ಒಂದು ಹುಡುಗ ಅಥವಾ ಹುಡುಗಿ ಸುಂದರ ವಾಗಿ ಕಾಣಬೇಕು ಅಂದರೆ ಅವನು ಒಳ್ಳೆಯ ಬಟ್ಟೆ, ಮಾತು, ನೀಟಾಗಿ ಬಾಚಿರು ತಲೆ ಹೀಗೆ ಎಲ್ಲವೂ ಇರಬೇಕಾಗುತ್ತದೆ. ಆಗ ಮಾತ್ರ ನಾವು ಬೇರೆಯವನ್ನು ಮಾತನಾಡಿಸುವುದಾ ಗಲಿ ಅಥವಾ ನಮ್ಮನ್ನು ಬೇರೆಯವರು ಮಾತನಾಡಿ ಸುವುದಾಗಲಿ ಸಾಧ್ಯ. ನಾವು ಒಳ್ಳೆಯ ಬಟ್ಟೆ, ಒಳ್ಳೆಯ ಮನಸ್ಸು, ಒಳ್ಳೆಯ ಮಾತುಗಾರಿಕೆ ಎಲ್ಲವನ್ನು ಹೊಂದಿದ್ದು ನೋಡಲು ನೀಟಾಗಿ ಕಾಣುತ್ತಿಲ್ಲ ಎಂದರೇ ಅದರಲ್ಲಿಯೂ ನಮ್ಮ ತಲೆ ಕೂದಲು ಸಿಕ್ಕು ಸಿಕ್ಕಾಗಿ ಹಾಗೆ ಇದೆ ಎಂದರೇ ನಮ್ಮನ್ನು ಮಾತನಾಡಿಸಲು ಯಾರು ಮನಸ್ಸು ಮಾಡು ವುದಿಲ್ಲ. ಹಾಗೆಂದ ಮಾತ್ರಕ್ಕೆ ಒಳ್ಳೆಯ ಮನಸ್ಸಿಗಿಂತ ಸೌಂದರ್ಯವೇನು ಮುಖ್ಯವಲ್ಲ.

ನಾವು ದಿನಾ ನಮ್ಮ ತಲೆ ಕೂದಲನ್ನು ಬಾಚಲು ಅಂದರೆ ನೀಟಾಗಿ ಇಟ್ಟುಕೊಳ್ಳಲು ಬಳಸುವ ಸಾಧನವೇ ಬಾಚಣಿಗೆ. ಈ ಬಾಚಣಿಗೆ ಇಲ್ಲದೆ ನಮ್ಮ ದಿನವನ್ನು ಕಳೆಯಲು, ನಮ್ಮ ಕೇಶಾಲಂ ಕಾರವನ್ನು ಮಾಡದೆ ಇರಲು ಸಾಧ್ಯವೇ ಇಲ್ಲ. ಈ ಬಾಚಣಿಗೆ ಎನ್ನುವುದು ನಿನ್ನೆ ಮೊನ್ನೆಯ ದಲ್ಲ, ಇದು ಅನಾದಿ ಕಾಲದಿಂದಲೂ ಕೇಶದ ಅಲಂಕಾರಕ್ಕಾಗಿ ಬಳಸಿಕೊಂಡು ಬರುತ್ತಿರುವ ಪ್ರಮುಖ ಸಾಧನ. ಈ ಬಾಚಣಿಗೆಯನ್ನು ಪರ್ಷಿಯನ್ನರ ಕಾಲ ದಿಂದಲೂ ಬಳಸಲಾಗು ತ್ತದೆ. ಇದು ಸುಮಾರು 5000 ವರ್ಷಗಳ ಹಿಂದಿನದು ಎಂದೂ ಗುರುತಿಸಲಾಗಿದೆ.

