ಬರಿ ಹೆಣ್ಣು ಮಕ್ಕಳ ಅಷ್ಟ ಅಲ್ಲ. ಹುಡುಗುರು ಅಷ್ಟ ಹಾದಿ ತಪ್ಪ್ಯಾರ! ಗಂಡ ಮಗಾ ಅಂತ ತಲಿಮ್ಯಾಲೆ ಕುಂದ್ರಿಸ್ಕೊಂಡಿದ್ದಕ್ಕ, ಅವನss ನಮ್ಮ ವಾರಸದಾರ! ಸತ್ತರ ಬಾಯಿಗೆ ನೀರು ಬಿಟ್ಟು ಮುಕ್ತಿ ಕೊಡವಾss ಹಿಂಗಿರುವಾಗ ಅವನು ಎಡಗಾಲಿಲೆ ಮಣ್ಣ ಹಾಕಿದರೂ ಸಾಕು ಅಂದರು ಪೂರ್ವಜರು. ಇವತ್ತಿನ ಹುಡುಗರು ಶ್ರೀರಾಮ, ಶ್ರವಣ ಕುಮಾರ, ಧೃವ ನಂಗ ಆಗದ ದಾರಿ ತಪ್ಪಾಕ ಹತ್ತಿದ್ದು ನೋಡಾಕಾಗಲ್ಲ. ಗಂಡು ಮಕ್ಕಳು ಕೆಲಸಕ್ಕ ಹೋಗ ಬೇಕು, ಹೆಣ್ಣು ಮಕ್ಕಳು ಮನಿ ನಿಭಾಯಿಸ ಬೇಕು. ಈಗ ಕಾಲ ಉಲ್ಟಾ ಆಗ್ಯದ. ಶಿವ ಶಿವಾ ಇನ್ನೂ ಏನೇನ ನೋಡೋದು ಐತಿ. ಗೌರವ ಅಂತೂ ಕೊಡಾ ಕಿಲ್ಲ. ಹೆಂಡತಿ ಮಾತ ಕೇಳದಿದ್ದರ ಅವರ ಬದುಕು ನಡಿಬೇಕಲ್ಲ. ಹೆತ್ತವರನ್ನು ಕಡೆಗಣಿಸಿ ದರೂ ಚಿಂತಿಯಿಲ್ಲ ಅವರು ಚೆನ್ನಾಗಿರಬೇಕು. ಏನ್ ಮಾತಾಡಿ ಎನ್ ಪ್ರಯೋಜನ? ಯಾವುದು ಬದಲಾಗಾಕಿಲ್ಲ, ಉಸ್ಸೆಂದ ಮಾತು ಮುಗಿಸಿದ ಗಟ್ಟಿಗಿತ್ತಿಯರು.

ನನಗೂ ಕುತೂಹಲ ತಡಿಯಾಕ ಆಗಲಿಲ್ಲ…ಆಂಟಿ ಏನಾತು? ಯಾರು ಯಾರಿಗೆ ತೊಂದರಿ ಮಾಡ್ಯಾರ ಅನ್ನೊದು ಗೊತ್ತಾದ್ರ ಹೇಳಬಹು ದಪ್ಪಾ? ಅಯ್ಯೋ ಬಿಡು ತಾಯಿ ನಿನಗ ಏನ್ ಹೇಳೋದು? ಮೊದಲ ಮನಿಯಾಗ ಇರಾಂಗಿಲ್ಲ ನೀನು? ಕೆಲಸಕ್ಕ ಬ್ಯಾರೆ ಹೋಗತಿ, ದುಡಿದು ಮನಿ ನಡಸ್ತಿ, ಆದ್ರೂ ನೀ ಹೆಣ್ಣ ಮಗಳss ಗಂಡಮಗಾ ಆಗಾಕಿಲ್ಲೆಂದು ಮುಖ ಸಿಂಡರಿಸಿ ಕೊಂಡರು. ಅವರ ಕಂಡು