ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಶಿಕ್ಷಕ, ಪ್ರಾಧ್ಯಾಪಕ,ಪ್ರಾಚಾರ್ಯ ಆಡಳಿತ ಮಂಡಳಿ ಯ ಸಹಾಯ, ಸಹಕಾರ, ಭಾಗವಹಿಸುವಿಕೆ ಎಲ್ಲವೂ ಅವಶ್ಯಕ. ಇದಕ್ಕೆ ತರಬೇತಿ, ಚರ್ಚೆ, ಕಲಿಕಾ ಸಾಮಗ್ರಿ ತಯಾರಿಕೆ, ಆಂತರಿಕ ಸೌಲಭ್ಯ ಗಳು ಹೀಗೆ ಇತ್ಯಾದಿಗಳು ಬೇಕು.

ಅಷ್ಟೇ ಅಲ್ಲ ಮೂಲಭೂತವಾಗಿ ಹೊಸ ನೀತಿ ದೇಶದ ತುಂಬೆಲ್ಲ ಏಕಕಾಲದಲ್ಲಿ ನಾಲ್ಕು ಹಂತ ಗಳಲ್ಲಿ ಅನುಷ್ಠಾನಗೊಂಡರೆ ಅನುಕೂಲ. ಆದರೆ ಹಾಗೆ ಆಗುವ ಲಕ್ಷಣಗಳು ಕಾಣಿಸ್ತಾ ಇಲ್ಲ ಅನ್ನು ವುದು ವಿಷಾದದ ಸಂಗತಿ.
ಈಗ ನಾವು ಮಕ್ಕಳ ಚಿಕ್ಕ ವಯಸ್ಸಿನಲ್ಲಿ ಅಂದರೆ ಬೆಳವಣಿಗೆಯ ಮೊದಲ ಹಂತದಲ್ಲಿ ಲಕ್ಷ್ಯ ಕೇಂದ್ರಿಕರಿಸಿದಾಗ ಅವರಿಗೆ ಅನುಕರಣೆ ಗೆ ಸರಳ ವಾಗಿ ಗ್ರಹಿಕೆಯಾಗಿ ಮತ್ತೆ ಅವರ ವರ್ತನೆ ಮತ್ತು ವೈಚಾರಿಕ ಚಿಂತನೆಗಳಿಗೆ ದಾರಿಗಳನ್ನು ನಿರ್ಮಿಸ ಲು ಭದ್ರ ಬುನಾದಿ ಒದಗಿಸಲು ಯೋಗ್ಯವಾಗು ತ್ತದೆ. ಇದಕ್ಕಾಗಿ ನಾಟಕ ಅಥವಾ ರಂಗಭೂಮಿ ಯ ತಂತ್ರಗ ಳನ್ನು ಗಮನಿಸುವುದು ಮುಖ್ಯ. ಅವುಗಳು ಯಾವವೆಂದರೆ:
1.ಅನುಸರಿಸುತ್ತ ಸುಧಾರಣೆ ಸಾಕಾರ (ಇಂಪ್ರೊ ವೈಜೇಶನ್) ಗೊಳಿಸಿಕೊಳ್ಳುವದು. 2. ಪಾತ್ರಗಳ ಜತೆ ಪರಕಾಯ ಪ್ರವೇಶದ ಆಟ 3.ಮೂಕಾಭಿನಯ. 4.ವಿವಿಧ ಪಾತ್ರಗಳ ವಿಶ್ಲೇಷಣೆ ಮತ್ತು ಅದರ ಪ್ರಕಾರ ಇಬ್ಬರ ಅಥವಾ ಸಮೂಹದ ಜತೆ ಹೇಗೆ ಒಳ್ಳೆಯದಾಗಿ ವಿಚಾರ ವಿನಿಮಯ ಮತ್ತು ಸಂವ ಹನಶೀಲತೆ ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆಗಳ ನ್ನು ಅನುಷ್ಟಾನಗೊಳಿಸಬಹುದು ಅನ್ನುವುದನ್ನ ಗಮನಿಸುವದು.

