“ಆಚಾರವೇ ಸ್ವರ್ಗ ಅನಾಚಾರವೇ ನರಕ” ಎಂಬ ನಾಣ್ಣುಡಿಯಂತೆ ಕಾಯಕದಲಿ ನಿಷ್ಠೆಯಿ ರದೆ, ಕುತಂತ್ರಕ್ಕೆ‌ ತನ್ನನ್ನೆ ಅರ್ಪಿಸಿಕೊಂಡು ಮಹಾನ್ ಆದವರ ಹೆಸರು ಚರಿತ್ರೆಯ ಪುಟಗ ಳಲ್ಲಿ ತೆರೆದುಕೊಳ್ಳುತ್ತದೆ, ಆದರೆ ಅದರಿಂದ ಪಾಠ ಕಲಿತವರು ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಾರಣ ಅವರಾರು ಅವರ ಗುಂಪಿಗೆ ಸೇರಿದವರೆಂದು ಬರೆದುಕೊಳ್ಳಲಾ ದೀತೆ? ಅಂತಹ ಪ್ರಾಮಾಣಿಕತೆ, ದಕ್ಷತೆ, ಆತ್ಮಾಭಿಮಾನ, ಪರಸ್ಪರ ಗೌರವ ಇವು ಆದರ್ಶದ ಮುಖಪುಟಗಳಾದರೂ, ಅದರ ಹಿಂದಿರುವ ಕರಾಳತೆ ಮರೆಯುವಂತಿಲ್ಲ. ಆಸೆ ಆಮಿಷಕ್ಕೊಳಗಾಗಿ ನಮ್ಮವರ ಕತ್ತುಕೊಯ್ಯು ವ ದುರುಳರು ಹಿತೈಷಿಗಳ ರೂಪದಲ್ಲಿ ನಮ್ಮ ಆಸುಪಾಸು ಸುಳಿದರೂ ಸಂಶಯಪಡದೆ ಇದ್ದುದು ನಮ್ಮ ದೌರ್ಭಾಗ್ಯ. ನಂಬಿಕೆಯೇ ಮುಳುವಾಗಿ ಎದುರುಗೊಂಡಾಗ ಸಾವನ್ನು ಕೂಡ ಕೆಚ್ಚೆದೆಯಿಂದ ಸ್ವೀಕರಿಸುವ ಮನಸ್ಥಿತಿ ಅನಿವಾರ್ಯವಾಗುವುದು ಆಗಲೇ.

ಮಕ್ಕಳಿಗೆ ಮೌಲ್ಯಗಳ ಕುರಿತು ಮನೆ,ಸಮಾಜ, ತರಗತಿ ಯಲ್ಲಿ ಉದಾ.ಸಹಿತ ವಿವರಿಸುತ್ತ ಅವರ ಮುಗ್ಧ ಮನಸ್ಸಿಗೆ ಅಚ್ಚೊತ್ತುವ ಕಾಯಕ ಮಾಡು ವಂತಹ ಹೊಣೆಗಾರಿಕೆ ನಮ್ಮೆಲ್ಲರದು. ಹಾಗಿದ್ದ ಮೇಲೆ ನಂಬಿಕೆಗೆ ದ್ರೋಹ ಮಾಡುವ ವೈಮನಸ್ಸು ಸೃಷ್ಟಿಯಾಗಿದ್ದು ಎಲ್ಲಿ? ಒಡಕಿನ ಮನೋಭಾವ, ತೃಪ್ತಿ ಇರದ ಆತ್ಮ ಹುಟ್ಟಿದ್ದು ಎಲ್ಲಿ? ವೀರ ನಾಯಕರ ಮರಣಗಳು ಸಂಭವಿ ಸಿದ್ದು ಕೇವಲ ಸಹಜವಾ? ಕಾಲಘಟ್ಟಗಳು ಬದಲಾದಂತೆಲ್ಲ ಚಿಂತನೆಯ ವಿಕಾರಗಳು ಸದ್ಭಾವನೆ ಇರದೆ ಅಸೂಯೆಯ ಮಟ್ಟವನ್ನು ಹೆಚ್ಚಿಸುತ್ತವೆ. ಎಲ್ಲರೊಳು ನಾಡ ಪ್ರೇಮ ಜಾಗೃತವಾದರೂ ಸ್ವಾರ್ಥದ ಮುಂದೆ ಮಂಡಿ ಯೂರಿ ಅಸಹಾಯ ಕವಾಗುವುದನ್ನು ತಪ್ಪಿಸುವ ಕಾಯಕ ನಡೆಯು ತ್ತಿದ್ದರೂ ವಾಮ ಮಾರ್ಗ ಹೆದ್ದಾರಿ ನಿರ್ಮಿಸಿ ಪ್ರಚೋದನೆಗೆ ಒಳಗಾಗುತ್ತಿರುವುದು ಕಣ್ಣೆ ದುರು ಅವ್ಯಾಹತ ವಾಗಿ ನಡೆದರು ಏನನ್ನೂ ಮಾಡ ಲಾಗದ ಸ್ಥಿತಿ.

ಹೀಗಾಗಿ ಮೌಲ್ಯದ ಬೀಜ ಬಿತ್ತಬೇಕಾಗಿದ್ದು ಹಿಂದಿಗಿಂತ ಇಂದು ಪ್ರಸ್ತುತವಾಗಿದೆ. ಮಗು ವಿನ ನೈಜ ಗುಣಗಳಿಗೆ ಸಾತ್ವಿಕ ನೀರು, ಮೌಲ್ಯ ವೆಂಬ ರಸಗೊಬ್ಬರ, ಭಾಸ್ಕರನ ಪ್ರಭೆ ಸರಿ ಯಾದ ಕ್ರಮದಲ್ಲಿ ಪೂರೈಸುವಂತಹ ಸಮಾಜ ನಿರ್ಮಾಣ ಮಾಡುವುದು ಅನಿವಾರ್ಯವಾ ಗಿದೆ. ಆ ನಿಟ್ಟಿನಲ್ಲಿ ಇತಿಹಾಸ ನಮಗೆ ದಾರಿ ದೀಪ. “ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ”ವೆಂಬಂತೆ ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೆಯಮಾರ್ಗ ತೋರುವ ಗುಣ ಬೆಳೆಸು ವಷ್ಟು ಪ್ರತಿ ಕುಟುಂಬದ ಪಾಲಕರ ಹೃದಯ ಹೆಮ್ಮೆಪಡುವಂತಾದರೆ ಸಮಾಜದ ಸ್ವಾಸ್ಥ್ಯ ಬದಲಾಗಲು ಅನುವು ಮಾಡಿಕೊಡು ತ್ತದೆ. ಇಷ್ಟು ಸಾಕಲ್ಲವೆ?

ಧೈರ್ಯ ಸಾಹಸಗಳ ಪ್ರತಿಬಿಂಬ, ಗಂಡುಗಲಿ ಯಾಗಿ ಗರ್ಜಿಸಿ ಬ್ರಿಟಿಷ್ ರ ಸಿಂಹ ಸ್ವಪ್ನವಾ ಗಿದ್ದ ಕಿತ್ತೂರು ಸಂಸ್ಥಾನದ ಹಾಗೂ ಕನ್ನಡದ ವೀರ ಮಹಿಳೆ ರಾಣಿ ಚೆನ್ನಮ್ಮಳ ಯಶೋ ಗಾಥೆ ಓದಿದವರಿಗೆ ಮಹಿಳೆ ದೇಶ ಕಾಯ್ವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾಳೆ. ಆಕೆ ಪ್ರತಿಭಾ ನ್ವಿತೆ,ಶೌರ್ಯ,ಸಾಹಸ, ಆಡಳಿತ ಚತುರೆ ಎಂಬುದನ್ನು ಮರೆಯುವಂತಿಲ್ಲ. ನಾಡು ರಕ್ಷಿಸಲು ಪಯಣ ತೊಟ್ಟು ಕಟ್ಟಿದ ಸೇನೆಯ ಯುದ್ಧದ ವೈಖರಿ ಆಂಗ್ಲರ ನಿದ್ದೆ ಗೆಡಿಸಿದ್ದಂತೂ ದಿಟ. ಅಂತಹ ಮಹಿಳೆಯ ಅಂತ್ಯವಾದದ್ದು ಯಾರಿಂದ? ತಮ್ಮೊಡನಿದ್ದು, ವಿಶ್ವಾಸಗಳಿಸಿ, ಮೋಸದ ಜಾಲ ಹೆಣೆದು ತಮ್ಮವರೇ ತಮಗೆ ಗೊತ್ತಿಲ್ಲದಂತೆ ಕಂದಕ ನಿರ್ಮಿಸಿದ್ದು ಅರಿವಿಗೆ ಬರುವ ಹೊತ್ತಿಗೆ ಬಲಶಾಲಿಯಾಗಿದ್ದರೂ, ಕುತಂತ್ರಕ್ಕೆ ಬಲಿಯಾದ ಸಂದರ್ಭದಲ್ಲಿಯೂ ಎದೆಗುಂದದೆ ನಾಡಿಗಾಗಿ ಸಾವನ್ನು ಸಂತೋಷ ದಿಂದ ಬರಮಾಡಿಕೊಳ್ಳುವ ದೇಶಭಕ್ತರು ಇದ್ದರೆಂಬುದನ್ನು ತಿಳಿಸುವಾಗಲೆಲ್ಲ ದೇಶಪ್ರೇಮ ಜಾಗೃತವಾಗುವುದರ ಜೊತೆಗೆ ಹೇಗೆ ಬದುಕ ಬೇಕೆಂಬುದನ್ನು ಹೇಳಿಕೊಟ್ಟಂತೆ.

ಜ್ಞಾನವನ್ನು ಸ್ವತಃ ಕಟ್ಟಿಕೊಳ್ಳುವ ಅವಕಾಶ ವನ್ನು ಮುಕ್ತವಾಗಿ ನೀಡಿದಷ್ಟು,ಸ್ವ ಅಧ್ಯಯನ ಕ್ಕೆ ಮಗು ತೆರೆದುಕೊಳ್ಳಲು ಅನುಕೂಲ ಕಲ್ಪಿಸಿ ದಂತಾಗು ತ್ತದೆ. ತಾನೊಂದು ಸುಖವಾಗಿದ್ದರೆ ಸಾಕೆಂಬ ಸ್ವಾರ್ಥ ಕಳಚಿದಂತೆಲ್ಲ ನಿಸ್ವಾರ್ಥದ ಮೌಲ್ಯಗಳು ಮೈಗೂಡಲು ಹೆಚ್ಚು ಸಮಯವಾ ಗದು. ಮಗು ಸಮಾಜದ ಭಾವಿ ಭವಿಷ್ಯವೆಂದು ಭಾವಿಸುವುದಾದರೆ “ಬಿತ್ತಿದ್ದನ್ನು ಬೆಳೆದಿಕೊ” ಎಂಬ ಮಾತು ಸತ್ಯವಾಗುವುದೆಂಬುದನ್ನು ಮರೆಯಬಾರದು.

✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