ಬ್ಯಾಸರ ಆಗಲಿಲ್ಲ. ಅವರ ನಿರೀಕ್ಷೆ ಕಂಡು ಒಂದೆಡೆ ಖುಷಿಯಾದರೂ, ಇನ್ನೊಂದೆಡೆ ಗಾಢವಾದ ಚಿಂತನೆ. ಹಿರಿಯರು ಮಾಡಿದ ಕೆಲವೊಂದು ಸಂಪ್ರಾದಾಯ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದಂತೂ ಸತ್ಯ. ಆದರೆ ಬದುಕಿನ ಚಿತ್ರಣ ಗಳು ವೇಗವಾಗಿ ದಿನದಿಂದ ದಿನಕ್ಕೆ ಬದಲಾ ಗುತ್ತಿರುವುದಕ್ಕೆ ಹೊಂದಿಕೊಳ್ಳದೆ ವಿಧಿಯಿಲ್ಲ. ಹಾಗಂತ ಹಿರಿಯರಿಗೆ ಗೌರವಾದರ ಗಳಿಂದ ದೂರ ಇಡುವ ಸಂಸ್ಕೃತಿ ನಮ್ಮದಲ್ಲ. ಅದಕ್ಕೆ ಧಕ್ಕೆ ತರುವ ಸಂಸ್ಕೃತಿಗೆ ಬದಲಾದ ಜನಾಂಗಕ್ಕೆ ಸನ್ಮಾರ್ಗ ತೋರುವ ಗುರುತರ ಜವಾಬ್ದಾರಿ ಅಧಿಕಾರ ಹೆತ್ತವರು, ಶಾಲೆ, ಸಮು ದಾಯ, ಸಮಾಜಕ್ಕೆ ಮಾತ್ರ ಸಾಧ್ಯ!

ಗಂಡು ಹೆಣ್ಣು ದೇಹ ರಚನೆ ಭಿನ್ನವಾದರೂ, ಅವರೊಳಗಿನ ಅದಮ್ಯ ಶಕ್ತಿ ಭಿನ್ನವಲ್ಲ. ಅದನ್ನು ಗುರುತಿಸಿ ಬೆಳೆಸುವ ಹೊಣೆಗಾರಿಕೆ ಬಹುಮುಖ್ಯ. ಹಬ್ಬ ಹರಿದಿನಗಳಲ್ಲಿ ವಿಶೇಷ ವಾಗಿ ಸಂಭ್ರಮಿಸು ವಾಗ ಸಾಂಪ್ರದಾಯಿಕ ಉಡುಗೆತೊಡುಗೆಗಳಲ್ಲಿ ನಮ್ಮ ಸಂಸ್ಕೃತಿ ಯನ್ನು ಮರೆಯಲು ಸಾಧ್ಯ ವಿಲ್ಲ. ಅದನ್ನು ಪ್ರತಿಯೊಬ್ಬರು ತಮಗೆ ತಿಳಿದಂತೆ ಆಚರಿಸುತ್ತ, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿವ ಸಾಮರ್ಥ್ಯ ಇಬ್ಬರಿಗೂ ಇದೆ. ಹುಟ್ಟಿದ ಜೀವ ಬೆಳೆದು ದೊಡ್ಡವರಾಗುವಾಗ ಭೇದ ಭಾವ ಬಿತ್ತಿ ಅವರ ಆತ್ಮ ಸ್ಥೈರ್ಯ ಕುಂದದಂತೆ ನೋಡಿಕೊಳ್ಳುವುದು ಮುಖ್ಯ.

