ದರೆ ಎಡಗೈ ತೊಡೆಯ ಮೇಲೆ ಇದೆ. ಮೂಲತ: ಕದಂಬರ ಕಾಲಕ್ಕೆ ಸೇರಿದ ಈ ಶಿಲ್ಪವನ್ನು ಚಾಲುಕ್ಯರ ಕಾಲದಲ್ಲಿ ನಿರ್ಮಾಣ ವಾದ ದೇವಾ ಲಯದಲ್ಲಿ ಇರಿಸ ಲಾಗಿದೆ. ಗರ್ಭಗುಡಿಯ ಬಾಗಿಲುವಾಡದಲ್ಲಿ ಜಾಲಂದ್ರ ಗಳಿದ್ದು ಹೊರ ಭಿತ್ತಿಯಲ್ಲಿ ಶಿಖರ ಮಾದರಿಯ ಕೆತ್ತೆನೆ ನೋಡ ಬಹುದು. ನವರಂಗದಲ್ಲಿ ಚಾಲುಕ್ಯರ ನಾಲ್ಕು ಕಂಭಗಳಿವೆ. ಇಡೀ ದೇವಾಲಯಕ್ಕೆ ಬಣ್ಣ ಬಳಿ ಯಲಾಗಿದ್ದು ದೇವಾಲಯದ ಮೂಲ ಸ್ವರೂಪ ವೇ ಕಳೆದು ಹೋಗಿದೆ. ದೇವಾಲಯದಲ್ಲಿ ಅಪ ರೂಪದ ಎದುರು ಮುಖದ ಆಂಜನೇಯ ಹಾಗು ವಿಷ್ಣುವಿನ ಶಿಲ್ಪವಿದೆ.

ರಾಮೇಶ್ವರ ದೇವಾಲಯ

ರಾಮೇಶ್ವರ ದೇವಾಲಯ ಹೊಯ್ಸಳ ರಾಜ ಸೋಮೇಶ್ವರನ ಕಾಲದಲ್ಲಿ ಸುಮಾರು 13 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಗರ್ಭ ಗುಡಿ, ಅಂತರಾಳ ಹಾಗು ನವರಂಗಹೊಂದಿದೆ. ಗರ್ಭ ಗುಡಿಯಲ್ಲಿ ರಾಮೇಶ್ವರ ಎಂದು ಕರೆ ಯುವ ಶಿವಲಿಂಗವಿದೆ. ಇನ್ನು ಬಾಗಿಲುವಾಡದ ಲಲಾಟ ದಲ್ಲಿ ಗಜಲಕ್ಷ್ಮೀ ಕೆತ್ತೆನೆ ನೋಡಬಹು ದು. ಅಂತರಾಳದ ಬಾಗಿಲುವಾಡ ಸುಂದರ ವಾಗಿದ್ದು ಲಲಾಟದಲ್ಲಿನ ಗಜಲಕ್ಷ್ಮೀ ಕೆತ್ತೆನೆ ಹಾಗು ಜಾಲಂದ್ರ ಗಳು ಗಮನ ಸೆಳೆಯುತ್ತದೆ. ಇನ್ನು ತೋರಣದಲ್ಲಿ ಗೋಪುರಗಳ ಕೆತ್ತೆನೆ ನೋಡಬಹುದು.ದೇವಾಲಯಕ್ಕೆ ಉತ್ತರ, ದಕ್ಷಿಣ ಹಾಗು ಪೂರ್ವಕ್ಕೆ ಪ್ರವೇಶದ್ವಾರವನ್ನು ಹೊಂದಿದೆ.

