ಇನ್ನೊಂದು ಪ್ರವಾಸದಲ್ಲಿ ನಿರತಳಾಗಿದ್ದ ಕಾರಣ ಸ್ವಲ್ಪ ತಡವಾಗಿ ಮತ್ತೆ ಲಂಡನ್ನಿಗೆ ಮರಳುತ್ತಿದ್ದೇ ನೆ.. ಕ್ಷಮೆಯಿರಲಿ. ಇದು ನನ್ನ ‘ಶ್ರಾವಣ’ ಬ್ಲಾಗಿನ ಲಂಡನ್ ಪ್ರವಾಸ ಕಥನ.
ಕ್ರಿಸ್ಮಸ್ ಬೆಳಕಲಿ ಮೀಯುವ ಲಂಡನ್ ಪ್ರೈಮಾರ್ಕ ಎನ್ನುವ ಬ್ರಿಟಿಷ್ ಬಿಗ್ ಬಜಾರು!

ಕ್ರಿಸ್ಮಸ್ ಸಮಯ ಎಂದರೆ ಸಾಮಾನ್ಯವಾಗಿ ಎಲ್ಲಾ ಪಾಶ್ಚಿಮಾತ್ಯ ದೇಶಗಳು ಎಂಥಾ ಚಳಿಯ ಲ್ಲೂ ಮೈಕೊಡವಿ ಎದ್ದೇಬಿಡುತ್ತವೆ. ನಮ್ಮಲ್ಲಿನ ಜಾತ್ರೆಗಳು,ಸಂತೆಗಳು ವಿದೇಶ ಗಳಲ್ಲಿ ನೋಡಲು ಸಿಗುವುದಿಲ್ಲ ಎಂದೇನಾದ ರೂ ನೀವು ಅಂದು ಕೊಂಡಿದ್ದರೆ,ನವೆಂಬರಿನ ಕೊನೆಯಲ್ಲಿ ಅಥವಾ ಡಿಸೆಂಬರಿನಲ್ಲಿ ಯುರೋಪು ರಾಷ್ಟ್ರಗಳಿಗೊಮ್ಮೆ ಹೋಗಿ ನೋಡಿ. ಈ ಹಿಮಸುಂದರಿಯರು ಕಣ್ಣು ಕೋರೈಸುವ ಬೆಳಕಿನುಡುಗೆಯುಟ್ಟು, ಸಡಗರದ ಹೂವು ಮುಡಿದು ಎಲ್ಲೆಲ್ಲೂ ಜಾತ್ರೆಯ ವಾತಾವರಣ ಸೃಷ್ಠಿಸಿರುತ್ತಾರೆ!

ಬೀದಿ ಬೀದಿಯಲ್ಲೂ ಸ್ಥಳೀಯ ಉತ್ಪನ್ನಗಳ ನ್ನು, ಕರಕುಶಲ ವಸ್ತುಗಳನ್ನು, ತಿಂಡಿ ತಿನಿಸು ಗಳನ್ನು ಮತ್ತು ಕೃಷಿ ಉತ್ಪನ್ನಗಳನ್ನು ಮಾರುವ ಕ್ರಿಸ್ಮಸ್ ಮಾರುಕಟ್ಟೆ ಥೇಟ್ ನಮ್ಮ ಮೈಸೂರಿ ನಲ್ಲಿರುವ ಎಕ್ಸಿಬಿಶನ್ ಗ್ರೌಂಡಿನಂತೆ ತರತರದ ಮನರಂಜನೆ ಯ ಆಟಗಳನ್ನೂ, ಸವಾರಿಗಳ ನ್ನೂ ಹೊಂದಿರು ತ್ತದೆ. ನನ್ನ ಲಂಡನ್ ಭೇಟಿ ನವೆಂಬರ ಕೊನೆಯ ಭಾಗದಲ್ಲಿದ್ದುದರಿಂದ ನನಗೆ ಅಲ್ಲಿಯ ಕ್ರಿಸ್ಮಸ್ ವೈಭವವನ್ನು ನೋಡಿ ಆನಂದಿಸುವ ಭಾಗ್ಯ ದೊರಕಿತು. ಸೆಂಟ್ರಲ್ ಲಂಡನ್ನಿನ ವೈಭವವಂತೂ ನೋಡಲು ನೂರು ಕಣ್ಣುಗಳು ಸಾಲವು.

