ಆತ್ಮೀಯರೆ, ನಿಮಗೆಲ್ಲ ತಿಳಿದಿರುವಂತೆ ಇದೇ ವರ್ಷ ಶಬ್ದಗಾರುಡಿಗ,ವರಕವಿ,ಶ್ರಾವಣ ಪ್ರತಿಭೆ ಡಾ.ದ.ರಾ.ಬೇಂದ್ರೆ ಯವರ ೧೨೫ ನೇ ಜನ್ಮ ದಿನದ ಸುಸಂದರ್ಭದಲ್ಲಿ ಸಮಾನ ಮನಸ್ಕರ ಸ್ನೇಹಿತರು, ಸಹೃದಯಿಗಳು ಹಾಗೂ ಹಿತೈಶಿಗಳ ಸಹಕಾರದೊಂದಿಗೆ ಹುಬ್ಬಳ್ಳಿ- ಧಾರವಾಡನಗರ ಗಳನ್ನು ಕೇಂದ್ರವಾಗಿರಿಸಿಕೊಂಡು “ಶ್ರಾವಣ” ಸಾಹಿತ್ಯಿಕ ಬ್ಲಾಗ್ ಪ್ರಾರಂಭಿಸಲಾಯಿತು. ಈ ನಡುವೆ ಕೊವಿಡ್ ಕಾರಣಕ್ಕೆ, ಲಾಕ್ ಡೌನ್ ಹಾಗೂ ಸಭೆ- ಸಮಾರಂಭ ನಡೆಸಲು ವಿಧಿಸ ಲಾದ ನಿಯಮಗಳ ಕಾರಣಗಳಿಂದ ಬ್ಲಾಗ್ ನ ಉದ್ಘಾಟನೆಯನ್ನು ಮುಂದೂಡಲಾಗಿತ್ತು. ಪ್ರಸ್ತು ತ ಶ್ರಾವಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ, ಹುಬ್ಬಳ್ಳಿ-ಧಾರವಾಡ ಇದರ ಅಡಿಯ ಲ್ಲಿ ಶ್ರಾವಣ ಬ್ಲಾಗ್ ನ ವಿದ್ಯುಕ್ತ ಉದ್ಘಾಟನಾ ಕಾರ್ಯಕ್ರಮವನ್ನು ದಿ:೧೨/೧೨/೨೦೨೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸುವರ್ಣ ಸಾಂಸ್ಕೃತಿ ಕ ಸಮುಚ್ಚ ಯ ರಂಗಾಯಣ, ಧಾರವಾಡ ಇಲ್ಲಿ ಹಮ್ಮಿ ಕೊಳ್ಳಲಾಗಿದೆ. ಈ ಸಮಾರಂಭಕ್ಕೆ ತಮ್ಮೆಲ್ಲರ ನ್ನು ಹೃತ್ಪೂರ್ವಕವಾಗಿ ಆಮಂತ್ರಿಸು ತ್ತೇನೆ‌.

ಪುಸ್ತಕ ಬಿಡುಗಡೆ

ಈ‌ ಸಮಾರಂಭದಲ್ಲಿ ಶ್ರಾವಣದ ಅಂಕಣಕಾರ ರಾದ ಶ್ರೀಮತಿ. ಅನಸೂಯ ಜಹಗೀರದಾರ, ಕೊಪ್ಪಳ ಇವರು ಬರೆದ ಆತ್ಮಾನುಸಂಧಾನ (ಗಜಲ್ ಗಳು),ನೀಹಾರಿಕೆ (ಹನಿಗವನಗಳು) ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಸನ್ಮಾನ

ಪಂ.ಪಂಚಾಕ್ಷರಿ ಗವಾಯಿಗಳವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ,ಗದಗ ಇಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ನಿವೃತ್ತರಾದ ಡಾ.ಎಸ್.ಎಸ್.ಶೀಲಿಮಠ ಇವರು ಶೈಕ್ಷಣಿಕ‌ ಕ್ಷೇತ್ರ ಹಾಗೂ ವೇದಾಧ್ಯನ ಕ್ಷೇತ್ರದಲ್ಲಿ ಸಲ್ಲಿಸಿರು ವ ಗಣನೀಯವಾದ ಸೇವೆಗಾಗಿ ಭಾರತೀಯ ವೃತ್ತಿಪರ ಶೈಕ್ಷಣಿಕ ಮಿಷನ್ ನ ಭಾಗವಾಗಿರುವ ತಮಿಳುನಾಡಿನ ಯುನಿವರ್ಸಲ್ ಡೆವೆಲಪ್ ಮೆಂಟ್ ಕೌನ್ಸಿಲ್ ನ “ಎಂಪೈರ್ ಯುನಿವ ರ್ಸಿಟಿ”ಯುಗೌರವ ಡಾಕ್ಟರೇಟ್ ಪದವಿ” ನೀಡಿದ ಪ್ರಯುಕ್ತ ಸಮಾರಂಭದಲ್ಲಿ ಡಾ.ಎಸ್. ಎಸ್.ಶೀಲಿಮಠ ಇವರನ್ನು ಸನ್ಮಾನಿಸಿ ಗೌರವಿ ಸಲಾಗುವುದು.

