ಕೆಲವು ವಿಷಯಗಳಲ್ಲಿ ದುರದೃಷ್ಟವಂತಳಾದ ರೂ ಪುಸ್ತಕದ ವಿಷಯದಲ್ಲಿ ಮಾತ್ರ ಅದೃಷ್ಟ ನನ್ನ ಕೈಹಿಡಿದೇ ಬರುತ್ತಿದೆ. ಓದಲು ಆರಂಭಿಸಿ ದಾಗಿ ನಿಂದ ಪುಸ್ತಕಗಳಿಗೆ ಬರವೆನ್ನುವುದೇ ಇಲ್ಲ. ಅಂದಿನ ಪರಿಸ್ಥಿತಿಯಲ್ಲಿ ಕೊಂಡು ಓದುವ, ಸ್ವಂತ ಪುಸ್ತಕ ಹೊಂದುವ ಸನ್ನಿವೇಶ ಇರದಿದ್ದರೂ ಓದಲಿಕ್ಕೆ ಪುಸ್ತಕಗಳಿಗೆ ನೆರೆಹೊರೆ ಯವರು ಗೆಳೆಯರು ಲೈಬ್ರರಿಗಳು ತೆರೆದ ಬಾಗಿಲಾಗಿದ್ದಂ ತೂ ನನ್ನ ಸೌಭಾಗ್ಯ. ಅಪ್ಪ ನಿವೃತ್ತರಾದ ಮೇಲೆ ಪುಸ್ತಕ ಸಂಗ್ರಹ ಆರಂಭಿ ಸಿದ್ದರು, ಮತ್ತೆ ಪುಸ್ತಕ ಗಳ ಗಣಿಯೇ ದೊರೆ ತಂತೆ ಆಗಿತ್ತು. ಆದರೆ ಆಗ ಬರೀ ಓದುತ್ತಿದ್ದು ದು ಮಾತ್ರ, ಬರವಣಿಗೆ ಇರಲೇ ಇಲ್ಲ. ಚೂರು ಪಾರು ಬರವಣಿಗೆ ಆರಂಭಿಸಿದ್ದು ಈಗ ಮೂರು ವರ್ಷದ ಹಿಂದೆ. ಆಗಲೇ ನನಗೂ ಪುಸ್ತಕ ಕೊಳ್ಳುವ ಯೋಜನೆ ಯೋಚನೆ ಯೂ ಬಂದದ್ದು. ಅಲ್ಲಿಂದ ನೋಡಿ ಸರಸ್ವತಿ ಕಟಾಕ್ಷ! ಪುಸ್ತಕಗಳ ಬಹುಮಾನ, ಉಡುಗೊರೆ, ಕೊಳ್ಳುವಿಕೆ….. ಒಂದು ಪುಟ್ಟ ಲೈಬ್ರರಿ ನಿರ್ಮಾ ಣವಾಗಲು ಕಾರಣವಾಗಿದೆ. ಹೀಗೆ ನನ್ನ ಬಳಿ ಪುಸ್ತಕಗಳು ಬಂದ ಕೆಲವು ಪ್ರಕರಣ ಹೇಳ್ತೀನಿ. 

ಮೊಟ್ಟಮೊದಲ ನೆನಪು ನಾನು ಎಂಟನೇ ತರಗತಿ ಯಲ್ಲಿದ್ದಾಗ ಅಣ್ಣ ನಮಗಾಗಿ ಭಾರ ದ್ವಾಜ ಇಂಗ್ಲೀಷ್ ಕನ್ನಡ ನಿಘಂಟು ಕೊಡಿಸಿದ್ದ ರು. ನನಗೆ ಇಂಗ್ಲಿಷ್-ಇಂಗ್ಲೀಷ್ ಆಕ್ಸ್ ಫರ್ಡ್ ನಿಘಂ ಟು ಬೇಕಿತ್ತು. ಹಾಗೆ ಮನಸ್ಸು‌‌ ಬಂದಾಗ ಲೆಲ್ಲ ಕೊಳ್ಳುವ ಚೈತನ್ಯವಿರಲಿಲ್ಲ ಆಗ.ಮುಂದೆ ಯಾವಾಗಲಾದರೂ ಎಂದಿದ್ದರು.ನಾನು 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿ ದ್ದರಿಂದ ಶಾಲಾ ವಾರ್ಷಿಕೋತ್ಸವದಲ್ಲಿ ಸನ್ಮಾನ ಏರ್ಪಡಿಸಿದ್ದರು.ಆಗ ಒಂದು ಉಡುಗೊರೆ!ವೇದಿ ಕೆಯಿಂದ ಕೆಳಗೆ ಇಳಿದ ಕೂಡಲೇ ಬಿಚ್ಚಿ ನೋಡಿ ದರೆ ನಾನು ಬಯಸಿದ ಆಕ್ಸ್ ಫರ್ಡ್ ನಿಘಂಟು. ನನ್ನ ಖುಷಿ ಆಗ ಹೇಳಲಸದಳ.  