ಪ್ರತಿಯೊಂದು ಅಂಗಡಿ ಮುಂಗಟ್ಟುಗಳೂ ಕ್ರಿಸ್ಮಸ್ ಥೀಮ್ ನಲ್ಲಿ ಸಾಂಟಾಕ್ಲಾಸ್ ನ ಗ್ರಾಟೊ ( ಸಾಂಟಾನ ವೇಷ ಧರಿಸಿದ ವ್ಯಕ್ತಿ ಮಕ್ಕಳಿಗೆ ಉಡುಗೊರೆ ಹಂಚುತ್ತಿರುತ್ತಾನೆ.) ಕ್ರಿಸ್ಮಸ್ ಟ್ರೀ, ಮೇರಿಯ ಕ್ರಿಬ್ ಇತ್ಯಾದಿಗಳನ್ನು ಕಲಾತ್ಮಕವಾಗಿ ಅಲಂಕರಿಸಿ ಪ್ರದರ್ಶಿಸುತ್ತಾರೆ. ಮನೆಯ ಮುಂಭಾಗ ಮತ್ತು ಕಿಟಕಿಗಳೂ ಅಲಂಕೃತ ಗೊಂಡು ಹಬ್ಬದ ಆಗಮನವನ್ನು ಸಾರುತ್ತವೆ. ಕ್ರಿಸ್ಮಸ್ ಗೀತೆಗಳನ್ನು ಹಾಡುವ ತಾಲೀಮು ಕೇಳತೊಡಗುತ್ತದೆ.ಎಲ್ಲಾ ಕಡೆ ರಿಯಾಯಿತಿಯ ಮಾರಾಟ ಜೋರಾಗಿರುತ್ತದೆ.

ಲಂಡನ್ನಿನ ಪ್ರಮುಖ ಬೀದಿಗಳಾದ ಆಕ್ಸಫರ್ಡ್ ಸ್ಟ್ರೀಟ್,ರೀಜೆಂಟ್ ಸ್ಟ್ರೀಟ್, ಕಾರ್ನಬೀ ಸ್ಟ್ರೀಟ್ ಕೋವೆಂಟ್ ಗಾರ್ಡನ್, ಬಾಂಡ್ ಸ್ಟ್ರೀಟ್ ಮತ್ತು ಪಿಕಾಡೆಲ್ಲಿ ಸರ್ಕಸ್ ಮತ್ತು ಟ್ರಫಾಲ್ಗರ್ ಸ್ಕ್ವೇರ್ ಗಳಲ್ಲಿ ಪೈಪೋಟಿಯಿಂದ ವಿಭಿನ್ನವಾಗಿ ಮತ್ತು ವಿಶಿಷ್ಟ ವಾಗಿ ಕ್ರಿಸ್ಮಸ್ ಅಲಂಕಾರ ಮಾಡುತ್ತಾರೆ. ಟ್ರಫಾಲ್ಗರ್ ಸ್ಕ್ವೇರಿ ನಲ್ಲಿ ಬೃಹತ್ ಕ್ರಿಸ್ ಮಸ್ ಮರವನ್ನು ಮತ್ತು ಅದರ ಅಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳ ಬಹುದು. ಅಂದಹಾಗೆ ಇಂಗ್ಲೆಂಡಿ ನಲ್ಲಿ ಸರ್ಕಲ್ ಗಳನ್ನು ಸರ್ಕಸ್ ಎಂದು ಕರೆಯುತ್ತಾರೆ.

