ಸೃಜನಶೀಲತೆಗೆ ಆಶುನಾಟಕ ಒಂದು ಉತ್ತಮ ಅವಕಾಶ. ಕಲ್ಪನೆಯ ಶಕ್ತಿ ಮತ್ತು ಸಾಮರ್ಥ್ಯ, ಬುದ್ಧಿವಂತಿಕೆ, ಆಂಗಿಕ, ವಾಚಿಕ ಕೌಶಲ್ಯಗಳು, ಸಹಕಾರ, ತಂಡ ಮಾನ್ಯತೆ, ಹೀಗೆ ಎಲ್ಲವನ್ನು ಪರೀಕ್ಷಿಸುವ ಅವಕಾಶವನ್ನು ಆಶು ನಾಟಕ ನೀಡುತ್ತದೆ. ನಟನಾ ವ್ಯಕ್ತಿತ್ವ ವಿಕಸನಕ್ಕೆ ಆಶು ನಾಟಕ, ಆಶುಭಾಷಣ ಎಲ್ಲವೂ ಕೂಡಿ ಒಂದು ಸಮನ್ವಯವಾಗಿ ದ್ದರೆ ಅದು ನೋಡು ಗರನ್ನು ರಂಜಿಸುತ್ತದೆ ಅಷ್ಟೇ ಅಲ್ಲದೇ ಅರಿವು ಮೂಡಿ ಸುತ್ತದೆ. ಆಶು ನಾಟಕದ ಲಕ್ಷಣಗಳು:

1.ಅವಧಿ ಚಿಕ್ಕದು ಅಂದರೆ 5 ನಿಮಿಷದಿಂದ 60 ನಿಮಿಷ ಇರಬಹುದು. 2.ಇಲ್ಲಿ ತಯಾರಿ ಮಾಡಿದ ಸಂಭಾಷಣೆ ಇರುವ ದಿಲ್ಲ ಅಲ್ಲಿ ಏನು ಮಾತನಾಡಿದರೂ ಜತೆಗಿರುವ ಪಾತ್ರಧಾರಿಗಳು ಮುಂದೆ ಒಯ್ಯಬೇಕು. 3.ಅದು ಬೀದಿ ನಾಟಕ ದ ಫಾರ್ಮ್ಯಾಟ್ ನಲ್ಲಿ ಇರಬಹುದು ಅಥವಾ ಪ್ರೋಸೋನೆಯಮ್ ಮಾದರಿಯಲ್ಲಿರಬಹು ದು. 4.ಸಂಗೀತ ಚಿತ್ರಕಲೆ ಶಿಲ್ಪಕಲೆ ಎಲ್ಲವೂ ಅದರಲ್ಲಿ ರಬಹುದು.
5.ಪಾತ್ರ ಧಾರಿಗಳ ಸಂಖ್ಯೆ ನಿಗದಿ ಅಂತ ಇಲ್ಲ.
6.ಒಂದು ಕಥೆ,ಘಟನೆ,ದೃಶ್ಯಗಳು,ಒಂದು ಕವಿತೆ ಯಾವದೂ ಆಶು ನಾಟಕದ ಹೂರಣವಾಗಿರ ಬಹುದು.
7.ತಾಲೀಮು ಬೇಕೇಬೇಕು ಅಂತೆ ಇಲ್ಲ. ಆ ಘಳಿಗೆಗೆ ಏನು ಹೊಳೆಯುತ್ತದೆ ಮತ್ತು ಕಥಾ ವಸ್ತು ಮತ್ತು ಅವಧಿ ಉಳಿದ ಪಾತ್ರಧಾರಿಗಳ ಪ್ರತಿಸ್ಪಂದನದ ಮೇಲೆ ಅವಲಂಬಿತವಾಗಿರು ತ್ತದೆ.