ನಂತರ ನನ್ನ ಆಪ್ತ ಗೆಳತಿ ಶಶಿಕಲಾಳ ಅಕ್ಕನ ಮಗಳು ವಿವಾಹವಾಗಿ ಅಮೆರಿಕಾಗೆ ಹೋದಾಗ ಅಕ್ಕ ಪದ್ಮಾರ ಮಗಳ ಇಂಗ್ಲೀಷ್ ಕಾದಂಬರಿಗಳ ಸಂಗ್ರಹವನ್ನೇ ನನಗೆ ಕೊಡುಗೆ ಯಾಗಿ ಕೊಟ್ಟಿದ್ದ ರು. ಸಿಡ್ನಿಶೆಲ್ಡನ್, ಜಾನ್ ಗ್ರಿಶಮ್, ಇಯಾನ್ ಬ್ರೌನ್, ಹೆರಾಲ್ಡ್ ರಾಬಿನ್ಸ್ ಇವರುಗಳ ಕೆಲವು ಪುಸ್ತಕಗಳು ನನ್ನದಾದವು. ತುಂಬಾ ಖುಷಿ ಕೊಟ್ಟ ಪುಸ್ತಕ ಗಳು.  

ವೀಕೆಂಡ್ ವಿತ್ ರಮೇಶ್ ನಲ್ಲಿ ಜಯಶ್ರೀ ಅವರ ಸಂದರ್ಶನ ನೋಡಿದೆ.  ಪತ್ರಿಕೆಗಳಲ್ಲಿ ಅವರ ಆತ್ಮ ಚರಿತ್ರೆ “ಕಣ್ಣಾಮುಚ್ಚೆ ಕಾಡೇ ಗೂಡೆ” ಬಗ್ಗೆ ವಿಮರ್ಶೆಯನ್ನು ಓದಿದ್ದೆ. ಮುಂದಿನ ಬಾರಿ ಕೊಳ್ಳ ಲೇಬೇಕಾದ ಪುಸ್ತಕದ ಪಟ್ಟಿಯಲ್ಲಿ ಅದೇ ಮೊದಲ ಹೆಸರು. ಆಗ ಆನ್ಲೈನ್ನಲ್ಲಿ ತರಿಸುವ ಅಭ್ಯಾಸ ಮಾಡಿಕೊಂಡಿ ರಲಿಲ್ಲ.  ಏತನ್ಮಧ್ಯೆ ಕನ್ನಡ ಕಥಾಗುಚ್ಚ ದ ಮೂಲಕ ವಿಜಯಲಕ್ಷ್ಮಿ ಮಳಿಯೆ ಮೇಡಂ ಲಲಿತ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದರು. ನಾನೂ ನನ್ನ “ಕೈ ತುತ್ತು” ಪ್ರಬಂಧ ಕಳಿಸಿದ್ದೆ. ಅದೃಷ್ಟವಶಾತ್ ಪ್ರಥಮ ಬಹುಮಾನ ಬಂದು ವಿಜಯಲಕ್ಷ್ಮಿ ಮೇಡಂ ಪುಸ್ತಕ ಕಳಿಸುವೆ ಎಂದು ವಿಳಾಸ ಪಡೆದರು. ಹೌದು ನಿಮ್ಮ ಊಹೆ ಸರಿ! ಟೆಲಿಪಥಿಯೋ ಏನೋ…. ಅವರು ಕಳಿಸಿದ್ದು “ಕಣ್ಣಾಮುಚ್ಚೆ ಕಾಡೇ ಗೂಡೆ”.  ಹಾಗಾಗಿ ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತ್ತು. 

ಮುಂದೆ ನಂಜನಗೂಡಿಗೆ ವರ್ಗವಾದಾಗ ಆಪ್ತ ಳಾದವಳು ಗೆಳತಿ ಇಂದುಮತಿ. ಲೈಬ್ರರಿಗಳಲ್ಲಿ ಕಾರ್ಡ್ ಮಾಡಿಸಿ ನಾನು ಓದುತ್ತಿದ್ದ ಭರಾಟೆ ಕಂಡು ಅವರ ತಂದೆಯ ಬಳಿ ಇದ್ದ ಇಂಗ್ಲೀಷ್ ಕಾದಂಬರಿಗಳನ್ನೆಲ್ಲಾ ನನಗೆ ಕೊಟ್ಟುಬಿಟ್ಟಳು. ಮಾರಿಯೋ ಫ್ಯೂಜೋ, ಅರ್ಥರ್ ಹಾಲಿ, ಇಯಾನ್ ಯುರಿಸ್ ಮುಂತಾದವರ ಕೆಲವು ಮಹತ್ವದ ಪುಸ್ತಕಗಳು. ಆಹಾ!! ನನ್ನ ಭಾಗ್ಯಕ್ಕೆ ಎಣೆಯುಂಟೆ? 