ನಾನು ಇಳಿದುಕೊಂಡಿದ್ದ ಆಕ್ಸಫರ್ಡ ಬೀದಿ ಯಂತೂ ಕ್ರಿಸ್ಮಸ್ ಅಲಂಕಾರಕ್ಕಾಗಿ ಲಂಡನ್ನಿ ನಲ್ಲಿಯೇ ನಂಬರ್ ವನ್. ರಾತ್ರಿಯ ಸಮಯ ದಲ್ಲಿ ಇಲ್ಲಿ ಓಡಾಡುವದೇ ಒಂದು ರೋಮಾಂ- ಚನಕಾರಿ, ಅದ್ಭುತ ರಮ್ಯ ಅನುಭೂತಿ. ಬೀದಿಯ ಇಕ್ಕೆಡೆಯಲ್ಲೂ ಹಾಡುವ, ವಿವಿಧ ವಾದ್ಯಗಳನ್ನು ನುಡಿಸುವ, ಯಕ್ಷಿಣಿ ವಿದ್ಯೆಗಳ ನ್ನು ಪ್ರದರ್ಶಿಸುವ, ಬೇರೆ ಬೇರೆ ಛದ್ಮ ವೇಷ ಧರಿಸಿ ರುವ ಹವ್ಯಾಸಿ ಕಲಾವಿ ದರು ನಮ್ಮನ್ನು ಬೇರೆಯದೇ ಒಂದು ಲೋಕಕ್ಕೆ ಕರೆದೊಯ್ಯು ತ್ತಾರೆ. ಎಲ್ಲೆಲ್ಲೂ‘ಸೇಲ್’ ಎನ್ನುವ ಬೋರ್ಡು ಕೈಬೀಸಿ ಕರೆಯುತ್ತದೆ. ಹಿತವಾದ ಚಳಿಯಲ್ಲಿ, ಬೆಚ್ಚನೆಯ ಉಡುಗೆಯ ಲ್ಲಿ, ಅಲ್ಲೇ ಹುರಿದು ಕೊಡುವ ಚೆಸ್ಟ್ ನಟ್, ಪಾಪ್ ಕಾರ್ನ ಗಳನ್ನು ಮೆಲ್ಲುತ್ತಾ, ನಿಧಾನವಾಗಿ ಎಲ್ಲವನ್ನೂ ಕಣ್ತುಂಬಿ ಕೊಳ್ಳುತ್ತಾ ನಡೆಯುತ್ತಿದ್ದರೆ ಅಲ್ಲಿಯ ರಾತ್ರಿಗಳು ಮುಗಿದದ್ದೇ ಗೊತ್ತಾಗುವುದಿಲ್ಲ.

ಈ ಆಕ್ಸಫರ್ಡ ಸ್ಟ್ರೀಟ್ ಎನ್ನುವದು ಜಗತ್ತಿನ ಲ್ಲಿಯೇ ಅತಿ ದೊಡ್ಡದಾದ ಶಾಪಿಂಗ್ ಬೀದಿ. ಸುಮಾರು ಎರಡೂವರೆ ಕಿಲೋಮೀಟರ್ ಗ ಳಷ್ಟು ಉದ್ದವಾಗಿರುವ ಈ ರಸ್ತೆಯಲ್ಲಿ ಜಗತ್ತಿನ ಬಹುತೇಕ ಪ್ರಖ್ಯಾತ ಬ್ರಾಂಡುಗಳ ದೊಡ್ಡ ಮಳಿ ಗೆಗಳು, ಲೆಕ್ಕವಿಲ್ಲದಷ್ಟು ಹೊಟೆಲ್ ಗಳು, ಕೆಫೆ ಗಳು,ಚಿಕ್ಕಪುಟ್ಟ ಅಂಗಡಿಗಳು.ಇಲ್ಲಿಗೆ ಬಂದವ ರು ಬರಿಗೈಯಲ್ಲಿ ಹೋಗುವ ಪ್ರಶ್ನೆಯೇ ಇಲ್ಲ. ಸುಮಾರಾಗಿ ಯುರೋಪಿನ ಎಲ್ಲಾ ಪ್ರಸಿದ್ಧ ಶಾಪಿಂಗ್ ಬೀದಿಗಳನ್ನು ನೋಡಿದ ನನಗೆ ಈ ಆಕ್ಸಫರ್ಡ ಬೀದಿಯಷ್ಟು ವೈವಿಧ್ಯತೆ ಮತ್ತು ಆಕರ್ಷಣೆ ಇನ್ನೆಲ್ಲೂ ಕಂಡಿಲ್ಲ. ಅಂದಹಾಗೆ ನಮ್ಮ ಬಾಲಿವುಡ್ ನ ಅನೇಕ ಸಿನೆಮಾ ತಾರೆ ಯರ ಮೆಚ್ಚಿನ ಶಾಪಿಂಗ ಜಾಗ ಇದೇ.

