ಅಂಬಿಕಾ ತನಯ ದತ್ತನ, ಈ ತವರಿಗೆ
ಹಾಡಿ ಕುಣಿಯೋಣ, ಭಾವ ಕಾವ್ಯದಾ ಸೂರಿಗೆ
ಮೈ ಮರೆವದು, ಅವನ ಜಾನಪದ ಸೊಗಡಿಗೆ
ಧ್ಯಾನಾಸಕ್ತನಾಗಿ ಹಾಕಿದ,ಶ್ರೀಮಾತಾ ಮಡಿಲಿಗೆ.
ಸವಿಯಲು ಕೊಡಬೇಕಿಲ್ಲಾ ಬಾಡಿಗೆ, ತೆರಿಗೆ
ಕೋಟು ಛತ್ತರಿ, ಧೋತಿಯೇ ಉಡುಗೆ,ತೊಡಿಗೆ
ಮನದಲಿ ಪ್ರತಿ ನಡೆಯಲಿ ಶ್ರನಂಗರ ಕಾವ್ಯದ ಕೊಡುಗೆ
ಅವನ ಕಾವ್ಯಲೋಕದ ಗಾರುಡಿಗೆ
ಮರಳಾಗದ ರಸಿಕನಿಲ್ಲ, ಅವನ ಕಾವ್ಯ ಧಾರೆಗೆ
ನಾಕುತಂತಿ, ವಿಶ್ವಕೇ ಕೊಡಿಗೆ
ಸಮರ್ಪಿಸಿ ಧನ್ಯವಾಯಿತು, ಜ್ಞಾನ ಪೀಠದ ಕೊಡುಗೆ
ಜನಿಸಿ ಧಾರಾ ನಗರಿಯಲಿ, ಬೆಳೆದು ಪುಣ್ಯ ನಗರಿಯಲಿ
ಬೆಳಕಾಗಿ ಬಾಳಿ ಕಾವ್ಯ ಲೋಕದಲಿ
ವರಕವಿ ಆಗಿ ವಿಶ್ವದ ಮನ ಮನಗಳಲಿ
ಉದಯಿಸಿ 31.01.1896ರಲಿ
ವಾರದಲಿ ನೂರಾರು ಸಾರಿ ಬಂಧು ಹೋಗುತಲಿ
ನಾಕು ತಂತಿಯ ಮೀಟತಲಿ
ದತ್ತ ಅಮರನಾಗಿಹ ಸಾರಸ್ವತ ಲೋಕದಲಿ.
✍️ಶ್ರೀ ಆರ್.ಪಿ.ಕುಲಕರ್ಣಿ