ಯಾರು ಆಟಾ ಅಂತ ಅನುಕರಣೆ ಮಾಡುತ್ತ ಹೊಸದನ್ನೇ ಆಥವ ಹಳೆಯದನ್ನೇ ಮತ್ತೊಬ್ಬರಿಗೆ ತಮ್ಮ ವಾಚಿಕ, ಆಂಗೀಕ ಮತ್ತು ವಸ್ತ್ರಪರಿಕರ ಗಳನ್ನು ಉಪಯೋಗಿಸುತ್ತ ಸಂವಹನ ಮಾಡು ತ್ತಾರೋ ಅವರು ಪುರುಷರಾದರೆ ನಟರೆಂದು, ಸ್ತ್ರೀ ಆದರೆ ನಟಿಯೆಂದು ಕರೆಯಲ್ಪಡುತ್ತಾರೆ. ಇವರುಗಳು ಸಂವಹನೆಗಾಗಿ ಮಾಡುವ ಎಲ್ಲ ಕ್ರಿಯೆಗಳು ನಾಟಕ ಅನ್ನುತ್ತಾರೆ.ರಂಗಭೂಮಿ ಅನ್ನುವದು ನಾಟಕಕ್ಕೆ ಸಂಬಂಧಿಸಿದ ಎಲ್ಲ ಚಿಂತನೆ,ಕ್ರಿಯೆ ಮಾಡುವದೇ ಒಟ್ಟಾರೆ ರಂಗಭೂಮಿ ಅನಿಸಿಕೊಳ್ಳುತ್ತದೆ.ಇದರಲ್ಲಿ ಬರೆಯುವ ಮತ್ತು ಸಂವಹನಕ್ಕೆ ತಯಾರು ಮಾಡುವ ಎಲ್ಲ ಕ್ರಿಯೆಗಳು ರಂಗಭೂಮಿ ಎನಿಸಿಕೊಳ್ಳುತ್ತವೆ. ಇದೊಂದು ಆಟದ ಮೈದಾನ ಅಥವಾ ಬಯಲು ಇದ್ದಂತೆಯೇ ಯಾವದೇ ಆಟವನ್ನು ಆಡಬಹುದು. ಈ ಆಟಗಳೇ ಒಬ್ಬರು ಮಾಡಿದ ಹಾಗೆ ಇನ್ನೊಬ್ಬರು ಮಾಡುವದು ಆಗುವದಿಲ್ಲ ಮತ್ತು ಅದೇ ಉದ್ದೇಶ ಇದ್ದರೂ ಶೈಲಿ ಬೇರೆ ಬೇರೆ ಆಗುತ್ತದೆ ಅನ್ನುವ ಕಾರಣ ಕ್ಕಾಗಿ ಅದು ಕಲೆ ಅನಿಸಿಕೊಳ್ಳುತ್ತದೆ. ಮಾಡು ವರು ಕಲಾವಿದ ಅನಿಸಿಕೊಳ್ಳುತ್ತಾರೆ.ಈ ಕಲೆಯ ಅನಾವರಣದಲ್ಲಿ ಆಸಕ್ತಿ,ಪ್ರೀತಿ,ಪ್ರೇಮ ಅನ್ನುವ ಭಾವಗಳೆಲ್ಲ ಅಡಕ ವಾಗಿರುವ ಕಾರಣ ಮಾಡು ವದೆಲ್ಲ ಕಲಾತ್ಮಕ ಅಭಿವ್ಯಕ್ತಿ ಆಗುತ್ತದೆ. ಹೀಗಾಗಿ ರಂಗಭೂಮಿಯ ಎಲ್ಲವೂ ಕಲಾತ್ಮಕವಾಗುತ್ತವೆ. ಒಂದರ ಹಾಗೆ ಒಂದು ಇರುವದಿಲ್ಲ.