ದೋಹಾ-21.
ಪ್ರೇಮ ನ ಬಾಡಿ ಊಪಜೈ, ಪ್ರೇಮ ನ ಬಿಕಾ.
ರಾಜಾ ಪ್ರಜಾ ಜೆಹಿ ರುಚೆ, ಶೀಶ ದೆಈ ಲೆ ಜಾಯ.
ಅನುವಾದ:
ಪ್ರೇಮ ತೋಟದಲ್ಲಿ ಹುಟ್ಟುವುದಿಲ್ಲ ಮತ್ತು ಹಾಗೆ ಸಂತೆಯಲ್ಲಿ ಮಾರಾಟವಾಗುದಿಲ್ಲ, ರಾಜಾ ಅಥವಾ ಪ್ರಜಾ ತಮ್ಮನ್ನು ತಾವು ಸಮರ್ಪಿಸಿಕೊಂಡು ಇದನ್ನು ತೆಗೆದುಕೊಳ್ಳಲಿ .
ದೋಹಾ-22.
ಮೈ ಅಪರಾಧಿ ಜನ್ಮ ಕಾ, ನಖ ಸಿಖ ಭರಾ ವಿಕಾರ.
ತುಮ ದಾತಾ ದುಃಖ ಭಂಜನಾ ,ಮೆರಿ ಕರೊ ಸಮ್ಹಾರ.
ಅನುವಾದ:
ಹುಟ್ಟಿನಿಂದಲೆ ನಾನು ಅಪರಾಧಿ, ತಲೆಯಿಂದ ಪಾದದವರೆಗೆ ವಿಕಾರ ತುಂಬಿದೆ.
ನೀನು ದುಃಖ ದೂರ ಮಾಡುವಾತನು, ನೀನೆ ನನ್ನನ್ನು ರಕ್ಷಿಸು.
ದೋಹಾ-23.
ಬಾನಿ ಸೆ ಪಹಚಾನಿಯೆ, ಸಾಯ ಚೋರ ಕೀ ಘಾತ.
ಅಂದರ ಕೀ ಕರನಿ ಸೆ ಸಬ, ನಿಕಲೆ ಮುಹ ಕೀ ಬಾತ.
ಅನುವಾದ:
ಸಜ್ಜನ ಹಾಗು ದುಷ್ಟ ಯಾರೆಂದು ತಿಳಿಯಲು ಅವರಾಡುವ ಮಾತುಗಳು ಸಾಕು, ಅಂತರಾತ್ಮದ ರಹಸ್ಯ ಮಾತಿನಿಂದ ತಿಳಿಯುವುದು.
ದೋಹಾ-24.
ದಯಾ ಕೌನ ಪರ ಕೀಜಿಎ,ಕಾ ಪರ ನಿರ್ದಯ ಹೋಯ.
ಸಾಯಿ ಕೆ ಸಬ ಜೀವ ಹೈ,ಕೀರಿ ಕುಂಜರ ದೋಯ.
ಅನುವಾದ:
ಯಾರ ಮೇಲೆ ದಯೆ ತೋರಬೇಕು ಯಾರ ಮೇಲೆ ನಿರ್ದಯಿಯಾಗಬೇಕು? ಹೇ ಮಾನವ ನೀನು ಎಲ್ಲರ ಜೋತೆ ಸಮಭಾವದಿಂದ ವರ್ತಿಸು, ಕೀಟ ಮತ್ತು ಆನೆ ಎರಡು ಪರಮಾತ್ಮನ ಜೀವ.
ದೋಹಾ-25.
ಊಂಚೆ ಪಾನಿ ನಾ ಟಿಕೆ, ನೀಚೆ ಹಿ ಠಹರಾಯ.
ನೀಚಾ ಹೋ ಸೋ ಭರಿ ಪಿಯೆ,ಊಂಚಾ ಪ್ಯಾಸಾ ಜಾಯ.
ಅನುವಾದ:
ನೀರು ಮೆಲೆ ನಿಲ್ಲುವುದಿಲ್ಲ, ಕೆಳಗಿನಿಂದಲೆ ಹರಿಯುವುದು.ಯಾರು ಬಾಗುವರೊ ಅವರು ಹೊಟ್ಟೆತುಂಬಾ ನೀರು ಕುಡಿಯುವರು, ಯಾರು ಬಾಗುವದಿಲ್ಲವೊ ಅವರ ನೀರಡಿಕೆ ನೀಗುವುದಿಲ್ಲ.
ದೋಹಾ-26.
ಕಬೀರಾ ಧೀರಜ ಕೆ ಧರೆ, ಹಾಥಿ ಮನ ಭರ ಖಾಯ.
