ವಾಸ್ತುಶಿಲ್ಪದ ಮೇರು ದೇವಾಲಯಗಳ ನೆನಪು ಮಾಡಿಕೊಳ್ಲುವಾಗಲೆಲ್ಲ ರಾಜ್ಯದ ದಕ್ಷಿಣ ಭಾಗ ದದಲ್ಲಿ ವಿಷೇಶವಾಗಿ ಹಳೆಯ ಮೈಸೂರು ಭಾಗ ದಲ್ಲಿ ನಮಗೆ ನೆನಪಾಗುವು ದು ಹೊಯ್ಸಳರ ದೇವಾಲಯಗಳು. ಅವರ ದೇವಾಲಗಳಲ್ಲಿನ ಹೊರ ಭಿತ್ತಿ ಹಾಗು ದೇವಾಲ ಯದ ಕೆತ್ತೆನೆ ಶಿಲ್ಪಾ ಕಲಾ ಲೋಕದ ಬೆರಗನ್ನೆ ನಮ್ಮ ಬಳಿ ತೆರೆದಿಡು ತ್ತದೆ.ಅಂತಹುದೇ ಅಧ್ಬುತ ದೇವಾಲಯಗಳಲ್ಲಿ ಮಂಡ್ಯ ಜಿಲ್ಲೆಯ ಬಸರಾಳಿನ ಮಲ್ಲಿಕಾರ್ಜುನ ದೇವಾಲಯ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

ಈ ದೇವಾಲಯವನ್ನು ಕ್ರಿ.ಶ.೧೨೩೪ ರಲ್ಲಿ ಇಮ್ಮಡಿ ನರಸಿಂಹನಾಯಕನ ದಂಡನಾಯಕ ನಾಗಿದ್ದ ಹರಿಹರ ತನ್ನ ತಂದೆಯ ಹೆಸರಿನಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ತನ್ನ ಹುಟ್ಟೂ ರಾದ ಬಸರಾಳಿನಲ್ಲಿ ಸ್ಥಾಪಿಸಿದ. ತನ್ನ ತಾಯಿಯ ಹೆಸರಿನಲ್ಲಿ ಇಲ್ಲಿ ಕೆರೆಯನ್ನು ಸಹ ನಿರ್ಮಿಸಿದ. ಹೊಯ್ಸಳರ ಕಾಲದಲ್ಲಿ ದಂಡ ನಾಯಕರು ನಿರ್ಮಿಸಿದ ದೇವಾಲಯಗಳಲ್ಲಿ ಪ್ರಮುಖವಾದ ದೇವಾಲಯ ಇದು. ದೇವಾಲಯದ ನಿರ್ವಹ ಣೆಗೆ ದತ್ತಿ ನೀಡಿದ ಉಲ್ಲೇಖವಿದ್ದು, ದೇವಾಲಯ ವನ್ನು ನಿರ್ವಹಿ ಸುವ ಎಲ್ಲರಿಗೂ ವೇತನ ನಿಗದಿಪಡಿಸಿರುವು ದು ಇಲ್ಲಿನ ವಿಶೇಷ. ಇತಿಹಾಸದ ಪುಟದಲ್ಲಿ ಈ ಊರನ್ನು ಬಸುರಿವಾಳ್ ಎಂದು ಕರೆಯ ಲಾಗಿದೆ.
ನವರಂಗ ದ್ವಾರದಲ್ಲಿ ತಾಂಡವೇಶ್ವರ ಕೆತ್ತೆನೆ ಇದ್ದು ಸರಸ್ವತಿ, ಮಹಿಷಮರ್ದಿನಿ,ಸಪ್ತಮಾತೃ ಕೆ ಹಾಗು ಗಣೇಶನ ಶಿಲ್ಪಗಳಿದ್ದ ದ್ವಾರದಲ್ಲಿ ಶೈವದ್ವಾರಪಾಲ ಕರ ಕೆತ್ತೆನೆ ನೋಡಬಹುದು. ಇದರ ಮುಂದೆ ಚಿಕ್ಕ ದಾದ ದೇವಾಲಯದ ಆವರಣದಲ್ಲಿ ಚಿಕ್ಕ ಮಂಟಪವಿದ್ದು, ಇಲ್ಲಿ ನಾಲ್ಕು ಅಡಿ ಎತ್ತರದ ಸುಂದರ ನಂದಿಯ ಶಿಲ್ಪವಿದೆ. ದೇವಾಲಯದ ಉತ್ತರ ಹಾಗು ದಕ್ಷಿಣ ದ್ವಾರದ ಎರಡೂ ಭಾಗಗ ಳಲ್ಲಿ ಇರುವ ಎತ್ತರದ ಆನೆಗಳು ಗಮನ ಸೆಳೆ ಯುತ್ತವೆ. ಆನೆಯ ಸೊಂಡಿಲಿನಲ್ಲಿನ ಹಾಗು ಕೆಳ ಭಾಗದ ಕೆತ್ತೆನೆಗಳು ಬಹುಶ: ಹರಿಹರ ಸೇವುಣರ ಮೇಲೆ ಜಯ ಸಾಧಿಸಿದರ ಸಂಕೇತವಾಗಿ ಇರ ಬಹುದು. ದೇವಾಲಯಕ್ಕೆ ಔತ್ತರೇಯ ದ್ರಾವಿಡ ಮಾದರಿಯ ಸುಂದರ ಕೆತ್ತೆನೆಯ ಚತುರ್ರಸ ಶಿಖರವಿದೆ.