ನವರಂಗ ವಿಸ್ತಾರವಾಗಿದ್ದು ಸುಮಾರು ಹೊಯ್ಸ ಳ ಶೈಲಿಯ 18 ಕಂಭಗಳಿವೆ. ಇವುಗ ಳಲ್ಲಿ ಮಧ್ಯ ದಲ್ಲಿ ನಾಲ್ಕು ಕಂಭಗಳಿದ್ದು ಉಳಿದ 14 ಕಂಭ ಗಳು ದೇವಾಲಯಕ್ಕೆ ಹೊಂದಿಕೊಂ ಡಿದ್ದು ಕಕ್ಷಾಸನ ನೋಡಬಹುದು.ಇನ್ನು ವಿತಾನ (ಭುವನೇಶ್ವರಿ)ದಲ್ಲಿನ ಕಮಲದ ಕೆತ್ತೆನೆ ಕಲಾತ್ಮ ಕವಾಗಿದೆ.ಇಲ್ಲಿನ ದೇವ ಕೋಷ್ಟಕಗ ಳಲ್ಲಿ ಗಣಪತಿ ಹಾಗು ಮಹಿಷಾಸುರ ಮರ್ಧಿನಿಯ ಶಿಲ್ಪ ನೋಡ ಬಹುದು.ಗರ್ಭಗುಡಿಯ ಎದುರು ಭಾಗದಲ್ಲಿ ನಂದಿಯಿದೆ. ದೇವಾಲಯ ದ ಅಧಿ ಷ್ಟಾನ ಹಾಗು ಹೊರ ಭಿತ್ತಿ ಸರಳವಾ ಗಿದ್ದು ದೇವಾಲಯಕ್ಕೆ ಸುಂದರ ಡ್ರಾವಿಡ ಶೈಲಿಯ ಗೋಪುರ ನೋಡಬಹುದು. ಶಿಖರದ ಲ್ಲಿನ ಸುಂದರವಾದ ಕಳಸ ಹಾಗು ಹೊಯ್ಸಳ ಲಾಂಛನ ದ ಕೆತ್ತೆನೆ ನೋಡ ಬಹುದು.

ಇನ್ನು ಇಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿ ಆದಿ ಭೈರವನ ಲಿಂಗ ಮಂಟಪ ನೋಡಬಹುದು. ಇನ್ನು ನದಿಯ ಸಂಗಮ ಸ್ಥಳದಲ್ಲಿ ಸಂಗಮೇ ಶ್ವರ ದೇವಾಲಯವಿದ್ದು ಇಲ್ಲಿನ ಸಣ್ಣ ಕೊಳ ದಲ್ಲಿ ಎರಡೂ ಶಿವಲಿಂಗಗಳಿವೆ.ಇಲ್ಲಿ ಗೌರಿ ತೀರ್ಥ ವಿದೆ.ಇನ್ನು ಕೂಡಲಿಯಲ್ಲಿ ಸುಮಾರು 12 ಶಿವ ಲಿಂಗಗಳ ದೇವಾಲಯಗಳು ಇದೆ,

