ಕನ್ನಡಮ್ಮನಿಗೆ ಬರಹದಿಂದ ಪೂಜಿಸುವೆ
ಕನ್ನಡ ಶಾರದೆಗೆ ಕೈ ಮುಗಿದು ನಮಿಸುವೆ
ಕನ್ನಡ ಗುಡಿಯ ಶ್ರೀದೇವಿಗೆ ನಮನಗಳು
ಕನ್ನಡ ನುಡಿ ಸೇವೆಯಲಿ ನಮ್ಮ ಮನಗಳು

ಕನ್ನಡದಲಿ ಅರಳಿದೆ ಈ ನನ್ನ ಕವಿತೆ
ಕನ್ನಡದ ಸ್ವರಗಳಲಿ ಮೂಡಿದ ಗೀತೆ
ಕನ್ನಡ ಹಸಿರಾಗಿದೆ ನನ್ನ ಹೃದಯದಲಿ
ಕನ್ನಡವೇ ತುಂಬಿದೆ ನನ್ನ ಉಸಿರಿನಲಿ

ಕನ್ನಡ ಕವಿ ಆಗುವ ಒಂದು ಕಲ್ಪ
ಕನ್ನಡ ಕವನ ಬರೆಯುವೆನು ಸ್ವಲ್ಪ
ಕನ್ನಡ ಜೀವವಿದು ಕಾಲನ ವಿಕಲ್ಪ
ಕನ್ನಡ ನಿತ್ಯ ಸೇವೆಗೆ ನನ್ನ ಸಂಕಲ್ಪ

ಕರುನಾಡಿನಲಿ ಇನ್ನೊಂದು ಜನುಮವಿರಲಿ
ಕನ್ನಡಮ್ಮನ ಆಶೀರ್ವಾದ ಜೊತೆಯಲಿರಲಿ
ಕನ್ನಡ ಕೈಯ ಬರಹ ನಿಲ್ಲದಂತೆ ಸಾಗುತಿರಲಿ
ಕನ್ನಡವೇ ಈ ಭಾಗ್ಯದ ಸೌಭಾಗ್ಯವು ಆಗಿರಲಿ

✍️ಕಾವ್ಯ ಸುತ 
(ಷಣ್ಮುಖಂ ವಿವೇಕಾನಂದ ಬಾಬು)