ಬಂಧು ಬಳಗ ಕರೆಯಿಸಿ
ನಲಿಯುವಾ
ಮನೆ ಮನವೆಲ್ಲಾ ಶೃಂಗಾರ ಮಾಡಿ
ಶ್ರಮಿಸುವ

ಬಂಡಿಗೆ ಎತ್ತನು ಹೂಡಿ
ಸಾಗುವ
ಎರಿಗೆ ಹೋಗುತಾ
ಬಲೇ ಬಲೇ ಎನ್ನುವ

ಕಳ್ಳ ಸುಳ್ಳ ಮಳ್ಳ
ಎಲ್ಲರನ್ನ ಕರೆಯುವ
ಪಂಚ ಪಾಂಡವರ ಬಕ್ತಿಗೆ
ಶರಣನೆನ್ನವು

ಬೆಳದ ಫಸಲಿಗೆ ಪೂಜೆ ಮಾಡಿ
ವಂದಿಸುವ
ಅನ್ನ ನೀಡುವ ಭೂಮಿ ತಾಯಿಗೆ
ನಮೀಸುವ

ರುಚಿ ಸುಚಿಯಾದ ಖಾಧ್ಯ
ಸವಿಯೋಣ
ಹಾಡಿ ಹಾರೈಸುವ ಧ್ವನಿಗಳ
ಕೇಳೋಣ

ಸಕಲರಿಗೂ ಒಳಿತನೇ
ಬಯಸುವ
ಸೌಹಾರ್ದತೆ ಬಾಂಧವ್ಯ
ಬೆಸೆಯುವ

(ಎಳ್ಳ ಅಮಾವಾಸ್ಯೆ ನಿಮಿತ್ಯ ರಚಸಿದ ಕವನ)

ಶ್ರೀಮತಿ.ಭಾಗ್ಯಶ್ರೀ ಗ ಹಳ್ಳಿಕೇರಿಮಠ
ಸಾ-ಜಂತಲಿ ಶಿರೂರು ತಾ-ಮುಂಡರಗಿ
ಜಿ-ಗದಗ

ದಿನಾಂಕ-31-12-2021.