ಚದುರಿದ ಚಿತ್ರಗಳಾಗಿದ್ದ  ನೆನಪುಗಳ ಮೆಲುಕ ಕುಸುಮಗಳನ್ನು ಪೋಣಿಸಿ ಬರಹದ ಹಾರವಾ ಗಿಸಲು ಪ್ರೇರಣೆ ಇತ್ತಿದ್ದು ಶ್ರೀಲಕ್ಷ್ಮಿ ಮೇಡಮ್ ಅವರ ಆಹ್ವಾನ.”ಸವಿ ನೆನಪುಗಳು ಬೇಕು ಸವಿ ಯಲೀ ಬದುಕು” ಹಾಗೆ ಸವಿಯಲು ಅವಕಾಶ ವಾಯಿತು. ಇಂತಹ ಗಳಿಗೆಗಳು ಮತ್ತಷ್ಟು ಮಗ ದಷ್ಟು ಬರಲೆಂದು ಹಾರೈಸಿ ಮಿತ್ರರೇ. 

ಈ ಹಿಂದಿನ ಪ್ರಸಂಗಗಳ ಜೊತೆಗೆ ನನ್ನ ಇತ್ತೀಚಿನ ಅನುಭವ. ಈಗ 1ವರ್ಷದ ಹಿಂದೆ ಕುವೆಂಪು ಅವರ ಸಮಗ್ರ ಸಾಹಿತ್ಯದ ಸಂಪುಟ ಗಳನ್ನು ಕೊಂಡುಕೊಂಡಿದ್ದೆ.  ಬೇರೆಬೇರೆ ಕವಿಗಳ ಈ ರೀತಿಯ ಸಮಗ್ರ ಕಾವ್ಯಗಳನ್ನು ಅದರಲ್ಲೂ ಬೇಂದ್ರೆಯವರ ಮತ್ತು ಕೆ.ಎಸ್ ನರಸಿಂಹಸ್ವಾಮಿ ಅವರ ಸಮಗ್ರ ಕಾವ್ಯಗಳನ್ನು ಕೊಳ್ಳುವ ಆಸೆ ಇತ್ತು. ಕರೋನದ ಕಾರಣ ದಿಂದ ಪುಸ್ತಕ ಮಳಿಗೆ ಗಳ ಭೇಟಿ ಅಸಾಧ್ಯ ವಾಗಿತ್ತು. ಜೊತೆಗೆ ನನಗೆ ಎಲ್ಲದಕ್ಕೂ ಸಮಯದ ಅಭಾವ ಹೋಗಲು ಆಗಿಯೇ ಇರಲಿಲ್ಲ. ಮುಂದೂಡುತ್ತಲೇ ಬರು ತ್ತಿತ್ತು.ಈ ಮಧ್ಯೆ ಬೇಂದ್ರೆಯವರ ಸಮಗ್ರ ಕಾವ್ಯ ಔದಂಬರ ಚರಿತ್ರೆ ಕೃತಿಗಳು ಲಭ್ಯವಿಲ್ಲ ಎಂಬ ಮಾಹಿತಿಯು ದೊರೆತು ಸದ್ಯಕ್ಕೆ ಆಸೆಯೇ ಕೈಬಿ ಟ್ಟಿದ್ದೆ. ಹೀಗೇ 1ಫೇಸ್ ಬುಕ್ ಗುಂಪಿನಲ್ಲಿ ನುಡಿ ಪುಸ್ತಕದವರ 4ಕವಿಗಳ ಸಮಗ್ರಕಾವ್ಯದ ಪ್ರಕಟ ಣೆ ಓದಿದೆನಾ? ಆಸೆ ಚಿಗುರಿತ್ತು. ತಕ್ಷಣ ಅವರು ಕೊಟ್ಟ ನಂಬರಿಗೆ ಕರೆ ಮಾಡಿದೆ. ವಾಟ್ಸಪ್ ನಲ್ಲಿ ಅವರ ಬಳಿ ಇರುವ ಸಮಗ್ರ ಕಾವ್ಯಗಳ ಸಂಗ್ರಹ ಗಳ ಹೆಸರು ಮತ್ತು ಫೋಟೋಗಳನ್ನು ಕಳಿಸಿದ ರು.ನಂಬಲೇ ಬೇಕು 5 ಪ್ರಸಿದ್ಧ ಕವಿಗಳ ಸಮಗ್ರ ಕಾವ್ಯಗಳನ್ನ ಲ್ಲದೇ ಇನ್ನಿಬ್ಬರು ಲೇಖಕರ ಸಮಗ್ರ ಸಾಹಿತ್ಯ ಅಲ್ಲದೆ ಚಿತ್ತಾಲರ ಎಪ್ಪತ್ತೆರಡು ಕವಿತೆ ಗಳ ವಿಮರ್ಶೆಯ ಪುಸ್ತಕ. ಇದಲ್ಲವೇ ಅರಸುತ್ತಿ ದ್ದ ಬಳ್ಳಿ ಕಾಲಿಗೆ ತೊಡರುವುದೆಂದರೆ? ಆದರೆ ಇನ್ನೂ ಬೇಂದ್ರೆಯವರದು ಸಿಕ್ಕಿಲ್ಲ ಎನ್ನುವು ದೊಂದು ದುಃಖ. ನುಡಿಪುಸ್ತಕದವರ ಕಾರ್ಯ ವೈಖರಿ ಎಷ್ಟು ಹೊಗಳಿದರೂ ಸಾಲದು. ಹೇಳಿದ ತಕ್ಷಣ ಸುಭದ್ರ ಪ್ಯಾಕಿಂಗ್ ನಲ್ಲಿ ಎಲ್ಲವನ್ನೂ ಮರುದಿನವೇ ಕಳಿಸಿದರು. ತುಂಬಾ ಧನ್ಯವಾದ ಗಳು ನುಡಿಪುಸ್ತಕದ ರಂಗನಾಥ್ ಜೀ.