ಟೂಕ ಎಕ ಕೆ ಕಾರನೆ, ಸ್ವಾನ ಘರೇ ಘರ ಜಾಯ.
ಅನುವಾದ:
ಕಬೀರದಾಸರು ಹೇಳುತ್ತಾರೆ, ತಾಳ್ಮೆಯಿಂದ ಇರುವ ಆನೆ ಹೊಟ್ಟೆ ತುಂಬೆ ತಿನ್ನುವುದು, ತಾಳ್ಮೆಯಿಲ್ಲದ ಶ್ವಾನ (ನಾಯಿ ) ತುಣುಕು ರೊಟ್ಟಿಗಾಗಿ ಮನೆ -ಮನೆ ತಿರುಗುವುದು.
ದೋಹಾ-27.
ಫಲ ಕಾರಣ ಸೇವಾ ಕರೆ, ಕರೆ ನ ಮನ ಸೆಕಾಮ.
ಕಹೆ ಕಬೀರ ಸೇವಕ ನಹಿ, ಚಹೈ ಚೌಗುನ ದಾಮ
ಅನುವಾದ:
ಫಲ ಪಡೆಯಲು ಸೇವೆ ಮಾಡುವನೊ, ಮನದಿಂದ ನಿಸ್ವಾರ್ಥಿಯಲ್ಲವೊ, ಅವನು ಸೇವಕನಲ್ಲವೆಂದು ಕಬೀರ ಹೇಳುತ್ತಾರೆ, ಅವನು ಸೇವೆಯಿಂದ ಬೆಲೆ ಪಡೆಯಲು ಬಯಸುತ್ತಾನೆ . ಸೇವೆ ನಿಸ್ವಾರ್ಥವಾಗಿರಬೇಕು
ದೋಹಾ-28.
ಕಹತಾ ತೊ ಬಹುತಾ ಮಿಲಾ, ಗಹತಾ ಮಿಲಾ ನ ಕೋಯ.
ಸೊ ಕಹತಾ ವಹ ಜಾನದೆ, ಜೋ ನಹಿ ಗಹತಾ ಹೋಯ.
ಅನುವಾದ:
ಹೇಳುವರು, ಮಾತನಾಡುವರು ಅನೇಕ, ಆದರೆ ಮಾತಿನ ಮರ್ಮ ತಿಳಿಯುವರು ಯಾರು ಇಲ್ಲ.
ಮಾತನಾಡುವುದೆ ವ್ಯರ್ಥ, ಮಾತಿನಂತೆ ನಡೆಯದಿದ್ದರೆ.
ದೋಹಾ-29.
ತನ ಬೊಹತ ಮನ ಕಾಗ ಹೈ, ಲಕ್ಷ್ಯ ಯೋಜನ ಉಡ ಜಾಯ.
ಕಬಹು ಕೆ ಧರ್ಮ ಅಗಮ ದಯಿ, ಕಬಹು ಗಗನ ಸಮಾಯ.
ಅನುವಾದ:
ಮನುಷ್ಯ ನ ಶರೀರ ವಿಮಾನ, ಮನ ಕಾಗೆ, ಲಕ್ಷ್ಯ ಬಂದಡೆ ಹಾರುವುದು.
ಕೆಲವೊಮ್ಮೆ ನದಿಯಲ್ಲಿ ಮುಣಿಗೆದ್ದರೆ ಕೆಲವೊಮ್ಮೆ ಆಕಾಶದಲ್ಲಿ ಹಾರಾಡುವುದು.
ದೋಹಾ-30.
ಸೋನಾ, ಸಜ್ಜನ, ಸಾಧು ಜನ,ಟೂಟ ಜುಡೈ ಸೌ ಬಾರ.
ದುರ್ಜನ ಕುಂಬ ಕುಮ್ಹಾರ ಕೆ,ಏಕೇ ಧಕಾ ದರಾರ.
ಅನುವಾದ:
ಸ್ವರ್ಣ ಮತ್ತು ಸಾಧು ಇಬ್ಬರು ಒಳ್ಳೆಯವರು. ನೂರುಬಾರಿ ಬೆರ್ಪಟ್ಟರು ಮತ್ತೆ ಒಂದಾಗುವರು.
ದುರ್ಜನ ಕುಂಬಾರನ ಮಡಕೆಯಂತೆ, ಒಂದೇ ಬಾರಿ ಸಿಳಿದರು ಮತ್ತೆ ಒಂದಾಗದು.
ದೋಹಾ-31.