ಪಕ್ಕದಲ್ಲೇ ಇರುವ ವಿಖ್ಯಾತ ಹೈಡ್ ಪಾರ್ಕ ಮೈದಾನದಲ್ಲಿ ಪ್ರತಿವರ್ಷ ಬೃಹತ್ ಕ್ರಿಸ್ಮಸ್ ಜಾತ್ರೆ, ವಿಶ್ವ ಪ್ರಸಿದ್ಧ ‘ವಿಂಟರ್ ವಂಡರ್ ಲ್ಯಾಂಡ್’ ನಡೆಯುತ್ತದೆ. ಪ್ರತಿದಿನ ಸಂಜೆಯಾ ಗುತ್ತಿದ್ದಂತೆ ಇಲ್ಲಿ ಎಲ್ಲೆಲ್ಲೂ ಕಣ್ಣು ಕೋರೈಸುವ ಬೆಳಕಿನ ಹೋಳಿ. ಜಗತ್ತಿನ ವೈವಿಧ್ಯತೆಯೆಲ್ಲ ವನ್ನೂ ಒಂದೇ ಕಡೆ ಗುಡ್ಡೆ ಹಾಕಿದಂತೆ ಕಾಣುವ ಈ ಜಾತ್ರೆಗೆ ಸರಿಸಾಟಿಯಾದದ್ದು ಇನ್ನೊಂದಿಲ್ಲ. ಆಗಸದೆತ್ತರದ ರೋಲರ್ ಕೋಸ್ಟರ್, ಮೆರ್ರಿ ಗೋ ರೌಂಡ್ ಮುಂತಾದ ಮನರಂಜನೆಗಳೂ, ಬೇರೆ ಬೇರೆ ದೇಶಗಳ ಆಹಾರ, ತಿನಿಸು, ಮಧ್ಯ ಮತ್ತು ಕರಕುಶಲ ವಸ್ತುಗಳ ಮಳಿಗೆಗಳು ಸುಂದರವಾಗಿ ಅಲಂಕೃತಗೊಂಡು ಆಕರ್ಷಿಸು ತ್ತವೆ. ಆಸಕ್ತಿಯಿದ್ದವರು ಮತ್ತು ಸ್ಕೇಟಿಂಗ್ ಕಲಿತವರು ಟಿಕೆಟ್ ಕೊಂಡು ದೊಡ್ಡದಾದ ಹೊರಾಂಗಣ ಐಸ್ ಸ್ಕೇಟಿಂಗ್ ರಿಂಗ್ ನಲ್ಲಿ ಸ್ಕೇಟಿಂಗ್ ಕೂಡ ಮಾಡಬಹುದು. ಅಸಾಧ್ಯ ಜನಜಂಗುಳಿಯಲ್ಲೂ ಅವರ ಶಿಸ್ತು, ಸ್ವಚ್ಛತೆ, ನಯ, ವಿನಯದ ವ್ಯವಹಾರ ಗಮನ ಸೆಳೆಯು ತ್ತದೆ.
“Cities are like cats, reveal themselves at night” – ಶಹರಗಳು ಬೆಕ್ಕಿನಂತೆ, ರಾತ್ರಿಯಲ್ಲಿ ಮಾತ್ರ ತಮ್ಮ ನಿಜ ಸ್ವರೂಪದ ಅನಾವರಣ ಮಾಡುತ್ತವೆ ಎಂದು ರೂಪರ್ಟ್ ಬ್ರೂಕ್ ಎನ್ನುತ್ತಾನೆ. ನಿಜ. ನನಗಂತೂ ದೊಡ್ಡ ದೊಡ್ಡ ನಗರಗಳಿಗೆ ಹಗಲಿನ ಸಮಯದಲ್ಲಿ ಕಿಂಚಿತ್ತೂ ಕರುಣೆಯಿ ಲ್ಲದಂತೆ ಭಾಸವಾಗುತ್ತವೆ. ದಿನನಿತ್ಯದ ಕೆಲಸ, ಅಗತ್ಯ ಸಾಮಾನುಗಳ ಖರೀದಿ, ಅಧಿಕೃತ ಭೇಟಿಗಳು ಮೊದಲಾದವು ಗಳಿಗಾಗಿ ಕ್ಷಣವೂ ನಿಲ್ಲದೇ ಓಡುವ ಅಸಂಖ್ಯಾತ ಜನರು, ಅತಿಯಾದ ವಾಹನಗಳ ದಟ್ಟಣೆಗಳ ನಡುವೆ ಪ್ರತಿ ಶಹರವೂ ಹಗಲಿನಲ್ಲಿ ಒಂದು ಗಂಭೀರ ತೆಯ, ಔಪಚಾರಿ ಕತೆಯ ಮುಸುಗನ್ನು ಹಾಕಿಕೊಂಡಂತೆ ಅನಿಸುವದು ಸುಳ್ಳಲ್ಲ. ಲಂಡನ್ ಕೂಡ ಇದಕ್ಕೆ ಹೊರತಾಗಿಲ್ಲ.

