ಅಂಗೈಯಲ್ಲಿ ಆಡಾಡುವ ಭವಿಷ್ಯದ ಕೂಸು
ಮುಂಗೈಯಲ್ಲಿ ಅರಳುತ್ತಿದೆ ಕರುಳನ್ನು ನಂಬಿ
ಕಂಗಳಿಗೆ ಬೆಳಕಾಗುತ ದೈವತ್ವವ ಸೂಸಿ
ಅಂಗಳಕ್ಕೆ ಮಂಗಳದ ಶುಭನುಡಿ ತುಂಬಿ
ಹೆತ್ತವರ ಮಡಿಲಿಗೆ ಸ್ವರ್ಗವೇ ಬಂದು
ಸುತ್ತಲಿನ ಕಷ್ಟಗಳ ಬೆಂಕಿಯುಂಡೆ ತಳ್ಳಿ
ಮುತ್ತಿನಂತ ಮೆರಗನ್ನು ಸುರಿಸುತ್ತ ನಿಂದು
ಹೊತ್ತೊತ್ತಿಗೆ ಜೀವವಾಯ್ತು ಮತ್ತೆ-ಮತ್ತೆ ಬಳ್ಳಿ
ಹಬ್ಬುತ್ತ ಆಕಾಶಕ್ಕೆ ಮಗುವಿನ ಮಾತು
ಹಬ್ಬವಾಯ್ತು ಚುಕ್ಕಿಗಳಿಗೆ ಸಂಭ್ರಮವು ಹೆಚ್ಚಿ
ಸಭ್ಯತೆಯ ರಸ ನಿಮಿಷಕ್ಕೆ ತನು ಮನ ಸೋತು
ಸೌಭಾಗ್ಯವು ತೆರೆಯಿತು ನಿನ್ನಾಟವ ನೆಚ್ಚಿ
ನಿನ್ನಾಗಮನ ಜೀವ ಭಾವಕ್ಕೆ ಸಂಜೀವಿನಿ ಕಳೆ
ನಿನ್ನ ನಗುವು ಕುಟುಂಬಕ್ಕೆ ಉಸಿರಿನ ಸಲೆ
ನಿನ್ನೋಟವೆ ಆನಂದದ ಹಾಲ ಹಾಲ ಹೊಳೆ
ನಿನ್ನೊಲವಿನ ಬಂಧನದಿ ನಾಳೆಗಳ ನೆಲೆ
✍️ಶ್ರೀರಾಮಚಂದ್ರ ದು.ಪತ್ತಾರ
ಹುಬ್ಬಳ್ಳಿ.