ಜಗದ ನೀತಿ ರೀತಿಯಂತೆ
ಬಂದೆ ನೀನು ಪ್ರತಿವರ್ಷದಂತೆ
ಕಾಣುವೆವು ಹಲವು ಕನಸನ್ನು
ನಿನ್ನ ಭರವಸೆಯಲ್ಲಿ ನನಸು ಮಾಡು
ಕೆಲವನ್ನಾದರು ಕರುಣೆತೋರಿ.

ಆಸೆಯಿರಲಿ ಭರವಸೆಯಿರಲಿ
ಗೆಲ್ಲುವೆನೆಂಬ ಛಲವಿರಲಿ
ನಿನ್ನೊಳಗೆ ಗೆಲುವಿನ ಕನಸುನನಸಾಗಲಿ
ಪ್ರತಿಗಳಿಗೆ ನವೊಲ್ಲಾಸದ ಹೊಳೆಹರಿಯಲಿ

ಯಾವ ಸಂಸ್ಕೃತಿ ಯಾದರೇನು?
ಹರುಷಪಡಲು ಭೀತಿಯೇನು?
ಹರಿಷದಿಂದ ಸ್ವಾಗತಿಸಿ ಹೊಸವರ್ಷವ
ಹೊಸಭಾಷೆಯಿರಿಸಿ ಸಾಧಿಸಿ ಹೊಸಗುರಿಯ

ಅಂದರಾಗಿ ಆಡಂಭರದ
ಆಚರಣೆಯ ಅನುಕರಿಸದಿರಿ
ಆಚರಿಸಿ ಅನುಸರಿಸಿ
ಮೌಲ್ಯಗಳನ್ನು ಅಳವಡಿಸಿ
ಸಾರ್ಥಕ ಆಚರಣೆಯ ನಿಮ್ಮದಾಗಿಸಿ.
ನನ್ನಹೆಸರ ಉಳಿಸಿ ನಿಮ್ಮ ಹೆಸರಬೆಳೆಸಿ

✍️ದ್ರಾಕ್ಷಾಯಿಣಿ ಡಿ ಮುತ್ತಪ್ಪನವರ