ಆದರೆ ರಾತ್ರಿಯ ಲಂಡನ್ ಹಗಲಲ್ಲಿ ಧರಿಸಿದ ಮುಖವಾಡ ಕಿತ್ತೆಸೆದು ಬಯಲಾಗುತ್ತದೆ, ಎಲ್ಲರ ಸಂಭ್ರಮದಲ್ಲಿ ಸಹಜವಾಗಿ ಭಾಗಿಯಾ ಗುತ್ತದೆ. ಅದರಲ್ಲೂ ಕ್ರಿಸ್ ಮಸ್ ಕಾಲ ದಲ್ಲಿ, ರಾತ್ರಿಯಾ ಗುತ್ತಿದ್ದಂತೆ, ಒಂದು ಸುತ್ತು ಲಂಡನ್ನಿ ನ ಪ್ರಮುಖ ಬೀದಿಗಳಲ್ಲಿ ನಡೆದಾಡಿದರೆ ಸ್ವರ್ಗವೇ ಧರೆಗಿಳಿ ದಂತೆ ಭಾಸವಾಗುತ್ತದೆ. ಪ್ರತಿ ರಸ್ತೆಗೂ ಬೇರೆ ಬೇರೆ ತರದ ವಿಶಿಷ್ಟ ದೀಪಾಲಂಕಾರ. ಸಾಮಾನ್ಯ ವಾಗಿ ಹೆಚ್ಚು ಮಾತಾಡದ, ಶಿಸ್ತುಪ್ರಿಯರಾದ ಆಂಗ್ಲರ ನಗು ಮತ್ತು ಮಾತು ಜೋರಾಗಿ ಕೇಳಿಸತೊಡಗು ತ್ತದೆ. ಅಲ್ಲಿರುವ ಅಸಂಖ್ಯಾತ ಪಬ್ಬುಗಳು, ಕೆಫೆ ಗಳು ಜನರಿಂದ ತುಂಬಿ ತುಳುಕುತ್ತವೆ. ಜನರು ತಮ್ಮ ಅತ್ಯುತ್ತಮ ದಿರಿಸುಗಳಲ್ಲಿ ಮಿಂಚುತ್ತಾ ರೆ. ಕ್ರಿಸ್ಮಸ್ ಶಾಪಿಂಗ್ ಮಾಡುವ ಜನರು ಆದಷ್ಟು ಸೇಲ್ ಗಳ ಲಾಭ ಪಡೆಯಲು ಹವಣಿಸುತ್ತಾರೆ. ಪ್ರತಿ ಮನೆಯಲ್ಲೂ ಕ್ರಿಸ್ ಮಸ್ ಟ್ರೀ ಇಟ್ಟು, ಅದರ ಅಲಂಕಾರಕ್ಕೆ ಬೇಕಾದ ವಸ್ತುಗಳು ಮತ್ತು ಹಬ್ಬದ ಉಡು ಗೊರೆಗಳ ಖರೀದಿ ಆರಂಭಿಸುತ್ತಾರೆ.
ಖರೀದಿ ಅಥವಾ ಶಾಪಿಂಗ್ ಎಂದಕೂಡಲೇ ಒಂದು ವಿಷಯ ನೆನಪಿಗೆ ಬರುತ್ತಿದೆ. ಮೇಲೆ ಹೇಳಿದ ಎಲ್ಲಾ ವಿಷಯಗಳೂ ಸರಿ…ಆದರೆ ಇದ್ಯಾ ವುದೂ ನಮ್ಮ ಬಜೆಟ್ ನಲ್ಲಿ ಬರುವ ಸಾಧ್ಯತೆ ತುಂಬಾ ಕಡಿಮೆ. ಅವರ ಪೌಂಡುಗ ಳನ್ನು ನಮ್ಮ ರೂಪಾಯಿಗಳಲ್ಲಿ ಎಣಿಸುವ ನಮ್ಮ ಸ್ವಭಾವದಿಂದ ಅವರ ರಿಯಾಯಿತಿ ಮಾರಾಟವೇ ನಮ್ಮ ಜೇಬಿಗೆ ಭಾರವೆನಿಸು ತ್ತದೆ. ಇದು ವಾಸ್ತವ ಕೂಡಾ.

