ಜೀವನದಲ್ಲಿ ನಾಟಕಗಳು ನಡೆಯುತ್ತಿರುತ್ತವೆ. ನಾಟಕಗಳಲ್ಲಿ ಜೀವನ ದರ್ಶನವೂ ಇರುತ್ತದೆ. ಸಿನಿಮಾಗಳು ಬಂದ ನಂತರ ನಾಟಕಗಳು ಕಡಿಮೆಯಾಗುತ್ತಿವೆ. ಕೋವಿಡ್‌ ಕೂಡ ನಾಟಕ ವನ್ನು  ಇತ್ತೀಚೆಗೆ ಪೂರ್ತಿ ಹೊಸಕಿ ಹಾಕಿತ್ತು. ಆದರೆ,ಇದೀಗ  ಕಲಾವಿದರು ಮತ್ತೆ ಬಣ್ಣ ಹಚ್ಚಿದ್ದಾರೆ.

ಯು.ಕೆ.ಯ ಕನ್ನಡಿಗರಿಗಾಗಿ ನಾಟಕವೊಂದರ ಪ್ರಸ್ತಾಪ ಮಾಡಿದಾಗ ಈ ತಂಡದವರು ಆರಿಸಿ ಕೊಂಡಿದ್ದ ‘ಬೀಚಿರಸಾಯನʼವನ್ನು. ಬೆಂಗಳೂ ರಿನಲ್ಲಿ ಕನ್ನಡ ಉಪನ್ಯಾಸಕರಾಗಿ ರುವ ಎನ್.ಸಿ. ಮಹೇಶ್‌ ರಚಿಸಿ, ನಿರ್ದೇಶನ ಮಾಡಿರುವ ಇದು ಬೀಚಿ (ರಾಯಸಂ ಭೀಮ ಸೇನ ರಾವ್)‌ ರವ ರ ‘ತಿಂಮ ರಸಾಯನʼ ಪುಸ್ತಕದಿಂದ ಹಲವು ಪದ ಗಳು, ನುಡಿಗಟ್ಟುಗ ಳನ್ನು ಬಳಸಿಕೊಂಡಿರು ವ ನಾಟಕ.ಅದಕ್ಕೆಂದೇ ಬೀಚಿಯವರ ಹೆಸರನ್ನು ಶೀರ್ಷಿಕೆಯಲ್ಲಿ ಸೇರಿ ಸಲಾಗಿದೆ.‌ ಆದರೆ, ಸ್ವತಂತ್ರ‍ ರಚನೆಯಾದ ಈ ನಾಟಕವನ್ನು ಬೆಂಗಳೂರಿನಲ್ಲಿ ಅಭಿನಯಿಸಿ, ವೀಡಿಯೋ ಮಾಡಿ ಅದನ್ನು ಜೂಮ್‌ ಮೂಲಕ ತೋರಿಸಲಾಯಿತು. ನಾಟಕ ದ ಮೊದಲು ಮತ್ತು ಕೊನೆಯಲ್ಲಿ ತಂಡದವರು, ನಿರ್ದೇಶಕರು ಮತ್ತು ಬಾಬು ಹಿರಣ್ಣಯ್ಯನವ ರೊಂದಿಗೆ ಸರಳ ಸಂವಾದ ನಡೆಸಲಾಯಿತು.

ಆದರೆ, ದೂರದ ಭಾರತದಿಂದ ನಾಟಕದ ಇಡೀ ತಂಡವನ್ನು ವಿದೇಶಿ ಕನ್ನಡಿಗರ ಮನರಂಜನೆ ಗಾಗಿ  ಇಂಗ್ಲೆಂಡಿಗೆ ಕರೆಸುವುದು, ಅದರಲ್ಲೂ ಈ ಕೋವಿಡ್‌ ಕಾಲದಲ್ಲಿ, ಸಾಧ್ಯವೇ ಇಲ್ಲದ ಮಾತಾ ಗಿದೆ. ಹಾಗಾಗಿ,ಇತ್ತೀಚೆಗೆ ಕನ್ನಡಬಳಗ ಯು.ಕೆ. ಬೆಂಗಳೂರಿನ ಡ್ರಾಮಾಟ್ರಿಕ್ಸ್‌ ತಂಡದ ಮೂಲಕ ವರ್ಚುಯಲ್‌ ನಾಟಕವೊಂ ದನ್ನು ಏರ್ಪಡಿಸಿ ದ್ದರು. ಈ ಬಾರಿ ದೀಪಾವಳಿ ಹಬ್ಬ ವನ್ನು ದೊಡ್ಡ ದಾಗಿ ಆಚರಿಸಲು ಸಾಧ್ಯವಾಗ ದಿದ್ದರೂ ಕರ್ನಾ ಟಕದ ಕಲಾವಿದರಿಗೆ, ಈ ಮೂಲಕ ಕಲೆಯ ಪ್ರದ ರ್ಶನಕ್ಕೆ ಅವಕಾಶವನ್ನ ಕಲ್ಪಿಸಲಾಗಿತ್ತು. ಇಲ್ಲಿನ ಕನ್ನಡಿಗರು ಸಾಹಿತಿ ಬೀಚಿಯವರ ಬರಹ ಮತ್ತು ಬದುಕನ್ನು ಮತ್ತೊಮ್ಮೆ ಮೆಲುಕು ಹಾಕಲು ಈ ನಾಟಕ ಅವಕಾಶವನ್ನು ನೀಡಿತು.