ಇದು ಹಲ್ಲುಗಳ ಸಾಲನ್ನು ಹಿಡಿದಿಡುವ ಕಾಂಡ ವನ್ನು ಹೊಂದಿರುವ ಒಂದು ಉಪಕರಣ. ಇಂದಿನ ದಿನಗಳಲ್ಲಿ ಇದಕ್ಕೆ ತುಂಬಾ ಹೊಸ ವಿನ್ಯಾಸಗಳನ್ನು ಮಾಡಲಾಗಿದೆ. ಹಿಂದೆ ಈ ಬಾಚಣಿಗೆಗಳನ್ನು ಮರದಿಂದ ಮಾಡಲಾಗು ತ್ತಿತ್ತು. ಈಗ ಇದನ್ನು ಪ್ಯಾಸ್ಟಿಕ್, ಲೋಹ, ಆಮೆ ಚಿಪ್ಪು, ಮರದ ತುಂಡು, ಗ್ಲಾಸ್ ಹೀಗೆ ಬೇರೆ ಬೇರೆ ವಸ್ತುಗಳನ್ನು ಬಳಸಿಕೊಂಡು ಮಾಡಲಾ ಗುತ್ತಿದೆ.

ಈ ಬಾಚಣಿಗೆಗಳು ನಮ್ಮ ಕೂದಲಿನ ಶೃಂಗಾರ ಕ್ಕೆ ಮಾತ್ರವಲ್ಲ ಕೂದಲಿನ ಸಿಕ್ಕುಗಳನ್ನು ಬಿಡಿಸಲು, ಸ್ವಚ್ಛಗೊಳಿಸಲು ಕೂಡ ಬಳಸು ತ್ತಾರೆ. ಇದು ನಮ್ಮ ಜೀವನಶೈಲಿಯ ಒಂದು ಭಾಗವಾಗಿದೆ. ನಾವು ಕಾಲಕ್ಕೆ ತಕ್ಕ ಹಾಗೆ ಬದಲಾದೆವು. ಹಾಗೆ ಬಳಸುವ ವಸ್ತುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿದೆ. ಒಂದು ದಿನ ನಾವು ನಮ್ಮ ಕೂದಲನ್ನು ಬಾಚಿಲ್ಲವೆಂದರೆ ನಮ್ಮನ್ನು ನೋಡುವವರ ದೃಷ್ಟಿಯೇ ಬದಲಾ ಗಿರುತ್ತದೆ. ಬಾಚಣಿಕೆ ಇಲ್ಲದೆ ಒಂದು ದಿನವನ್ನು ಕಳೆಯ ಲಾರದಷ್ಟು ನಾವು ಅದಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮ ನಂತರದ ಪೀಳಿಗೆಗೆ ಇದರಲ್ಲಿ ಇನ್ನೂ ಸ್ವಲ್ಪ ಬದಲಾವಣೆಗಳು ಉಂಟಾಗಬಹುದು, ಬಾಚಣಿಗೆಯಲ್ಲಿ ನಮ್ಮ ಹಿಂದಿನ ಪೀಳಿಗೆಗಿಂತ ನಾವು ಮುಂದುವರೆದಂತೆ.

ಹೀಗೆ ನಾವು ಬಳಸುವ ಪ್ರತಿಯೊಂದು ವಸ್ತು ವಿಗೂ ಅದರದೆ ಆದ ಇತಿಹಾಸವಿದೆ. ಮತ್ತು ಮಹತ್ವವು ಇದೆ. ನಾವು ಬಳಸುವ ಸಾಧನ ಗಳು ಬದಲಾಗಿರ ಬಹುದು ಆದರೆ ಅದಕ್ಕೆ ಬುನಾದಿ ಯನ್ನು ಹಾಕಿಕೊಟ್ಟವರು ನಮ್ಮ ಹಿರಿಯರು ಎನ್ನುವುದನ್ನು ನಾವು ಎಂದೂ ಮರೆಯುವಂ ತಿಲ್ಲ.

✍️ಮಧುರಾ ಭಟ್, 
ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ.ಕಾಲೇಜು,ಉಜಿರೆ.