ಎಲ್ಲ ಕ್ಷೇತ್ರಗಳಲ್ಲಿ ಸರಿಸಮಳಾಗಿ ದಾಪುಗಾಲು ಇಡುವಲ್ಲಿ ತಂದೆತಾಯಿಗಳ ಪಾತ್ರ ಅಮೂಲ್ಯ. ಕೇವಲ ಪಾಶ್ಚಾತ್ಯ ಸಂಸ್ಕೃತಿಯ ಉತ್ತಮವಾದ ಅಂಶಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕೆ ಹೊರತು, ನಮ್ಮ ದಲ್ಲದ ಶೈಲಿಯನ್ನು ಅಪ್ಪಿ ಕೊಳ್ಳುತ್ತಿರುವ ಹಿನ್ನೆಲೆಯಿಂದ ಹೊರಬರ ಬೇಕಿದೆ. ಈ ಎಲ್ಲ ತಲೆಬಿಸಿ ಕಾರ್ಯಗಳು ಯಥೇಚ್ಛವಾಗಿ ನಡೆಯಲು ನಾವುಗಳು ಸೌಹಾರ್ದಯುತವಾಗಿ ನಿರ್ಭಂಧನ ಹೇರಿದಲ್ಲಿ ಹಾಗೂ ಮೌಲ್ಯಯುತ ಚಟುವಟಿಕೆ ಗಳು ಪ್ರತಿ ಮನೆಗಳಲ್ಲೂ ಹಣತೆಯಂತೆ ಬೆಳಗಿ ದರೆ ಸಮಾಜ ಬದಲಾಗದೆ ಇದ್ದಿತೆ? ಸಂಸ್ಕಾರ, ಸಂಸ್ಕೃತಿಗಳು ಮನದೊಳಗೆ ಬೇರೂರಬೇಕು.

“ಅರುಣಿಮಾ ಸಿನ್ಹಾ” ಭಾರತೀಯ ಪರ್ವತಾ ರೋಹಿ ಮತ್ತು ಕ್ರೀಡಾಪಟು. ಅವರು ಭಾರತೀಯ ವಾಲಿಬಾಲ್ ಆಟಗಾರ್ತಿ ಮತ್ತು ಮೌಂಟ್ ಎವರೆಸ್ಟ್ ಏರಿದ ಮಹಿಳೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಲ್ಲ ಎಂಬು ದನ್ನು ಅವರ ಜೀವನದ ಯಶೋಗಾಥೆ ಯಲ್ಲಿ ಕಾಣ ಬಹುದು. ದೇಶ ಕಾಯುವ ಹೊಣೆಗಾರಿಕೆಗೆ ಸೈನಿಕರಾಗಿ ಭರ್ತಿಯಾಗುವ ಶ್ರೇಷ್ಠ ಹುದ್ದೆ ಗಳಲ್ಲಿ ಅಲಂಕರಿಸುವ ಅವಕಾಶ ವನ್ನು ಅರ್ಹತೆಯ ಆಧಾರದ ಮೇಲೆ ಪಡೆದವರು.

ಸೇನೆಯ ಮೊದಲ ಮಹಿಳಾ ಲೆಫ್ಟಿನೆಂಟ್ ಜನರಲ್ ಪುನೀತಾ ಅರೋರಾ. ಮಹಿಳೆ ಯೊಬ್ಬಳು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಊಹಿಸಲೂ ಆಗದ ಕಾಲಘಟ್ಟದಲ್ಲಿಯೇ ಪುನೀತಾ ಅರೋರಾ, ಯಾರೂ ತುಳಿಯದ ಹಾದಿಯನ್ನು ಆಯ್ದುಕೊಂಡಿದ್ದರು. ಎದುರಾದ ಎಡರು ತೊಡರುಗಳನ್ನು ದಾಟಿ, ಭಾರತೀಯ ಸೇನೆಯಲ್ಲಿ ಎರಡನೇ ಅತಿ ದೊಡ್ಡ ಸ್ಥಾನವಾದ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ಹೀಗಾಗಿ ಸಮಯ ಯಾರಿಗಾಗಿಯೂ ಕಾಯುತ್ತ ಕುಳಿತು ಕೊಳ್ಳುವುದಿಲ್ಲ. ದಿನಗಳು ಉರುಳಿದಂತೆ ಸಾಕ್ಷರತೆಯ ಮಂತ್ರ ಎಲ್ಲರನ್ನೂ ಜಾಗೃತಗೊಳಿ ಸುತ್ತಿರುವುದರಿಂದ ತಾರತಮ್ಯಕ್ಕೆ ಒಳಗಾಗದೆ ನೀ ಹೆಚ್ಚು ನೀ ಕಡಿಮೆಯೆಂಬ ತಕ್ಕಡಿಯನ್ನು ಕಿತ್ತೊಗೆದು ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ. ಹಳೆ ಬೇರು ಹೊಸ ಚಿಗುರು ಮೂಡಿದಂತೆ ಮೌಢ್ಯಗಳ ಕಡಿತ ಗೊಳಿಸುವುದು ಸುಲಭವಾಗು ತ್ತದೆ.ಅದನು ಸಾಕಾರಗೊಳಿಸಲು ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ.