ಡ್ರಾಮಾಟ್ರಿಕ್ಸ್‌ ತಂಡದವರು ಈಗಾಗಲೇ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ರಂಗ ಭೂಮಿಯಲ್ಲಿ ಸಕ್ರಿಯವಾಗಿರುವ ತಂಡ. ವಿಜಯ್‌ ಬೆಣಚ ಮತ್ತು ಗುರುರಾಜ ರವರು ಸ್ಥಾಪಿಸಿದ ಈ ತಂಡಕ್ಕೆ ಬಾಬು ಹಿರಣ್ಣಯ್ಯ ನವರ ಮಾರ್ಗದರ್ಶನವಿದೆ.ಅಭಿನಯ, ಬೆಳಕು, ನಾಟಕದ ರಚನೆ ಇತ್ಯಾದಿಗಳನ್ನು ತಂಡದ ಸದಸ್ಯ ರು ನಿರ್ವಹಿಸುತ್ತಾರೆ. ಇವರು  ಈಗಾಗಲೇ ‘ರಾಂ ಫ್ರಂ ತೆನಾಲಿʼ,’ಬೀಚಿ ಹೌಸ್‌ʼ  ‘ಅಭಿನವ ಚಾಪ್ಲಿನ್‌ʼ,’ಸಾಲತೀರಿಸು ಗಾಲಿಬ್‌ʼ, ‘ನಾನು ಮಾಸ್ಟರ್‌ ಹಿರಣ್ಣಯ್ಯ- ನನ್ನ ಕಥೆ ಹೇಳ್ತೀನಿʼ, ‘ಎಂಥಾ ಲೋಕವಯ್ಯ, ‘ಬೀಚಿ ರಸಾಯನʼ-  ಇತ್ಯಾದಿ ನಾಟಕಗಳ ಪ್ರದರ್ಶನ ನೀಡಿದ್ದಾರೆ.

ನವೆಂಬರ್‌ 20ನೇ ತಾರೀಖು ಶನಿವಾರದಂದು ಮಧ್ಯಾನ್ಹ ಸುಮಾರು ಎಪ್ಪತ್ತು ಕನ್ನಡ ಸಂಸಾರ ಗಳು ಕುಳಿತು ಈ ನಾಟಕದ ಪ್ರದರ್ಶನವನ್ನು ನೋಡಿದರು.

ಭಕ್ತಿಯಿಂದ ದೇವರನ್ನು ಪೂಜಿಸಿ,ಆರಾಧಿಸು ವ ಜನರಲ್ಲಿ ಜಾತಿಯ ಮಡಿವಂತಿಕೆ ಯ ಹೊಲಸು ಇನ್ನೂ ಮನೆ ಮಾಡಿರು ವ ಬಗ್ಗೆ, ಅದನ್ನು ತೊಡೆ ಯದ ಹೊರತು ಪ್ರಪಂಚದ ಹಲವು ಗೋಜಲು ಗಳಿಗೆ ಪರಿಹಾರವೇ ಇಲ್ಲದಿರುವ ಬಗ್ಗೆ ಹಾಸ್ಯ ಮತ್ತು ವಿಡಂಬನೆಗಳ ಮೂಲಕ ಹೇಳುತ್ತ, ನಾಟ ಕೀಯ ತಿರುವುಗಳ ಹಾದಿಯಲ್ಲಿ ಈನಾಟಕದಾಟ ಸಾಗುತ್ತದೆ. ಕೆಲವೊಮ್ಮೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಒಂದಿಷ್ಟು ನಾಟಕವೇ ಪರಿಹಾರವೂ ಆಗಿಬಿಡು ತ್ತದೆ. ಆದನ್ನೂ ದೇವರ ಹೆಸರಿನಲ್ಲಿ, ನಂಬಿಕೆ ಗಳಿಗೆ ಧಕ್ಕೆಯಾಗದ ರೀತಿಯಲ್ಲಿ, ಸುಲಲಿತ ವಾಗಿ ಮಾಡಬೇಕಾದ ಜಾಣತನದ ಬಗ್ಗೆ ಯೂ, ಜೀವನದಲ್ಲಿ ಅಂಟುವ, ಎದುರಾಗು ವ ಹಲವು ವೈರುಧ್ಯಗಳ ವಿಡಂಬನೆಯೂ ಈ ನಾಟಕದಲ್ಲಿದೆ. ಹಾಸ್ಯಮಯ ಮಾತುಗಳಿವೆ.