ಈ ದೇವಾಲಯ ಹೊಯ್ಸಳರ ಕಾಲದ ದೇವಾ ಲಯಗಳಂತೆ ಜಗತಿಯ ಮೇಲೆ ನಿರ್ಮಾಣವಾ ಗಿದ್ದು ತ್ರಿಕೂಟಾಚಲದೇವಾಲಯ.ದೇವಾಲಯ ಮೂರುಗರ್ಭಗುಡಿ,ನವರಂಗ ಹಾಗು ಕಿರಿದಾದ ಮುಖಮಂಟಪ ಹೊಂದಿದೆ. ಮುಖ್ಯ ಗರ್ಭ- ಗುಡಿಯಲ್ಲಿ ಮಲ್ಲಿಕಾರ್ಜುನ ಎಂದು ಕರೆಯ- ಲಾಗುವ ಶಿವಲಿಂಗವಿದೆ. ಉಳಿದ ಗರ್ಭಗುಡಿಗ ಳಲ್ಲಿ ಇದ್ದ ಮೂರ್ತಿಗಳು ಕಾಣೆಯಾಗಿದ್ದು ಅದರ ಬದಲಾಗಿ ಹೊಯ್ಸಳರ ಕಾಲದ ಸೂರ್ಯನ ಮೂರ್ತಿಯನ್ನು ದಕ್ಷಿಣದ ಗರ್ಭಗುಡಿಯಲ್ಲೂ ಹಾಗು ನಾಗ-ನಾಗಿಣಿಯರ ಮೂರ್ತಿಯನ್ನು ಉತ್ತರದ ಗರ್ಭಗುಡಿಯಲ್ಲೂ ಇರಿಸಲಾಗಿದೆ.
ಹೊಯ್ಸಳರ ದೇವಾಲಯಗಳಲ್ಲಿ ಹೊರಭಿತ್ತಿ ಯ ಮೇರು ಕೆತ್ತೆನೆಗೆ ಸಾಕ್ಷಿ ಈ ದೇವಾಲಯ. ಅಧಿಷ್ಟಾ ನದಲ್ಲಿ ಆನೆ, ಕುದುರೆ ಸವಾರರು, ಪುರಾಣ ಕಥನ ಶಿಲ್ಪಗಳು, ಮಕರ ಹಾಗು ಹಂಸದ ಸಾಲು ಗಳು ಗಮನ ಸೆಳೆಯುತ್ತವೆ. ನಂತರ ಸಾಲಿನಲ್ಲಿ ಕಾಣುವ ಶಿಲಾ ಕೆತ್ತೆನೆಗಳು ಹೊಯ್ಸಳರ ಕಲಾ ವೈಭವದ ಪರಾಕಷ್ಠೆಯನ್ನು ನೆನಪಿಸುತ್ತದೆ. ಇಲ್ಲಿ ೨೨ ಭುಜದ ನರ್ತಿಸುವ ದುರ್ಗಾದ ಕೆತ್ತೆನೆ ಅದ್ಭುತ.ಉಳಿದಂತೆ ಕಾಳಿಂಗ ಮರ್ಧನ, ನಟರಾಜ ಅಂಧಕಾಸುರ ಸಂಹಾರ, ಗಜಾಸುರ ಮರ್ಧನ ಶಿವ, ಕಾಲಭೈರವ, ವೇಣು ಗೋಪಾಲ, ಲಕ್ಷ್ಮೀನಾರಾಯಣ,ಶ್ರೀಲಕ್ಷ್ಮೀನರ ಸಿಂಹ,ಸರಸ್ವತಿ, ಬ್ರಹ್ಮ, ಯೋಗ ನಾರಾಯಣ, ನರ್ತಿಸುವ ಹದಿ ನಾರು ಭುಜದ ಶಿವ, ಅಷ್ಟಭುಜದ ವಿಷ್ಣು ಗಮನ ಸೆಳೆಯುತ್ತದೆ.
ದೇವಾಲಯದ ಪೂರ್ವದಲ್ಲಿನ ದೀಪಸ್ತಂಭ (ಗರುಡಗಂಬ) ಗಮನ ಸೆಳೆಯುತ್ತದೆ. ಇಲ್ಲಿ ಆತ್ಮಬಲಿಯಾಗಲು ಪುರುಷ ಹಾಗು ಸ್ತ್ರೀ ಸಿದ್ದ ವಾಗಿರುವಂತೆ ಇದ್ದು ಹೊಯ್ಸಳ ದೊರಯ ಕಾಲ ದಲ್ಲಿನ ಆತ್ಮ ಸಮರ್ಪಣೆ ಮಾಡಿದ ಕುರುಹಾಗಿ ಕಾಣಬರುತ್ತದೆ. ಇಲ್ಲಿನ ಆವರಣ ದಲ್ಲಿನ ಚಿಕ್ಕ ಗುಡಿಯಲ್ಲಿನ ಸುಂದರ ಭೈರವನ ಶಿಲ್ಪಗಮನ ಸೆಳೆಯುತ್ತದೆ.
ಇಲ್ಲಿನ ಪ್ರಚಲಿತ ಕಥೆಯಂತೆ ಇಲ್ಲಿ ಆಳುತ್ತಿದ್ದ ಪಾಳೇಗಾರ ರಾಜನಿಗೂ ಹಾಗು ದುದ್ಧ ಪಾಳೇ ಗಾರನಿಗೂ ವೈಮನಸ್ಸಿತ್ತು. ಒಮ್ಮೆ ಸ್ನೇಹದ ನೆಪ ದಲ್ಲಿ ಪೂಜೆಗಾಗಿ ದುದ್ದ ರಾಜನನ್ನು ಕರೆಸಿಕೊಂಡು ಮೋಸದಿಂದ ತಲೆಯನ್ನು ಕಡಿದು ಕೋಟೆಯ ಬಾಗಿಲಿಗೆ ನೇತು ಹಾಕಿದ. ಮೋಸದಿಂದ ಆತನ ಪತ್ನಿಯನ್ನ ಕರೆಸಿದಾಗ ತನ್ನ ಪತಿಯನ್ನ ನೋಡಿದ ಆತನ ಪತ್ನಿ ಕೋಟೆ ಯ ಮೇಲೇರಿ ಇನ್ನು ದುದ್ದಕ್ಕೂ ಬಸರಾಳಿಗೂ ಸಂಬಂಧ ಮಾಡಿಕೊಳ್ಳು ವುದು ಬೇಡ ಎಂದು ಹೇಳಿ ಅತ್ಮ ಸಮರ್ಪಣೆ ಮಾಡಿದಳು ಎಂಬ ಪ್ರತೀತಿ ಇದೆ.ಇಲ್ಲಿನ ರಾಜ ದುದ್ದಕ್ಕೆ ಹೋದಾಗ ಬಸುರಿಯಾಗದ್ದ ಆತನ ಪತ್ನಿ ಆಳಿದ ಕಾರಣ ಬಸರಿವಾಳು–ಬಸರಾಳು ಆಯಿತು ಎಂಬ ನಂಬಿಕೆ ಇದೆ. ಇಂದಿಗೂ ಇಲ್ಲಿ ಸಂಬಂಧವನ್ನು ಬೆಳೆಸುವುದಿಲ್ಲ ಎಂಬ ಪ್ರತೀತಿ ಇದೆ.
ತಲುಪುವ ಬಗ್ಗೆ : ಈ ದೇವಾಲಯ ಮಂಡ್ಯ- ನಾಗಮಂಗಲ ರಸ್ತೆಯಲ್ಲಿ ಮಂಡ್ಯದಿಂದ ಸುಮಾರು ೧೮ ಕಿ ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದು.
✍️ ಶ್ರೀನಿವಾಸಮೂರ್ತಿ ಎನ್. ಎಸ್. ಬೆಂಗಳೂರು