✍️ ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ
ನಿಜ ಗೆಳತಿ ಸಮಯ ಯಾರಿಗೂ ಕಾಯುವುದಿಲ್ಲ ಅದನ್ನು ನಾವೇ ಸದುಪಯೋಗ ಪಡಿಸಿಕೊಂಡು ಮಾತ್ರ ಏನನ್ನಾದರೂ ಸಾಧಿಸಬಹುದು ಯಾವ ರಂಗದಲ್ಲೂ ಹೆಣ್ಣು ಕಡಿಮೆ ಇಲ್ಲ ಅತ್ಯುತ್ತಮವಾದ ಜಾಗೃತಿನೀಡುವ ಚಂದದ ಬರಹ ಅಭಿನಂದನೆಗಳು ಗೆಳತಿ
LikeLiked by 1 person
ತಾರತಮ್ಯ ಬದಲಾಗಬೇಕು.
ಪ್ರೀತಿ ವಿಶ್ವಾಸ ಹೆಚ್ಚಬೇಕು.
ತಂದೆ ತಾಯಿ ಎನ್ನುವ ಗೌರವ ಭಾವ ಬೆಳೆಯಬೇಕು.
ಅಹಂಕಾರ ಬಿಟ್ಟು ಸೌಹಾರ್ದತೆಯ ಕಲಿಯಬೇಕು. ಈ ಎಲ್ಲ ಭಾವನೆಗಳು ಮೂಡಿ ಬಂದಿದೆ. ಸೂಪರ್
LikeLiked by 1 person
Super ಗೆಳತಿ….ಉತ್ತಮ ಲೇಖನ.
ಲಿಂಗ ತಾರತಮ್ಯ ಹೊಗಲಡಿಸುವ ಅಗತ್ಯತೆಯ ಕುರಿತು ಅದ್ಭುತ ಬರಹ.
LikeLiked by 1 person
Sooooooooper..ಇಂತವುಗಳು ಕಣ್ಮುಂದೆ ಇರೋದನ್ನು ಅರಿಯಬೇಕಿದೆ.ತುಂಬಾ ಉತ್ತಮ ಗುಣಮಟ್ಟದ ಮೌಲ್ಯಯುತ ಲೇಖನ.ಪ್ರಸ್ತುತ ಸಮಾಜದ ನಾವು ಅರಿಯಬೇಕು.ತಮ್ಮ ಉನ್ನತ ವೈಚಾರಿಕ ಸಾಹಿತ್ಯ ಸೇವೆ ಗೆ ಶರಣು ಶರಣು 🙏🏻🌷🙏🏻
LikeLike
ತಾರತಮ್ಯ ಬದಲಾಗಬೇಕು.ಬದಲಾದಂತೆ ನಟಿಸುವವರಿಗೊಂದು ಉತ್ತರ..ಎಲ್ಲ ಮಕ್ಕಳು ಒಂದೆ.ಸಂಸ್ಕಾರದ ಅಡಿಪಾಯ ಸರಿಯಾಗಿ ಹಾಕಿದರೆ ಮಾತ್ರ ಸಾಧ್ಯ ಎಂಬ ಲೇಖನ ಪ್ರಸ್ತುತವಾಗಿದೆ.🌷🌷🌷🌷🌷🌷👫👫👫👫
LikeLiked by 1 person