ರಂಗಭೂಮಿಯ ತತ್ವಗಳನ್ನು ಶಿಕ್ಷಣದಲ್ಲಿ ಅಳ ವಡಿಸಿದಾಗ, ಅದು ವಿದ್ಯಾರ್ಥಿಗಳಿಗೆ ಅವರ ಕಲಿಕೆ ಮತ್ತು ವರ್ತನೆಗಳು ತಮ್ಮಸಹಪಾಠಿ-ಗಳ, ಸುತ್ತಮುತ್ತಲು ಇರುವ ಜನರ ವರ್ತನೆ ಮತ್ತು ಚಿಂತೆನಗಳು ಹೇಗೆ ಪ್ರಭಾವ ಬೀರುತ್ತವೆ ಅನ್ನು ವದು ಅರಿವಾಗಿ ಸರಿಯಾದ ಪರ್ಯಾ ಯ ವಿಧಾನ, ತಂತ್ರಗಳ, ಹೊಸ ದಾರಿಗಳ ಹುಡುಕಿ ಕೊಳ್ಳುವ ಬಗ್ಗೆ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿ ಗಳಿಗೆ ಒಳ ದೃಷ್ಟಿಕೋನಗಳನ್ನು ಅದರಲ್ಲಿಯೂ ಕೆಟ್ಟವರ್ತನೆ ಮತ್ತು ವ್ಯಕ್ತಿತ್ವ ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಶಾಲೆ ಯಲ್ಲಿ ಒಂದು ಚಿಂತನ ಶೀಲ, ಸುಸಂಸ್ಕೃತ ವಿದ್ಯಾರ್ಥಿ ಸಮುದಾಯ ನಿರ್ಮಿಸುವಲ್ಲಿ ನೆರವಾ ಗುತ್ತದೆ. ನಾಟಕ ಮತ್ತು ಕಲಾ ಪ್ರಕಾರ ಗಳ ಶಿಕ್ಷಣ ಸಂಪೂರ್ಣ, ಸಮಗ್ರ ವ್ಯಕ್ತಿತ್ವ ನಿರ್ಮಾಣ ಮಾಡುವುದಷ್ಟೇ ಅಲ್ಲದೆ, ಒಳ್ಳೆಯ ಮನಸುಗಳ ಮೂಲಕ ಸುಸಂಸ್ಕೃತ ವ್ಯಕ್ತಿತ್ವಕ್ಕಾಗಿ ವೇಗವರ್ಧ ಕ ವಾಗುತ್ತದೆ. ಜೀವನಕ್ಕೆ ಬೇಕಾಗುವ ಕೌಶಲ್ಯ ಗಳನ್ನು ವ್ಯಕ್ತಿತ್ವದಲ್ಲಿ ಅಂತರ್ಗತಕ್ಕೂ ನೆರವಾ ಗುತ್ತದೆ. ಶಿಕ್ಷಕರು ಅದಕ್ಕಾಗಿ ಸೃಜನಶೀಲ ರಂಗ ಭೂಮಿಯ ಕಲೆಗಳನ್ನು ಹುಡುಕುತ್ತ, ತಾವೂ ಕಲಿಯುತ್ತಾ, ಪ್ರಯೋಗಿಸುತ್ತ ತಮ್ಮ ಮತ್ತು ವಿದ್ಯಾರ್ಥಿಗಳ ಪದ ಭಂಡಾರದ ಅಭಿವೃದ್ಧಿ ಹೆಚ್ಚಿಸಿಕೊಳ್ಳುತ್ತ ಜಗತ್ತನ್ನು ಗುರುತಿಸುವದು.

ರಂಗ ಶಿಕ್ಷಣ ವಿದ್ಯಾರ್ಥಿ ಗಳ ಆಲಿಸುವಿಕೆ ಅಥವಾ ಕೇಳುವಿಕೆ ಯ ಕೌಶಲ್ಯಗಳ, ಮೌಖಿಕ ಅಭಿವ್ಯಕ್ತಿ,, ಲೇಖನ ಕೌಶಲ್ಯಗಳು ಹೆಚ್ಚಿಸುತ್ತವೆ. ಸೃಜನಶೀಲತೆಯ ರಂಗಭೂಮಿ ಹೊಸ ಪರ ಭಾಷೆಗಳನ್ನು ಕಲಿ ಯಲು ಬಹಳ ಅನುಕೂಲ.
(ಸಶೇಷ)
✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