ಪ್ರತಿಬಾರಿಯೂ ಎಲ್ಲದರಲ್ಲೂ
ನನ್ನೆದುರು ಸೋಲುತ್ತಾನೆ..
ಗೆಲ್ಲುವ ಛಾತಿ ಇಲ್ಲವೆಂದಲ್ಲ
ಸೋಲು ಸ್ವೀಕರಿಸಿ ಸಹಿಸುವ
ಛಾತಿ ಶಕ್ತಿ ನನಗಿಲ್ಲವೆಂದು.!

ತಪ್ಪು ನನ್ನದಿದ್ದರೂ ಅವನೇ
ಕ್ಷಮೆಯಾಚಿಸಿ ಶರಣಾಗುತ್ತಾನೆ
ಅವನಿಗೆ ಆತ್ಮಗೌರವವಿಲ್ಲವೆಂದಲ್ಲ
ಆತ್ಮಗೌರವಕಿಂತಲೂ ಒಲವಿನ
ಅನುಭಾವ ಬಲುದೊಡ್ಡದೆಂದು.!

✍️ಎ.ಎನ್.ರಮೇಶ್ ಗುಬ್ಬಿ