ಒಂದು ಪುಸ್ತಕ ಹುಡುಕಲು ಹೋಗಿ ಅಮೂಲ್ಯ 07 ಪುಸ್ತಕಗಳು ದೊರೆತವು. ಸಮಗ್ರ ಕಾವ್ಯ, ಕಥೆಗಳು ಯಾವುದೇ ಇರಲಿ ನಮಗೆ ಲೇಖಕನ ಹೆಜ್ಜೆ ಗುರುತುಗಳ ಪರಿಚಯ ಮಾಡಿಸುತ್ತದೆ. ಅವರ ಸಾಹಿತ್ಯ ಸಾಗಿಬಂದ ಬೆಳೆದುಬಂದ ರೀತಿ ಯ ಸಮಗ್ರ ಕುರುಹುಗಳನ್ನು ತೋರಿಸು‌ ತ್ತದೆ. ಅಲ್ಲದೆ ಅಡಕವಾಗಿರುವುದರಿಂದ ಸಂಗ್ರಹ ಶೋಧನೆ ಸುಲಭ.

ನನ್ನ ಬಳಿ ಕಾವ್ಯ ಪ್ರಬಂಧ ವಿಮರ್ಶೆಗಳಂತಹ ಗಂಭೀರ ಸಾಹಿತ್ಯ ಸಂಗ್ರಹ ಹೆಚ್ಚು.  ಈ ಬಾರಿ ಕಾದಂಬರಿಗಳ ಖರೀದಿ ಕಡೆ ಗಮನವನ್ನು ಹರಿ ಸೋಣ ಎಂದುಕೊಂಡಿದ್ದೆ. ಗೌರಿ ಗಣೇಶಹಬ್ಬ ಕ್ಕೆ ಸೀರೆಯ ಬದಲು ಕಾದಂಬರಿಗಳು ಅಂತ ನಿರ್ಧರಿ ಸಿದಾಗ ಮೊನ್ನೆ ವರಮಹಾಲಕ್ಷ್ಮಿ ಹಬ್ಬ ದ ದಿನ ಸರಸ್ವತಿಯ ಅನುಗ್ರಹ.ಸಾಯಿಸುತೆ ಸಾಹಿತ್ಯ‌ ಬಳಗದವರು ಏರ್ಪಡಿಸಿದ್ದ “ಸಾಯಿಸುತೆಯ ವರ ಕಾದಂಬರಿಗಳಲ್ಲಿ ನೈತಿಕತೆ” ಲೇಖನ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನ ವೆಂದು ಸಾಯಿಸುತೆ ಯವರ 20 ಪುಸ್ತಕಗಳು ನನ್ನದಾಗಿವೆ.ನನ್ನ ಸಂಗ್ರಹದ ಆಶಯಕ್ಕೆ ಒಳ್ಳೆಯ ಆರಂಭ.

ನನ್ನ ಸಂಭ್ರಮದ ಅನುಭಗಳನ್ನು ಹಂಚಿಕೊಳ್ಳ ಲು ವೇದಿಕೆಯಾದ ಶ್ರಾವಣ ಬ್ಲಾಗ್ ಗೆ ಹಾಗೂ ಸಂಪಾದಕರಾದ ರವಿಶಂಕರ್ ಅವರಿಗೆ ಹೃತ್ಪೂ ರ್ವಕ ಧನ್ಯವಾದಗಳು.

ಸುಜಾತಾ ರವೀಶ್, ಮೈಸೂರು