ಬ್ರಹ್ಮೇಶ್ವರ ದೇವಾಲಯ

ಇನ್ನು ಇಲ್ಲಿ ವಿಜಯನಗರದಲ್ಲಿ ಕಾಲದ ನವೀಕರ ಣಗೊಂಡ ಆದಿ ಚಾಲುಕ್ಯರ ಕಾಲದ ಪುರಾತನ ಬ್ರಹ್ಮೇಶ್ವರ ದೇವಾಲಯವಿದ್ದು ಲಿಂಗದ ಜಲಹರಿ ಬಲಭಾಗದಲಿರುವ ಕಾರಣ ಬ್ರಹ್ಮೇಶ್ವರ ಲಿಂಗ ಎಂಬ ಹೆಸರು ಇದೆ.  ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭ ಗುಡಿಯಲ್ಲಿ ಪುರಾತನ ಶಿವಲಿಂಗ ಹಾಗು ಮತ್ತೊಂದು ಗರ್ಭಗುಡಿಯಲ್ಲಿ ಪಾರ್ವತಿಯ ಶಿಲ್ಪವಿದೆ. ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಶಿವನ ಅಭಿಮುಖವಾಗಿ ನಂದಿ ಇದೆ. ಗರ್ಭ ಗುಡಿ ಯ ಬಾಗಿಲುವಾಡಗಳು ಪಂಚಶಾಖೆಯಿಂದ ಅಲಂಕೃತಗೊಂಡಿದ್ದು ಅಂತರಾಳದ ಬಾಗಿಲು ವಾಡ ಸರಳವಾಗಿದೆ. ಸ್ಥಳೀಯ ನಂಬಿಕೆಯಂತೆ ಬ್ರಹ್ಮಶಾಪ ವಿಮೋಚನೆಗೆ ಇಲ್ಲಿನ ತುಂಗಾಭದ್ರ ನದಿಯಲ್ಲಿ ಸ್ನಾನ ಮಾಡಿ ಸ್ಥಾಪಿಸಿ ಪೂಜಿಸಿದ ಲಿಂಗವಾದ ಕಾರಣ ಬ್ರಹ್ಮೇಶ್ವರ ಲಿಂಗ ಎಂಬ ಹೆಸರು ಬಂದಿತು ಹಾಗು ದೇವಾಲಯದ ಎದುರು ಕುರುಕ್ಷೇತ್ರ ಯುದ್ದದ ನಂತರ ನೋವಿನ ನಿವಾರ ಣೆಗೆ ಭೀಮ ಸ್ಥಾಪಿಸಿದ ಎನ್ನಲಾದ ಕಂಭವಿದೆ.

ಶ್ರೀ ಶಾರದಾ ಮಠ

ತಲುಪುವ ಬಗ್ಗೆ : ಕೂಡಲಿ ಶಿವಮೊಗ್ಗ – ಚಿತ್ರ ದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು ಸುಮಾರು 13 ಕಿ.ಮೀ ದೂರದಲ್ಲಿದೆ.ಇಲ್ಲಿ ಹೊಳೆ ಹೊನ್ನೂರಿಗಿಂತ ಮುಂಚೆ ಕೂಡಲಿ ಕ್ರಾಸನಲ್ಲಿ ಸುಮಾರು 2 ಕಿ ಮೀ ಒಳಭಾಗದ ಲ್ಲಿದ್ದು ಇಲ್ಲಿ ತುಂಗ ಭದ್ರಾ ನದಿಯ ಸಂಗಮ, ದೇವಾಲಯ ಗಳು ಜೊತೆಯಲ್ಲಿ ಹತ್ತಿರದ ಪಿಳ್ಳಂಗೇರಿಯ ವೆಂಕಟೇಶ್ವರ ದೇವಾಲಯ ವನ್ನು ನೋಡಬ ಹುದು.

ಇನ್ನು ಶೃಂಗೇರಿಯ ಜಗದ್ಗುರುಗಳು ಸ್ಥಾಪಿಸಿದ ಶ್ರೀ ಶಾರದಾ ಪೀಠವಿದೆ, ಈ ಮಠಕ್ಕೆ ವಿಜಯ ನಗರ ಹಾಗು ಹಲವು ಪಾಳೇಗಾರರು ದತ್ತಿ ನೀಡಿ ದ್ದು ಇಲ್ಲಿನ ದೇವಾಲಯದ ಆವರಣ ದಲ್ಲಿ ಶ್ರೀ ಶಾರದ ದೇವಾಲಯ ವಿದ್ದು ಇಲ್ಲಿ ಸ್ಥಾನಿಕ ಭಂಗಿ ಯಲ್ಲಿನ ಶಾರದಾ ಶಿಲ್ವವಿದೆ, ಜೊತೆಯಲ್ಲಿ  ಶ್ರೀಕೋದಂಡರಾಮ ದೇವಾಲಯ ಹಾಗು ಶ್ರೀಭವಾನಿ ಶಂಕರ ದೇವಾಲಯಗಳಿವೆ.ಅಲ್ಲಿಂದ ಶ್ರೀಮಠ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸುತ್ತಾ ಬಂದಿದೆ.

✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು