ಶ್ರಾವಣ ಬಂತು ಶ್ರಾವಣ
ಬಂತು ಬಂತು ಶ್ರಾವಣ
ಹಬ್ಬದ ಸುರಿಮಳೆ ಕಾರಣ
ಸೃಷ್ಟಿಗೆ ಹಸಿರಿನ ಓರಣ
ವರ್ಷ ಋತುವಿನಾಗಮನ

ನೇಸರನರಮನೆ ಕಂಗೊಳಿಸುತ
ಹಸಿರು ತೋರಣ
ಹೂಹಣ್ಣಂದದ ಅಲಂಕೃತಾಭರಣ
ಜಿಟಿ ಜಿಟೀ ಮಳೆ ತಂಗಾಳಿಗೇ
ವಿರಹ ವೇದನ
ಬೆಟ್ಟ ನದಿ ಸಾಲುಗಳಿಗೇ
ಚಿನ್ನ ಬೆಳ್ಳಿಲೇಪನ
ಇದುವೇ ಉದಯ ಗಾಯನ

ಹಕ್ಕಿಗಳು ಬೆಚ್ಚನೇ ಗೂಡಲೀ
ಇಂಚರದೀ ಉಲಿ ಉಲಿಯಲೀ
ಮನುಜನೀ ಬಯಕೆನೊಂದು ಕಲಿ
ಕುಟುಕ ಬದುಕು ಮೊಟಕಾಗಿಸದಿರಲಿ ಇದು
ಇದುವೇ ಬದುಕ ಸಂಜೀವನ..

ನೋಡು ಬಾ ಬಾ
ಹಿಮರಾಜನ ವಾಯು ವಿಹಾರ
ಕಣ್ತುಂಬಿತೋ ಭೂಕೈಲಾ‌ಸ ಶಿಖರ
ಮಂಜು ಮುಸುಕಿ ಮೋಡಗಳೆ
ತಾಕಿದಂತೆನಸಿ ವಿಹಾರ

ಬೆಳ್ಳಿಬೆಟ್ಟ ಕಿರೀಟಗಳ ತೊಟ್ಟು
ಹಿಮರಾಜ
ಸಾಲು ಶೀತಲ ಹೊದ್ದ ಶ್ವೇತಾ
ವಸ್ತ್ರದೀ ತೇಜ
ಸೂರ್ಯೋದಯ ಗುಲಾಬರತ್ನದೀ ಹೊನ್ನಾಲಂಕೃತ
ಭೋರ್ಗರೆವ ಜಲಪಾತಧಾರೆ
ಹಾಸೀ ಸೆಳವುತ

ಇದೇ ಭೂಕೈಲಾಸದರಮನೆ
ಆ ದೇವದೇವನೇ
ನದಿಗಳಿಗೆ ಮರಗಳು ವೈಭವದಾ
ಸಿರಿ ಮನೆ
ಸುಂಯ್ ಗುಡುವಾ ಮಾರುತನ
ಸಂಭಾಷಣೆ
ಜಿನುಗುತಿದೆ ಸೋನೆಯ ಮಂಜ
ಸೋನೆಗಳ ಮುತ್ತಾದ ಹಣೇ…

✍️ ಶ್ರೀಧರ.ಭ.ಸತ್ತೀಗೇರಿ,ಧಾರವಾಡ