ಆದರೆ ನಮ್ಮಂತ ಮಧ್ಯಮ ವರ್ಗದವರೂ ಕೊಳ್ಳಬಹುದಾದ ಒಂದು ಅದ್ಭುತವಾದ ಬೃಹತ್ ಮಾರಾಟ ಮಳಿಗೆ ಇಂಗ್ಲೆಂಡಿನಲ್ಲಿದೆ ಅಂದರೆ ನಂಬುತ್ತೀರಾ? ಅದೇ ಪ್ರೈಮಾರ್ಕ ಎನ್ನುವ ಲಂಡನ್ನಿನ ಬಿಗ್ ಬಜಾರು! ಇಲ್ಲಿ ಎಲ್ಲ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ, ವೈವಿಧ್ಯಮಯ ಸರಕುಗಳು, ಅತ್ಯುತ್ಕೃಷ್ಟ ದರ್ಜೆಯಲ್ಲದಿದ್ದರೂ, ಬಾಳಿಕೆ ಬರುವಂತಹ ಒಳ್ಳೆಯ ಸಿದ್ಧ ಉಡುಪುಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳ ಭಂಡಾರವೇ ಇದೆ. ಅರ್ಧ ಪೌಂಡಿನ ಸಾಕ್ಸಗಳಿಂದ ಹಿಡಿದು ಹತ್ತು ಹದಿನೈದು ಪೌಂಡುಗಳ ಒಳಗೇ ಸಿಗುವ ಸುಂದರ ದಿರಿಸುಗಳು, ಶೂಸುಗಳು, Tಷರ್ಟಗಳು ನಿಮ್ಮ ವಿದೇಶೀ ಶಾಪಿಂಗ್ ಅನ್ನು ದೇಶೀ ಶೈಲಿಯಲ್ಲಿ ಮಾಡಿದ ಅನುಭವ ನೀಡುತ್ತವೆ.

ಅಲ್ಲಿನ ಅಸಾಧ್ಯ ಜನಜಂಗುಳಿಯೂ ನಿಮಗೆ ಭಾರತದ ಮಾಲ್ ಗಳಲ್ಲಿದ್ದ ಭಾವನೆ ಮೂಡಿ ಸುತ್ತದೆ.ಮಾರ್ಬಲ್ ಆರ್ಚನ ವಿಶಾಲವಾದ ಪ್ರೈಮಾರ್ಕ ಮಳಿಗೆಯಲ್ಲಿ ನಾನೂ ಮೈಚಳಿ ಬಿಟ್ಟು ಧಾರಾಳವಾಗಿ ಶಾಪಿಂಗ್ ಮಾಡಿ ಕೃತ ಕೃತ್ಯಳಾದೆ.ಎರಡು ಪೌಂಡುಗಳಿಗೊಂದು ಕೊಡೆ, ಐದು ಪೌಂಡು ಗಳಿಗೆ ಚಪ್ಪಲಿ, ಆರೇಳು ಪೌಂಡುಗಳ ಉಡುಗೆ, ಅರ್ಧ ಪೌಂಡಿಗೇ ಸಾಕ್ಸುಗಳು..ಹೀಗೇ ಅದೊಂದು ಹಿತವಾದ ಅಚ್ಚರಿ. ಆದಾಗ್ಯೂ, ಈ ಬಜೆಟ್ ಶಾಪಿಂಗ್ ಎನ್ನುವದು ಪಕ್ಕಾ ಮೇಲ್ವರ್ಗದ ಇಂಗ್ಲಿಷರಿಗೆ ಆಗಿಬರುವದಿಲ್ಲ. ಎಲ್ಲದರಲ್ಲೂ ಶ್ರೇಷ್ಠತೆಯನ್ನೇ ಬಯಸುವ ಆಂಗ್ಲರು ಈ ಪ್ರೈಮಾರ್ಕ ಮಳಿಗೆ ಗಳಲ್ಲಿ ಸದಾ ಮುತ್ತಿರುವ ಪ್ರವಾಸಿಗರು ಮತ್ತು ಮಧ್ಯಮ ವರ್ಗದ ಜನರನ್ನು ನೋಡಿ ಮೂಗು ಮುರಿಯುತ್ತಾರೆ.

