ಹೊಸ ವರುಷ
ಬರಲಿ ಹರುಷದಿ
ತರಲಿ ಶಾಂತಿ.

ಶುಭವಾಗಲಿ
ಸುಖ ಶಾಂತಿ ನೆಮ್ಮದಿ
ಜೊತೆಗಿರಲಿ.

ಕಂಡ ಕನಸು
ನನಸಾಗಿ, ದೇವರ
ಕೃಪೆ ಇರಲಿ.

ಬತ್ತದಿರಲಿ
ಆತ್ಮಸ್ಥೈರ್ಯದ ಬುಗ್ಗೆ
ಇರಲಿ ಸೌಖ್ಯ.

ಕೊರೋನ ಮಾರಿ
ನಾಶವಾಗಿ, ನೆಮ್ಮದಿ
ಉಂಟು ಮಾಡಲಿ.

✍️ಶ್ರೀ ಶಿವು ಎಂ ಖನ್ನೂರ
ಶಿಕ್ಷಕರು ಧಾರವಾಡ.