ಆಗ ಜೋ ಲಾಗಿ ಸಮುದ್ರ ಮೆ, ಧುಂವಾ ನಾ ಪ್ರಕಟ ಹೋಯ.
ಸೋ ಜಾನೆ ಜೋ ಜರಮು ಆ, ಜಾಕಿ ಲಾ ಈ ಹೋಯ.
ಅನುವಾದ
ಮನದಲ್ಲಿ ಪ್ರೇಮಾಗ್ನಿ ಉರಿಯುತ್ತಿದ್ದರೆ ಅನ್ಯರು ಎನು ಬಲ್ಲರು? ಹೊಗೆ ಏಳದಿದ್ದರೆ!
ಯಾರ ಮನದಲ್ಲಿ ಉರಿಯುತ್ತಿದೆಯೋ ಅವರು ಮಾತ್ರ ಬಲ್ಲರು ಅಥವಾ ಹಚ್ಚಿದವರು ಬಲ್ಲರು.
ದೋಹಾ-32.
ಸಬ ಆಎ ಏಕ ಮೆ,ಡಾಲ ಪಾತ ಫಲ ಫೂಲ.
ಕಬೀರಾ ಪೀಛಾ ಕ್ಯಾ ರಹಾ, ಗಹ ಪಕಡಿ ಜಬ ಮೂಲ.
ಅನುವಾದ
ಎಲ್ಲ ಸಿಗುವುದು ಈ ಒಂದರಲ್ಲಿ, ಟೊಂಗೆ -ಎಲೆ, ಹಣ್ಣು -ಹೂ.
ಕಬೀರ ಹೇಳುವರು ಬೇರೊಂದನ್ನು ಹಿಡಿದರೆ ಎಲ್ಲ ಸಿಗುವುದು ನಂಬಿಕೆ ಇರಲಿ ದೇವರಲ್ಲಿ.
ದೋಹಾ-33.
ಸಿಂಹ ಅಕೇಲಾ ಬನ ರಹೆ,ಪಲಕ ಪಲಕ ಕರೆ ದೌರಾ.
ಜೈಸಾ ಬನ ಹೈ ಆಪನಾ, ತೈಸಾ ಬನ ಹೈ ಔರ.
ಅನುವಾದ
ಸಿಂಹ ಒಂಟಿಯಾಗಿ ಅರಣ್ಯದಲ್ಲಿ ತಿರುಗುವುದು, ಕ್ಷಣ -ಕ್ಷಣ ಓಡುತ್ತಿರುತ್ತದೆ.
ನಿಮ್ಮ ಮನ ಹೇಗೆ ಓಡುತ್ತಿರುವುದೊ ಹಾಗೆ ಇತರರ ಶರೀರದಲ್ಲಿ ಮನವೆಂಬ ಸಿಂಹ ಓಡುತ್ತಿರುತ್ತದೆ.
ದೋಹಾ-34
ಪ್ರೇಮ ನ ಬಾಡಿ ಊಪಜೈ, ಪ್ರೇಮ ನ ಹಾಟ ಬಿಕಾಯ.
ರಾಜಾ ಪ್ರಜಾ ಜೆಹಿ ರುಚೆ,ಶೀಶ ದೇಹಿ ಲೆ ಜಾಯ.
ಅನುವಾದ
ಪ್ರೇಮ ತೋಟದಲ್ಲಿ ಹುಟ್ಟುವುದಿಲ್ಲ, ಪ್ರೇಮ ಸಂತೆಯಲ್ಲಾಗಲಿ ಸಿಗುವುದಿಲ್ಲ.
ರಾಜನಾಗಲಿ,ಪ್ರಜೆಯಾಗಲಿ ಯಾರಿಗೆ ಬೇಕೊ ಅವರು ತಲೆಕೊಟ್ಟಾದರು ತೆಗೆದುಕೊಳ್ಳಲೆಬೇಕು.
ದೋಹಾ-35.
ಸಾಧು ಏಸಾ ಚಾಹಿಎ, ಜೈಸಾ ಸೂಪ ಸುಭಾಯ.
ಸಾರ -ಸಾರ ಕೊ ಗಹಿ ರಹೇ, ಥೋಥಾ ದೇ ಈ ಉಡಾಯ
ಅನುವಾದ
ಸಾಧು ಹೇಗಿರಬೇಕೆಂದರೆ, ಮರ ಹೇಗಿರಬೇಕೊ ಹಾಗೆ.
ಗಟ್ಟಿ -ಗಟ್ಟಿ ಕಾಳು ಇಟ್ಟಕೊಂಡು ಜೊಳ್ಳು ಕಾಳನ್ನು ತೂರುವುದೊ.