ಲಂಡನ್ ನಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯವಾದ ಅಂಶವೆಂದರೆ, ಬಹಳಷ್ಟು ಇಂಗ್ಲೀಷರು ಭಾರತವನ್ನು ಮತ್ತು ಭಾರತೀಯ ರನ್ನು ಗೌರವದಿಂದ ಕಾಣುತ್ತಾರೆ. ಲಂಡನ್ ನಲ್ಲಿ ಎಲ್ಲಿ ನೋಡಿದರೂ ಭಾರತ, ಬಾಂಗ್ಲಾ ದೇಶ, ಪಾಕಿಸ್ತಾನ ಮೊದಲಾದ ದೇಶಗಳ ವಲಸಿಗರೇ ಕಾಣಸಿಗುತ್ತಾರೆ. ಅವರೆಲ್ಲರಿಗೆ ಹೋಲಿಸಿದರೆ, ನಮ್ಮ ಜನರೇ ಇಲ್ಲಿಯವರಿಗೆ ಹೆಚ್ಚು ವಿಶ್ವಾಸಾರ್ಹರು.ಸಾಮಾನ್ಯವಾಗಿ ಎಲ್ಲಾ ಗ್ರೋಸರಿ ಅಂಗಡಿ ಗಳೂ ಪಂಜಾಬಿಗಳಿಗೆ ಇಲ್ಲವೇ ಗುಜರಾತಿಗಳಿಗೆ ಸೇರಿದ್ದು. ಸೌತ್ ಹಾಲ್ ಎನ್ನುವ ಜಾಗವಂತೂ ಪಕ್ಕಾ ಭಾರತ ದಂತೇ ಇದೆ. ಇಲ್ಲಿ ಸಿಗದ ಭಾರತೀಯ ವಸ್ತುವೇ ಇಲ್ಲ. ಇಲ್ಲಿನ ರಾಜಕಾರಣದಲ್ಲೂ ನಮ್ಮವರದ್ದೇ ಪ್ರಧಾನ ಪಾತ್ರ. ಪ್ರತಿ ಬೀದಿ ಯಲ್ಲೂ ಇಂಡಿಯನ್ ರೆಸ್ಟೋರೆಂಟ್ ಗಳಿವೆ. ನಮ್ಮ ಆಹಾರ, ಚಲನ ಚಿತ್ರಗಳು ಎಂದರೆ ಬ್ರಿಟಿಷರಿಗೆ ಅಚ್ಚುಮೆಚ್ಚು. ನಮ್ಮ ಚಿಕನ್ ಟಿಕ್ಕ ಮಸಾಲ ಅವರ ರಾಷ್ಟೀಯ ಖಾದ್ಯವಾಗಿ ಬಿಟ್ಟಿದೆ ಎಂದರೆ ನೀವೇ ಊಹಿಸಿ.
ಒಟ್ಟಿನಲ್ಲಿ ಬೇರೆ ಯುರೋಪಿಯನ್ ಷಹರ ಗಳಲ್ಲಿ ನಾವು ನಮ್ಮ ತಾಯ್ನೆಲವನ್ನು ಬಿಟ್ಟು ಬಂದ ಬೇಸರ ಕಾಡುವಷ್ಟು ಲಂಡನ್ ನಲ್ಲಿ ಕಾಡುವುದಿಲ್ಲ.
✍️ಸುಚಿತ್ರಾ ಹೆಗಡೆ, ಮೈಸೂರು
ಕ್ರಿಸ್ಮಸ್ ಆಚರಣೆಯ ಕುರಿತು ಸುಂದರವಾದ ಲೇಖನ. ಲಂಡನ್ ನಲ್ಲಿಯೇ ಇದ್ದೇನೆ ಎಂದೆನಿಸಿತು.
ಧನ್ಯವಾದಗಳು!
LikeLiked by 1 person