8.ಇವೆಲ್ಲ ಆಶುನಾಟಕಗಳು ಒಂದು ರೀತಿಯಿಂ ದ ನಟರ ಸಿದ್ಧತೆಗೆ ಪ್ರಾತ್ಯಕ್ಷಿಕೆಗಳನ್ನು ಒದಗಿಸು ತ್ತದೆ.
9.ಕಾಲ್ಪನಿಕ ದೃಶ್ಯ,ನಿರೂಪಣೆ ಇದ್ದ ರಂಗಪರಿ ಕರ ಗಳು ಅಥವಾ ಸಂಜ್ಞೆ, ಸಂಕೇತಗಳನ್ನು, ಕಲಾವಿ ದರ ಗುಂಪಿನ ಸೃಜನಶೀಲತೆ ಅವಲಂ ಬಿಸಿರು ತ್ತದೆ.
10.ಇದಕ್ಕೆ ನಿರ್ದೇಶಕ ಇರಲೇಬೇಕು ಅಂತಿಲ್ಲ. ಇದೊಂದು ಸಮನ್ವಯತೆ, ಸಹಕಾರ ಕ್ರಿಯೆಯ ಸಾಕ್ಷಿಯಾಗಿ ಇರುತ್ತದೆ.
11.ಆಶುನಾಟಕ ಒಂದು ಶೈಕ್ಷಣಿಕ ಸಾಧನ ಮತ್ತು ಕಲಿಕೆಗೆ ಒಳ್ಳೆಯದು.
12.ಎಲ್ಲ ವಯಸ್ಸಿನ ಕಲಿಕಾರ್ಥಿಗಳಿಗೆ ಅವರ ಅವರ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರತಿ ಪಾಠಕ್ಕೆ ಹೊಂದು ವಂತೆ ಶಿಕ್ಷಕ ತನ್ನ ಸೃಜನ ಶೀಲತೆ ಉಪಯೋಗಿಸಿಕೊಂಡು ಉತ್ತಮ ನಟನಾ ಅವಕಾಶ ವಿದ್ಯಾರ್ಥಿಗಳಲ್ಲಿ ಮೂಡಿಸ ಬಹುದು.
13.ಪ್ರತಿ ಶಿಕ್ಷಕ ತಾನು ಕಲಿಸುವ ಪಾಠಕ್ಕೆ ಅನು ಗುಣವಾಗಿ ಆಶುನಾಟಕ ದ ಕಲ್ಪನೆ ಬೀಜ ಬಿತ್ತಿ ಮಾರ್ಗದರ್ಶನ ಮಾಡುತ್ತಾ ವಿದ್ಯಾರ್ಥಿ ಕಲಿಕೆ ಸರಳವಾಗುತ್ತದೆ. 14.ಆಶುನಾಟಕವನ್ನು ಕ್ಲಾಸಿ ನಲ್ಲಿ, ಹೊರಗಡೆ ಎಲ್ಲಿ ಯಾದರೂ ಆಡಿಸಬ ಹುದು. 15.ಪಾಠದ ಆಶುನಾಟಕಗಳ ಕಲ್ಪನೆ ಮತ್ತು ದಾಖಲೆ ಮಾಡಿಟ್ಟುಕೊಳ್ಳು ವದು.

ಪ್ರತಿ ವರ್ಗದ ಪ್ರತಿ ಪ್ರತಿವಿಷಯದ ಪ್ರತಿ ಪಾಠ ಗಳನ್ನು ಬೋಧಿಸಲು ಆಶುನಾಟಕದ ತತ್ವ ಮತ್ತು ಪ್ರಾತ್ಯಕ್ಷಿಕೆ ಗಳನ್ನು ಬಳಸಬಹುದಾಗಿದೆ. ಇದಕ್ಕೆ ಸಮಯವಿಲ್ಲ, ಅದು ಇಲ್ಲ ಇದು ಇಲ್ಲ ಅಂತ ನೆವಗಳು ಭೋಧಕರಿಂದ ಬಂದರೆ ಆಶ್ಚರ್ಯವೇ ಇಲ್ಲ. ನಾನು ಮಾಡಬಲ್ಲೆ, ನಾನು ಸೃಜನ ಶೀಲತೆ ಯಿಂದ ಹೊಸದನ್ನ ಮಕ್ಕಳು ಪಸಂದ ಮಾಡುತ್ತ ತಮ್ಮತಮ್ಮ ಅಭಿವ್ಯಕ್ತಿಯ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವ ದಷ್ಟೇ ಅಲ್ಲದೆ, ತಮ್ಮ ಜ್ಞಾನ ಭಂಡಾರ ವಿಸ್ತರಿಕೊಳ್ಳ ಬಹುದು. ಆಶುನಾಟಕ ಒಂದು ಕ್ರೀಡೆಯಾಗಿ ರೂಪಿತಗೊ ಳ್ಳುವ ಎಲ್ಲ ಲಕ್ಷಣ ಹೊಂದಿವೆ. ನಮ್ಮಲ್ಲಿನ ರಂಗಶಿಕ್ಷಣ ಅಶುನಾಟಕಗಳನ್ನು ಅಳವಡಿಸಿ ಕೊಳ್ಳಬಹುದಾ ಗಿದೆ. ಈ ರಂಗ ಶಿಕ್ಷಣದ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರಮಾಡುವ ಸನ್ನಿ ವೇಶ ಬಂದಿದೆ. ಹೇಗೆ?ಯಾಕೆ? ಅನ್ನುವು ದನ್ನು ಮುಂದೆ ನೋಡೋಣ.
(ಸಶೇಷ)

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