ಕವಿಗೋಷ್ಠಿ

ಶ್ರಾವಣ ಬ್ಲಾಗ್ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಹೃದಯಿ ಸಾಹಿತ್ಯ ಪ್ರೇಮಿಗಳಿಗಾಗಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ೨೭ ಪ್ರತಿಭಾವಂತ ಕವಿ ಗಳು ತಮ್ಮ ಕವನಗಳನ್ನು ಪ್ರಸ್ತುತಪಡಿಸಲಿ ದ್ದಾರೆ.

ಕಾರ್ಯಕ್ರಮದ ಅತಿಥಿಗಳು

ಡಾ.ಡಿ.ಎಂ.ಹಿರೇಮಠ ಅಧ್ಯಕ್ಷರು,   ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ

ಸಮಾರಂಭದ ಅಧ್ಯಕ್ಷತೆಯನ್ನು ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಇವರು ವಹಿಸಿಕೊಳ್ಳ ಲಿದ್ದು, ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಡಾ.ಬಾಳಣ್ಣ ಶೀಗಿಹಳ್ಳಿ ಇವರು ನೆರವೇರಿಸಿಕೊಡಲಿದ್ದಾರೆ.

ಡಾ.ಬಾಳಣ್ಣ ಶೀಗಿಹಳ್ಳಿ ಹಿರಿಯ ಸಾಹಿತಿಗಳು, ಧಾರವಾಡ

ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಡಾ.ಬಸು ಬೇವಿನಗಿಡದ, ಸಾಹಿತಿಗಳು ಹಾಗೂ ನಿರ್ದೇಶಕರು ಆಕಾಶವಾಣಿ ಧಾರವಾ ಡ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಡಾ.ಬಸು ಬೇವಿನಗಿಡದ ಸಾಹಿತಿಗಳು ಹಾಗೂ ನಿರ್ದೇಶಕರು ಆಕಾಶವಾಣಿ, ಧಾರವಾಡ

ನಮ್ಮೊಂದಿಗೆ ಶ್ರಾವಣ ಬ್ಲಾಗ್ ನ ಗೌರವ ಸಲಹೆಗಾರರಾದ ಸಾಹಿತಿಗಳಾದ ಶ್ರೀಪ್ರಕಾಶ ಕಡಮೆ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ರಂಗಭೂಮಿ ಚಿಂತಕರಾದ ಶ್ರೀ ಅರವಿಂದ ಕುಲಕರ್ಣಿ ಇರಲಿದ್ದಾರೆ. ಆತ್ಮೀಯರಾದ ಶಿವಾನಂದ ನಾಗೂರ, ಪ್ರಕಾಶ ಬಾಳಿಕಾಯಿ, ರಾಮಚಂದ್ರ ಪತ್ತಾರ, ಶ್ರೀಧರ ಗಸ್ತಿ, ಶ್ರೀಮತಿ. ಸವಿತಾ ಲಿಂಗಾರೆಡ್ಡಿ,ಡಾ. ಸರೋಜಾ ಮೇಟಿ, ಶ್ರೀಮತಿ.ಶಾಲಿನಿ ರುದ್ರಮುನಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಧಾರವಾಡದ ಪುಟಾಣಿ ಗಳಾದ ಕು.ಜೀವಿತ ಹೊಳೆ ಆಲೂರ ಹಾಗೂ ಖುಷಿ ಪಾಟೀಲ ಇವರು ಬೇಂದ್ರೆಯ ವರ ಗೀತ ಗಾಯನದ ಮೂಲಕ ನಮ್ಮೆಲ್ಲರನ್ನು ರಂಜಿಸಲಿ ದ್ದಾರೆ.

ನಮ್ಮ ಸಂಭ್ರಮ ಹೆಚ್ಚಿಸಲು ಕನ್ನಡ ಕಲಾ ಕೃಷಿ ಬಳಗ ಹುಬ್ಬಳ್ಳಿ, ಧಾರವಾಡ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್,ಸೌಹಾರ್ದ ಸಾಹಿತ್ಯವೇದಿಕೆ ಹುಬ್ಬಳ್ಳಿ, ಸದಭಿರುಚಿ ಸೃಜನಶೀಲ‌ ಬಳಗ ಧಾರವಾಡ, ಕನ್ನಡ ಸಾಹಿತ್ಯ ಸಂಪದ ಹುಬ್ಬಳ್ಳಿ, ಕುಮಾರೇಶ್ವರ ಕಲ್ಚುರಲ್ ಸೊಸೈಟಿ ಧಾರವಾಡ ಈ ಎಲ್ಲ ಸಂಘಟನೆಗಳು ಸಹಕಾರ ನೀಡಿವೆ.

ಈ ಸಂತಸದ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಲಿರುವ ಶ್ರಾವಣದ ಬರಹಗಾರರು, ಓದುಗರು,ಅಭಿಮಾನಿ ಗಳು,ಹಿತೈಶಿಗಳನ್ನು ಶ್ರಾವಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ, ಹುಬ್ಬಳ್ಳಿ-ಧಾರವಾಡ ಇದರ ಪರವಾಗಿ ಹಾಗೂ ಶ್ರಾವಣದ ಸಂಪಾದಕನಾಗಿ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.

✍️ರವಿಶಂಕರ ಗಡಿಯಪ್ಪನವರ ಸಂಪಾದಕರು,ಶ್ರಾವಣ ಬ್ಲಾಗ್      ಹುಬ್ಬಳ್ಳಿ