ಬಾಬು ಅವರೇ ವ್ಯಾಖ್ಯಾನಿಸಿದ ಹಾಗೆ, ಮಗು ವನ್ನೇ ಕೈಯಲ್ಲಿಡಿದು ನೋಡುವುದು ಪ್ರತ್ಯಕ್ಷ ನೋಡುವ ನಾಟಕವಾದರೆ, ವರ್ಚುಯಲ್‌ ನಾಟ ಕಗಳು ಮಗುವೊಂದರ ಫೋಟೋ ಹಿಡಿದು ನೋಡಿದ ಹಾಗೆ. ನಾಟಕವೊಂದನ್ನು ನಿಜವಾಗಿ ನೋಡುವಾಗ ಪ್ರೇಕ್ಷಕರು ನೀಡುವ ಸ್ಪಂದನೆ,ಅದ ರಿಂದ ಕಲಾವಿದರಿಗೆ ದೊರಕುವ ಪ್ರೇರಣೆ, ಶಕ್ತಿ ಇತ್ಯಾದಿ ಇಂತಹ ನಾಟಕದ ವೀಕ್ಷಣೆಯಲ್ಲಿರುವು ದಿಲ್ಲ.ಪ್ರೇಕ್ಷಕರಿಂದ ಮತ್ತೊಬ್ಬ ಪ್ರೇಕ್ಷಕರಿಗೆ ಸಿಗುವ ಸ್ಪಂದನೆಗಳೂ ಇಲ್ಲವಾಗುತ್ತವೆ. ಆದರೆ, ಅದು ಸಾಧ್ಯವಾಗದ ಕೋವಿಡ್‌ ವರ್ಷಗಳಲ್ಲಿ ಅಭಿನಯ, ಮೇಕಪ್‌, ಬೆಳಕು, ಸಂಗೀತ, ಧ್ವನಿ, ರೆಕಾರ್ಡಿಂಗ್‌, ಹಿಡಿತದ ನಿರ್ದೇಶನ ಯಾವುದ ಕ್ಕೂ ಕೊರತೆಯಿರದಿದ್ದ ಈ ನಾಟಕ ಪ್ರದರ್ಶನ ಸಮಾಧಾನ ನೀಡಿದ ಮನರಂಜನೆಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ. ಬದ್ದ ಕಲಾವಿದರ ಡ್ರಾಮಾಟ್ರಿಕ್ಸ್‌ ತಂಡ,ತಮ್ಮ ಪರಿಣಿತ ಅಭಿನ ಯದಿಂದ ಯಾವ ಕೊರತೆಗಳೂ ಇಲ್ಲ ದಂತೆ ನೋಡುಗರ  ಮನತಣಿಸಿದರು.

ಇದರ ಜೊತೆ ಜೊತೆಯೇ ಕನ್ನಡ ಬಳಗದ ಸದಸ್ಯ ರಲ್ಲಿ ನಾಟಕದಂತಕ ಕಲಾಮಾಧ್ಯಮ ವೊಂದನ್ನು ಮತ್ತೆ ಬಲಗೊಳಿಸ ಬೇಕಂಬ ಹಂಬಲ ಬಲಿತದ್ದು ಕೂಡ ನಿಜ. ತಮ್ಮ ಶಾಲಾ ಕಾಲೇಜುಗಳ ದಿನಗ ಳಲ್ಲಿ ಹಲವು ನಾಟಕ, ಅಭಿನಯ ಇತ್ಯಾದಿಗಳ ಲ್ಲಿ ತೊಡಗಿಕೊಂಡಿದ್ದ ಬಳಗದ ಹಲವು ಸದಸ್ಯರು ತಮ್ಮೊಳಗಿನ ಅಭಿನಯದ ಗೀಳನ್ನು ಮೆಲುಕು ಹಾಕುತ್ತ ಕೋವಿಡ್‌ ಕಾಲ ಕಳೆದ ನಂತರ ತಾವೂ ಏಕೆ ಮತ್ತೊಮ್ಮೆ ತಮ್ಮೊಳಗಿನ ನಾಟಕದ ಕಲಾವಿ ದ ರನ್ನು ವೇದಿಕೆ ಮೇಲೆ ತರಬಾರದು? ಎನ್ನುವ ಆಶಯದ ಚರ್ಚೆಯೊಂದಿಗೆ ಈ ಕಾರ್ಯಕ್ರಮ ವನ್ನು ಮುಕ್ತಾಯಗೊಳಿಸಿದರು.

✍️ಡಾ.ಪ್ರೇಮಲತ ಬಿ.       ದಂತವೈದ್ಯರು,
ಲಂಡನ್,ಇಂಗ್ಲೆಂಡ್