ದೋಹಾ-36.
ಹದ ಚಲೆ ಸೋ ಮಾನವ, ಬೆಹದ ಚಲೆ ಸೋ ಸಾಧ.
ಹದ ಬೆಹದ ದೋನೋ ತಜೆ, ತಾಕೊ ಮತಾ ಅಗಾಧ.
ಅನುವಾದ
ಯಾರು ಸೀಮಿತ ಇರುವನೊ ಮಾನವ, ಸೀಮಾತೀತ ಸೇವೆ ಗೈಯುವನೊ ಅವನು ಸಾಧು.
ಸೀಮೆ ಮತ್ತು ಸೀಮಾತೀತ ಮೀರಿ ಕೆಲಸ ಪಡೆಯುವನೊ ಅವನು ಜ್ಞಾನಿ.
ದೋಹಾ-37
ಜಗ ಮೆ ಬೈರಿ ಕೊಈ ನಹಿ, ಜೊ ಮನ ಶೀತಲ ಹೊಯ.
ಯಹ ಆಪಾ ತೊ ಡಾಲ ದೆ, ದಯಾ ಕರೆ ಸಬ ಕೊಯ.
ಅನುವಾದ
ಈ ಜಗತ್ತಿನಲ್ಲಿ ನಿನಗೆ ಯಾರು ಶತ್ರು ಇರುವುದಿಲ್ಲ , ಒಂದು ವೇಳೆ ನಿಮ್ಮ ಮನದಲ್ಲಿ ಶಾಂತಿ ಇದ್ದರೆ.
ಅಹಂಕಾರ ಬಿಟ್ಟು ಬಿಡು, ಎಲ್ಲರು ನಿನ್ನ ಮೇಲೆ ದಯೆ ತೋರುವರು.
ದೋಹಾ-38.
ಸಾಈ ಆಗೆ ಸಾಂಚ ಹೈ, ಸಾಈ ಸಾಂಚ ಸುಹಾಯ.
ಚಾಹೆ ಬೊಲೆ ಕೆಸ ರಖ, ಚಾಹೆ ಘೌಂಟ ಮುಂಡಾಯ.
ಅನುವಾದ
ಶಿವನೆಂದರೆ ಸತ್ಯ, ಸತ್ಯವೆ ಶಿವನಿಗೆ ಪ್ರೀಯ.
ಅದನ್ನು (ಸತ್ಯ) ನೀನು ಜಟಾ ಬೆಳೆಸಿಕೊಂಡು ಹೇಳು ಇಲ್ಲವೆ ತಲೆ ಬೊಳಿಸಿಕೊಂಡು ಹೇಳು.
ದೋಹಾ-39.
ಲೀಖ ಪುರಾನಿ ಕೊ ತಜೆ, ಕಾಯರ ಕುಟೀಲ ಕಪೂತ.
ಲೀಖ ಪುರಾನಿ ಪರ್ ರಹೆ, ಶಾತಿರ ಸಿಂಹ ಸಪೂತ.
ಅನುವಾದ
ಪುರಾತನ ಮಾರ್ಗವನ್ನು ಯಾರು ಬಿಡುವರೆಂದ ರೆ, ಕಾಯರ್,ಕುಟೀಲ ಮತ್ತು ನಾಲಾಯಕ.
ಪುರಾನೆ ಮಾರ್ಗವನ್ನೆ ಅನುಸರಿಸುವರೆಂದರೆ ಸಿಂಹ ಮತ್ತು ಯೋಗ್ಯ ಮಗ.
ದೋಹಾ-40.
ಸಾಧು,ಸತಿ ಔರ್ ಸೂರ್ಮಾ, ಇನಕಿ ಬಾತ ಅಗಾಧ.
ಆಶಾ ಛೋಡೆ ದೇಹ ಕಿ, ತನ ಕಿ ಅನಥಕ ಸಾಧ.
ಅನುವಾದ
ಸಾಧು,ಸತಿ ಮತ್ತು ಸೈನಿಕ, ಇವರಾಡುವ ಮಾತುಗಳು ಶ್ರೇಷ್ಠ.
ಇವರೆಲ್ಲರು ದೇಹ ಆಶೆ ಬಿಟ್ಟು, ದೇಹ ದಣಿಯುವವರೆಗೆ ಸಾಧನೆಗೈಯುವರು.
ಶ್ರೀದುರ್ಗಾ
(ಸರೋಜಾ ಮೇಟಿಲೋಡಾ)
ಹುಬ್ಬಳ್ಳಿ.