ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ವಂತಿಕೆ ಯಿದೆ. ಮಾತು ಬಾರದ ಹಾಗು ಮಾತಿಗೆ ನಿಲು ಕದ ಜೀವಿಗಳು ಕೋಟ್ಯಾಂತರ.ಅಂತಹುಗಳ ಬದುಕುವ ಛಲ ಯಾರಿಗಿದೆಯೋ ಅವರ ಬದುಕು ಧನ್ಯ. ಒಂದು ಹುಲ್ಲು ಕಡ್ಡಿಗೂ ಕೂಡ ಅದರದೇ ಆದ ಮಿಡಿತವಿದೆ. ಕಾನನದ ಮೂಲೆ ಮೂಲೆಯಲ್ಲಿ ಚಿಗುರುವ ಮರಗಿಡ ಗಳು, ಬಳ್ಳಿಗಳೂ ಎಂದಿಗೂ ದ್ವೇಷಮಾಡಿಲ್ಲ. ಅವು ಚಿಗುರುವು ದನ್ನು ಬಿಟ್ಟಿಲ್ಲ. ನವಜಾತ ಶಿಶುವಿಗೆ ತೊಟ್ಟಿಲಾಗಿ,ಗುಲಗಂಜಿಯಾಗಿ, ಆಟಿಗೆ ಸಾಮಗ್ರಿ ಗಳಾಗಿ ನಿರಾಳವಾಗಿ ಬೆರೆತು ಹೋದವುಗಳನ್ನು ಮರೆಯಲು‌ ಸಾಧ್ಯವಿಲ್ಲ.

ಮಕ್ಕಳು ಮೌನದ ಹಾದಿಹಿಡಿದಂತೆಲ್ಲ ಪಾಲಕ ರ ತಲೆ ಬಿಸಿ ಇಮ್ಮಡಿಸುತ್ತದೆ.ಮಕ್ಕಳ ಮನಸ್ಥಿತಿ ಬಿಗಡಾಯಿಸುವ ಮೊದಲೇ ಸುಧಾರಿಸಿಕೊಳ್ಳ ದ ಪಾಲಕರಿಗೆ ಏನು ಹೇಳಬೇಕು? ಅದೊಂದು ಬರ ಸಿಡಿಲು ಬಡಿದಂತಹ‌ ಸುದ್ದಿ.ಮೃದು ಸ್ವಭಾ ವದ ಹಾಗೂ ಸೂಕ್ಷ್ಮಗುಣದ ಮಗು ಯಾರೊ ಟ್ಟಿಗೂ ಬೆರೆತ ನಿದರ್ಶನಗಳು ಕಡಿಮೆ. ಮನೆ, ಶಾಲೆ ಹೊರತು ಪಡಿಸಿದರೆ ಸಂಬಂಧಿಕರ ಬಳಿಗೂ ಸುಳಿಯಲು ಇಷ್ಟಪಡದ ಮಗು. ಎಲ್ಲರೂ ಮಾನ ಸಿಕ ಅಂತ ತಿಳಿದು ಸುಮ್ಮನಾ ಗಿದ್ದರು. ಒಂಟಿ ಯಾಗಿರಲು ಬಯಸುತ್ತಿತ್ತು. ಅದರ ಒಳನೋವು ಎಲ್ಲರೂ ನಮ್ಮಮನೆಯ ಸುದ್ದಿಮಾತಾಡುವುದೇ ಆಗಿತ್ತು. ಒಂದು ಮಾತು ಹೇಳದೆ ಹಂಚಿಕೊಳ್ಳದೆ ಹಗಲು ರಾತ್ರಿ ಜಗಳದ ಕುಲಾಯಿ ಹೊತ್ತು ಮಕ್ಕ ಳೆದುರು ಹೊಡೆದಾಡುತ್ತಿದ್ದರೆ ಆ ಮೃದು ಮಗು