ಹೌದು! ಬಂದೇ ಬಿಟ್ಟಿತು ಹೊಸ ವರುಷ
ಸೋಜಿಗವಾಯಿತು ಒಂದು ನಿಮಿಷ!
ಅದೆಷ್ಟು ಬೇಗ ಕಳೆದೆವಲ್ಲ ಮೂರನೂರ ಅರವತ್ತೈದು ದಿವಸ!

ಒಬ್ಬೊಬ್ಬರ ಬಾಳಿನಲ್ಲೂ ಒಂದೊಂದು ತೆರನಾದ ಕಥನ ಮುಂದುವರೆಸಿದೆ ಕೊರೋನಾ ಕ್ರಿಮಿ ತನ್ನ ಕ್ರೂರ‌ ಆಟವನ್ನ

ಎಚ್ಚರ ವಹಿಸಬೇಕು ಜನರೆಲ್ಲ ಪಾಲಿಸುತ ಪ್ರತಿಬಂಧಕ ಸೂತ್ರಗಳನ್ನ
ಕೊರೊನಾ ಬಲಿ ಪಡೆದ ಜೀವಗಳೆಷ್ಟೋ
ಪಾರಾಗಿ ಬಂದ ಹಿರಿ-ಕಿರಿಯರೆಷ್ಟೋ?

ಜ್ವಾಲಾಮುಖಿ, ಸುನಾಮಿ, ಪ್ರವಾಹ ಬೆಳೆಹಾನಿ
ಚಂಡಮಾರುತ, ಭೂಕಂಪ ಆಕಸ್ಮಿಕ ಅಪಘಾತಗಳು ಮಾಡಿದವು ಪ್ರಾಣಹಾನಿ

ಸಾಧಕರು ಸಾಧಿಸಿದರು ಗುರಿಯನ್ನ
ಹಲವರಿಗಾಯಿತು ಸನ್ಮಾನ

ರಾಜಕೀಯ ರಂಗದಲ್ಲಿ ನಡೆದವು ಚುಣಾವಣೆಗಳು
ಆಯಿತು ಮತದಾನ
ಹಲವರು ಕಂಡರು ಗೆಲುವನ್ನ

ಅರಚಾಟ, ಕಿರುಚಾಟ,ಹುಚ್ಹಾಟ ಕೆಟ್ಟಮಾತುಗಳ ಹರಿದಾಟ
ಹಲವರು ಎಲುಬಿಲ್ಲದ ನಾಲಿಗೆಯೆಂದು ತೋರಿಸಿಕೊಂಡದ್ದು ದಿಟ

ಜೀವನವೆಂಬ ರಂಗವೇದಿಕೆಯಲ್ಲಿ ಆಟವನು ಆಡಲೇಬೇಕಲ್ಲವೆ?
ಆಘಾತ ಮರೆತು ಜೀವನ ತತ್ವವರಿತು ಓಡಲೇಬೇಕಲ್ಲವೆ?

ಕಾಲನ ಓಟಕ್ಕೆ ಸರಿಸಾಟಿ ಯಾರೂ ಇಲ್ಲ
ನೋವಿರಲಿ, ನಲಿವಿರಲಿ
ನಡೆಸಬೇಕು ಬಾಳ ಪಯಣ
ಕಹಿ ನೆನಪ ಹುಗಿದಿಟ್ಟು ನಿತ್ಯ ಹೊಸತನದಿ ಬರುವ ನೇಸರನಂತೆ
ನಿರೀಕ್ಷಿಸಬೇಕು ಹೊಸತು ಆಶಾಕಿರಣ

ಬಂದಿದೆ ಹೊಸ ವರುಷ
ತರಲಿ ಎಲ್ಲೆಡೆ ಹರುಷ
ಇದ್ದರೂ ತುಸು ನೋವು ಬದಿಗಿರಿಸಿ ನಗಬೇಕು ಪ್ರತಿ ನಿಮಿಷ

೨೦೨೨ ನಿನಗಿದೋ ಸ್ವಾಗತ

✍️ಶ್ರೀಮತಿ.ರೇಖಾ ನಾಡಿಗೇರ 
ಹುಬ್ಬಳ್ಳಿ