ಆ ಕಲಾತ್ಮ ಕತೆ ಕೌಶಲ್ಯಪೂರ್ಣ ವಾಗಿ ಹೊರಬರಬೇಕೆಂದ್ರೆ ಅದು ಸತತವಾಗಿ ಮಾಡುತ್ತ ಪುನರಾವರ್ತನೆ ಆಗುತ್ತಾ ಇದ್ದಾಗ ತಾಲೀಮು ಆಗಿ ಕೌಶಲ್ಯಗಳು ಅಭಿವೃದ್ಧಿ ಹೊಂದುತ್ತವೆ. ಆಗ ರಂಗಭೂಮಿಯ ಮೇಲೆ ಅಥವಾ ಒಳಗೆ ನಡೆ ಯುವ ಎಲ್ಲ ಚಟುವಟಿಕೆಗಳು ಒಂದು ಉದ್ದೇಶ ಸಾಕಾರ ಗೊಳಿಸಿಕೊಳ್ಳುವದಕ್ಕಾಗಿ ಇದ್ದಾಗ ಅದೊಂದು ನಾಟಕ ಕಲೆಯಾಗುತ್ತದೆ. ಉದ್ದೇಶ ಮನರಂಜನೆ, ಶಿಕ್ಷಣ, ಸುಧಾರಣೆ ಏನೇ ಆಗಿರ ಬಹುದು, ಅದಕ್ಕಾಗಿ ನಾಟಕವೆಂದರೆ ಕಲಾತ್ಮಕ ವಾದ ಯಾವದೋ ಉದ್ದೇಶ ಹೊಂದಿದ ಮತ್ತು ಜನ ಸಮೂಹಕ್ಕೆ ಅಭಿವ್ಯಕ್ತಿ ಮಾಡುವ ಪ್ರಯತ್ನ ವಾಗುತ್ತದೆ. ಈ ಪ್ರಯತ್ನ ನಾಟಕ ನೃತ್ಯ,ಸಂಗೀತ ಶಿಲ್ಪರಚನೆ, ಚಿತ್ರರಚನೆ ಅಥವಾ ಯಾವದೇ ಪ್ರತಿಬಾರಿ ಹೊಸದು ಅನಿಸುವ ಚಟುವಟಿಕೆ ಆಗಿರಬಹುದು ಇವೆಲ್ಲವುಗಳು ರಂಗಭೂಮಿಯ ಪ್ರದರ್ಶನಗಳೇ.

ಈ ಹಿನ್ನೆಲೆಯಲ್ಲಿ ವಿಚಾರ ಮಾಡಿದಾಗ ನಾಟಕ ಅನ್ನುವದು ಎಲ್ಲರಿಗಾಗಿ ಎಲ್ಲ ವಯಸ್ಸಿನವರಿ ಗಾಗಿ ಯಾವದೇಸ್ಥಳ,ಯಾವದೇ ಸಮಯದಲ್ಲಿ ಅಭಿವ್ಯಕ್ತಿಗೊಳಿಸುವ ಪ್ರಯತ್ನ ಮಾಡಿದಾಗ ನಾಟಕ ಹುಟ್ಟಿಕೊಳ್ಳುತ್ತದೆ.ಇದಕ್ಕೆ ಲಿಖಿತವಾದ ಒಂದು ಪ್ರತಿ ಬೇಕೇಬೇಕು ಅಂತಿಲ್ಲ.ಅದು ಆಶು ನಾಟಕ,ಯಾವದೇ ಸಿದ್ಧತೆಗಳಿಲ್ಲದೇ ಕ್ಷಣದಲ್ಲಿ ಹುಟ್ಟಿ,ಕ್ಷಣಕ್ಷಣಕ್ಕೂ ಬದಲಾಗುವ ಸನ್ನಿವೇಶ, ಸಂಭಾಷಣೆ ಆಗಬಹುದು.ರಂಗ ಶಿಕ್ಷಣದಲ್ಲಿ ಇದು03ರಿಂದ ಹಿಡಿದು ಯಾವದೇ ವಯೋ ಮಾನದವರಿಗೂ ಆಗಬಹುದು.ಅದು ಆಶು ನಾಟಕ.ಇದು ಹೇಗೆ,ಏನು ಅಂತ ಮುಂದೆ ನೋಡೋಣ.
(ಸಶೇಷ)

 ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