ವಿನ ಮನಸ್ಸು ದಿನದಿಂದ ದಿನಕ್ಕೆ ಕುಗ್ಗುತ್ತಿತ್ತು. ಇದನ್ನು ಗಮನಿಸದೇ ಜಗಳ ರಕ್ತಪಾತದಲ್ಲೇ ಕೊನೆಗೊಳ್ಳುವ ದೃಶ್ಯ ಹೊಸದಾಗಿರದೇ ಮುಜು ಗರಕ್ಕೆ ಈಡುಮಾಡುತ್ತಿರುವ ಘಟನೆ ಗಳು ಎಳೆ ಮನಸ್ಸಿನ ಮೇಲೆ ಬರೆ ಎಳೆದಂತಾಗಿ ಮೌನದ ಬೀಗಮುದ್ರೆಯೊತ್ತಿ, ಇವರೇನೋ ದ್ವೇಷಕಾರಿ ಮಗ್ಗಲು ಬದಲಿಸಿದರು. ಬೆಳಗಾಗು ವುದರೊಳಗೆ ಪ್ಯಾನಿಗೆ ನೇತಾಡುತ್ತಿರುವ ಮಗನ ಮೃತ ದೇಹ ಕಂಡು ಮರುಗಿದರೇನು ಬಂತು?

ಹಿಂಗಾಗ ಬಾರದಿತ್ತು ಪಾಪಮಗು ದುಡುಕಿ- ತೆಂದು ಮರುಗಿದವರಿಗೇನು ಫಲ! ಬದುಕಿನ ಅಂತ್ಯ ಹೀಗಾಗುವುದೆಂದು ಯಾರೂ ಊಹಿಸ ದ ಕ್ಷಣಗಳು.ನೂರು ಮಾತು,ನೂರು ವೇಷ ಯಾವುದೂ ನಿಖರತೆಯಿಲ್ಲ. ಮೂಲೆ ಸೇರಿದ ಮನಗಳು, ಎಷ್ಟೋ ಕುಟುಂಬಗಳಲ್ಲಿ ಮಕ್ಕಳು ಮನೆಬಿಟ್ಟು ಹೋದ ಪ್ರಸಂಗಗಳು ಕಾಣಸಿಗು ತ್ತವೆ.ಅಡ್ಡಹಾದಿ ಹಿಡಿದ ಕಂದಮ್ಮಗಳು,ಇನ್ನು ಕೆಲವು ನೋವುನುಂಗಿ ಸಂಸಾರದ ಹೊಣೆ ಹೊ‌ತ್ತು ಕಮರಿದ ಕುಸುಮಗಳು ಹೆತ್ತವರ ಪಾಲಿಗೆ ಹೊಟ್ಟೆ ಹೊರೆವ ಸಾಮಗ್ರಿಮಾತ್ರ. ಎಷ್ಟೋ ಪಾಲಕರು ಸರಳ ಸಂಪನ್ನರಾಗಿದ್ದ ರೂ ಮಕ್ಕಳ ಮನವರಿಯುವಲ್ಲಿ ಎಡವುತ್ತಿರು ವುದು ವಿಪರ್ಯಾಸ! ಹಿತ್ತಲಗಿಡ‌ ಮದ್ದಲ್ಲ ಎಂಬಂತೆ. ಕಾಲದ ಹವಾಮಾನ ಬದಲಾವಣೆ ಯಾದಂತೆ ಅದಕ್ಕೆ ತಕ್ಕಹಾಗೆ ಇಂದಿನ ಮಕ್ಕಳ ಕಲ್ಪನೆಯು ಅಗಾಧವೆಂದರೆ ತಪ್ಪಾಗದು. ಐದು ಬೆರಳು ಸಮ ನಾಗಿಲ್ಲ. ಕಷ್ಟ ಕಾರ್ಪಣ್ಯಕ್ಕೆ ಒಗ್ಗಿದ ಹಸುಗೂಸು ಗಳು ತೇಲುವವೆಷ್ಟೋ ಮುಳುಗು ವವೆಷ್ಟೋ. ಹೆತ್ತ ಮಾತ್ರಕ್ಕೆ ಕರ್ತವ್ಯ ಮುಗಿಯ ಲಿಲ್ಲ. ಸಾಕಿ ಸಲಹುವ ಪ್ರತಿ ಗಳಿಗೆ ಯಲ್ಲಿ ನಮ್ಮ ನಡವಳಿಕೆ ಗಳ ನೇರಪರಿಣಾಮ ಅನುಭವಿಸುವವರು ನಮ್ಮ ಕಂದಮ್ಮಗಳು. ಹೀಗಾಗಿ ಎಲ್ಲಿ ಹೇಗಿರ ಬೇಕು? ಮಕ್ಕಳೆದುರು ಹೇಗೆ ನಡೆದುಕೊಳ್ಳ ಬೇಕು? ಮಗುವಿನಲ್ಲಿ ಮೌಲ್ಯ ತುಂಬುವ ಬಗೆ ಯಾಂತ್ರಿಕ ಕೆಲಸದಂ ತಾಗದೇ ಅದು ನೈಜತೆಯ ಪ್ರತಿಬಿಂಬವಾದರೆ ಮಾತ್ರ ಸಾರ್ಥಕ.

ಬಾಲ್ಯ ಕಸಿಯದಂತೆ,ಮಗುವಿನ ಕನಸಿಗೆ ನೀರೆರೆ ದು ಬೆಳೆಸುವ ಗಾರ್ಡನ್ ನಿರ್ಮಿಸ ಬೇಕಿದೆ.ಪುಟ್ಟ ಕೈಗಳು ಪರಿಸರವ ಬಿಗಿದಪ್ಪಿ ಹೊಸಗನಸು ಚಿಗುರಿಸಲು ನಾವುಗಳು ಶ್ರಮಿಸ ಬೇಕಿದೆ. ಸಂಸಾರದ ಹಳಿತಪ್ಪಿದ ರೈಲಂತಾದರೆ ಅದರಲ್ಲಿ ಪ್ರಯಾಣಿಸುವ ಜೀವಗಳು ಉಳಿದಾವೆ? ಭಾವಿ ಭವಿಷ್ಯದ ಸ್ವಪ್ನ ಒಬ್ಬರಿಂದ ಸಾಧ್ಯವಿಲ್ಲ. ನಮ್ಮೊ ಳಗಿನ ಇರಿಸು ಮುರಿಸುಗಳ ಹೊರ ಹಾಕಿ ಮನೆ ಯ ವಾತಾವರಣ ಕಲುಷಿತಗೊಳಿಸಿದರೆ ನೆಮ್ಮದಿ ಎಲ್ಲಿಂದ? ಏಕಾಗ್ರತೆ ಬರಬೇಕಾದ ಸಮಯ ದಲ್ಲಿ ಚಿತ್ತ ಕೆರಳಿಸುವ ಘಟನೆಗಳು ಮರುಕಳಿ ಸದಂತೆ ಸೂಕ್ತಕ್ರಮ ಕೈಗೊಳ್ಳಬೇಕಾದುದು ನಮ್ಮ ಜವಾ ಬ್ದಾರಿ. ಮೊದಲು ನಾವು ನುಡಿ ದಂತೆ ನಡೆದು, ಮಗುವಿಗೆ ಮಾದರಿಯಾದರೆ ಸೂಕ್ತವಲ್ಲವೆ? ಬಾಲ್ಯ ಕಸಿಯದಿರಿ.ಬುನಾದಿ ಯನ್ನು ಭದ್ರಪಡಿಸಿ ದರೆ ಮಾತ್ರ ಮುಂದಿನ ಅಸ್ತಿತ್ವಕ್ಕೆ ನಾಂದಿ ಹಾಡಿ ದಂತೆ. ಒಮ್ಮೆ ಯೋಚಿ ಸುವುದು ಒಳಿತಲ್ಲವೆ?

 ✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