ಬೇಂದ್ರೆ ಅಂದ್ರ ಧಾರವಾಡ
ಬೇಂದ್ರೆ ಸಾಹಿತ್ಯ ಅಂದ್ರ ಧಾರವಾಡ ಪೇಡ
ಬದುಕ ಬವಣೆಯಲ್ಲಿ ಬೆಂದು
ಬಂಗಾರದ ಗಟ್ಟಿಯಾದವರು ಬೇಂದ್ರೆ*

ಬೇಂದ್ರೆ ಕಾವ್ಯವೆಂದರೆ ಮನವ ತುಂಬುವದು ಶ್ರಾವಣ
ದತ್ತನ ಭಕ್ತ ಅಂಬಿಕೆಯ ನಂದನ
ಬೇಂದ್ರೆಯ ನೆನಪಲ್ಲಿ ಮಿಂದಿದೆ ಧಾರವಾಡದ ಕಣ ಕಣ

ಬಡತನ ಕಾಡದು ಒಲವೇ ಒಡವೆಯೆಂದರು ಬೇಂದ್ರೆ
ಕಾಂಚಾಣದ ಕುರುಡುತನ ವನ್ನು ಬಿಚ್ಚಿಟ್ಟವರು ಬೇಂದ್ರೆ
ಕರಡಿಯ ಆಡಿಸುವವನ ಕಾವ್ಯದಲ್ಲಿ ಚಿತ್ರಿಸಿದರು ಬೇಂದ್ರೆ

ಸಂಜೆಗೆಂಪಿನಲ್ಲಿ ರಾಗರತಿಯ ಅಂದ ಕಂಡು ಮೈಮರೆತವರು ಬೇಂದ್ರೆ
ಯುದ್ಧ,ಭೂಕಂಪ,ಸುನಾಮಿ ಧಮ೯ವಿಪ್ಲವ,ಪ್ರಸವ ವೇದನೆಯಲ್ಲಿ ರುದ್ರವೀಣೆಯ ನಾದ ಆಲಿಸಿದವರು ಬೇಂದ್ರೆ

ಧಾರವಾಡ ತೊರೆದು ಪುಣೆಗೆ ಹೋಗುವಾಗ ಹಿಂಡನಗಲಿದ ಗಿಣಿಯಂತೆ ಪರಿತಪಿಸಿದರು ಬೇಂದ್ರೆ
ಕನ್ನಡನಾಡ ಚೆನ್ನರೇಳುವಂತೆ ಹಾಡು ಎಂದವರು ಬೇಂದ್ರೆ

ಧಾರವಾಡದ ಸೋಮೇಶ್ವರ ದೇಗುಲದ ಅಂಗಳದಲ್ಲಿ ಆಡಿದವರು ಬೇಂದ್ರೆ
ಶಾಲ್ಮಲೆಯಲ್ಲಿ ಈಜಿ ಮಿಂದವರು ಬೇಂದ್ರೆ*

ಧಾರವಾಡದ ತಾಯೆ ದುಗೆ೯ ಕಾಯೆ ಎಂದು ಸ್ತುತಿಸಿ ದವರು ಬೇಂದ್ರೆ
ಹೂವಿಂದ ಹೂವಿಗೆ ಹಾರುವ
ಪಾತರಗಿತ್ತಿಯಲ್ಲಿಹರು ಬೇಂದ್ರೆ

ತೂಗ್ಯಾಡುವ ಗಿಡ ಮರ ತಂಗಾಳಿಯಲ್ಲಿಹರು ಬೇಂದ್ರೆ
ಶ್ರಾವಣದ ಜಿಟಿ ಜಿಟಿ ಮಳೆಯಲ್ಲಿ ಜೀರುಂಡೆಯ ಗಾನದಲ್ಲಿ
ಮೂಡಲ ಮನೆಯ ಬೆಳಗಿನ ಹಕ್ಕಿಗಳ ಗಂಧವ೯ ಸ್ವರದಲ್ಲಿಹರು ಬೇಂದ್ರೆ

ನಾಕು ತಂತಿಯ ಸ್ವರಕೆ ಜ್ಞಾನ ಪೀಠವನ್ನೇರಿ ಕನ್ನಡದ ಮುಡಿಗೆ ಮುಕುಟವಾದವರು ಬೇಂದ್ರೆ

ಪ್ರಕ್ರತಿಯ ಹಸಿರು ಸಿರಿಯಲ್ಲಿ ಬೇಂದ್ರೆ
ಶ್ರಾವಣ ಹನಿಗಳ ತನನದಲ್ಲಿ ಬೇಂದ್ರೆ
ಧಾರವಾಡದ ಸಾಧನಕೇರಿಯಲ್ಲಿ ಅಮರರಾಗಿಹರು ಬೇಂದ್ರೆ

✍️ಶ್ರೀಮತಿ‌.ರೇಖಾ ನಾಡಿಗೇರ
ಹುಬ್ಬಳ್ಳಿ