ಹೊಸವರ್ಷದಾ ನವಜ್ಯೋತಿ
ಬೆಳಗಿ ಬೆಳಗಿಸಲಿ ಸಂಪ್ರೀತಿ
ಪಸರಿಸಲಿ ಸಮೃದ್ದಿ ಸುಖಶಾಂತಿ.!

ಸೂತಕದ ಛಾಯೆ ಕಳೆದು
ಮೂಡಲಿ ಸಂಭ್ರಮದ ಬೆಳಕು
ಸುರಕ್ಷೆ ಸುಭಿಕ್ಷೆಗಳಲಿ ಮಿನುಗಿ
ಬೆಳಕಾಗಲಿ ಸಕಲರ ಬದುಕು.!

ಹೆಜ್ಜೆಹೆಜ್ಜೆಗೂ ಹೊಸಹುರುಪು
ನೀಡಿ ಕೂಡಿ ಸಾಗಲಿ ಕಾಲ
ಮತ್ತೆ ಮರುಕಳಿಸಲಿ ಬುವಿಗೆ
ಸಂತಸ ಸಡಗರಗಳ ಸುಗ್ಗಿಕಾಲ.!

ಜಗ ನಗಲಿ, ಮೊಗ ಅರಳಲಿ
ಸಂಕಟ ಸಂಕಷ್ಟ ದೂರಾಗಿ
ಜೀವ ಭಾವಗಳು ನಳನಳಿಸಲಿ.!

✍️ಎ.ಎನ್.ರಮೇಶ್.ಗುಬ್ಬಿ.