ಕಲ್ಯಾಣಚಾಲುಕ್ಯರು ದೇವಾಲಯಗಳ ಪರಂಪ ರೆಯಲ್ಲಿ ಹೊಸ ಸ್ವರೂಪವನ್ನೇ ಕೊಟ್ಟವರು. ಅವರ ಸೂಕ್ಷ್ಮ ಕೆತ್ತೆನೆಗಳು ಹಾಗು ದೇವಾಲಯ ಗಳ ಒಳಭಾಗಗಳು ದೇವಾಲಯಗಳ ನಿರ್ಮಾಣ ಕ್ಕೆ ಹೊಸ ಭಾಷ್ಯ ಬರೆದವು. ಅವರ ಹೆಚ್ಚಿನ ದೇವಾಲಯಗಳು ಉತ್ತರ ಕರ್ನಾಟಕ ದಲ್ಲಿ ಇದ್ದರೆ ಹಾವೇರಿ ಜಿಲ್ಲೆಯಲ್ಲಿ ಅವರ ಹಲವು ದೇವಾಲಯಗಳು ಅಧ್ಯಯನಕ್ಕೆ ಪೂರಕವಾಗಿದೆ. ಅಂತಹ ಕಲಾತ್ಮಕ ದೇವಾಲ ಯವೊಂದು ರಾಣಿ ಬೆನ್ನೂರು ತಾಲ್ಲೂಕಿನ ಚೌಡದಾನಪುರ ದಲ್ಲಿದೆ. ಮೈಲಾರಕ್ಕೆ ಅತ್ಯಂತ ಸನಿಹದಲ್ಲಿರುವ ಈ ಸುಂದರ ದೇವಾಲಯ ಪ್ರಚಾರ ನೀಡಿದಲ್ಲಿ ಜನರನ್ನು ತಲುಪುವದರಲ್ಲಿ ಸಂಶಯವಿಲ್ಲ.

ಇತಿಹಾಸ ಪುಟದಲ್ಲಿ ಕೂರ್ತಗಿ ಎಂದು ಕರೆಯ ಲಾಗುತ್ತಿದ್ದ ಇಲ್ಲಿ ಪುರಾಣ ಕಾಲದಲ್ಲಿ ಪರಶಿವ ನು ತ್ರಿಪುರಾಸರನನ್ನು ಸಂಹರಿಸಿದ ಎಂಬ ನಂಬಿಕೆ ಇದೆ.ಕಾಳಮುಖರ ಕಾಲದಲ್ಲಿ ಅತ್ಯಂತ ಪ್ರಮುಖ ಕೇಂದ್ರವಾಗಿತ್ತು.ಇನ್ನು ತ್ರಿಪುರವೆಂದು ಕರೆಯಲಾಗುತ್ತಿದ್ದ ಮೂರು ಪ್ರದೇಶಗಳಲ್ಲಿ ಶಿವಪುರವೂ ಒಂದು. ಇನ್ನು ಈ ಪ್ರದೇಶ ಶಿವ ಶರಣ ಅಂಬಿಗರ ಚೌಡಯ್ಯ ನೆಲೆಸಿದ್ದ ಜಾಗ. ಇಲ್ಲಿ ಶಿವಪುರಕ್ಕೆ ಸೇರಿದ ಜಾಗವನ್ನು ಕಾಳ ಮುಖ ಮುನಿಗೆ ಚೌಡಯ್ಯ ದಾನ ನೀಡಿದ ಕಾರಣ ಇಲ್ಲಿಗೆ ಚೌಡದಾನಪುರ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇನ್ನು ದೇವಾಲಯದ ಆವರಣದಲ್ಲಿ ಎಂಟು ಶಾಸನಗಳಿದ್ದು, ಗುತ್ತಲ ಅರಸರ ರಾಜ ಧಾನಿಯಾಗಿ ಯೂ ಇತ್ತು. ಇನ್ನು ಚಾಲುಕ್ಯ ದೊರ ಆರನೇ ವಿಕ್ರಮಾದಿತ್ಯ, ಹಾನ ಗಲ್ ಕದಂಬ ಅರಸ ಕಾಮದೇವ, ಯಾದವರ ಮಹಾದೇವ ಮುಂತಾದ ಅರಸರು ದೇವಾಲಯ ಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು.

ಈದೇವಾಲಯವನ್ನು ಸುಮಾರು1115–1120 ರಲ್ಲಿ ಕಲ್ಯಾಣದರಸ 6ನೇ ವಿಕ್ರಮಾದಿತ್ಯ ನ ಕಾಲದಲ್ಲಿ ಇಲ್ಲಿನ ಜಟಾಚೋಳ ವಂಶದ ಗುತ್ತರಸನ ಮಾಂಡಳೀಕನಾದ ಮಲ್ಲ ಅಥವಾ ಮುಲ್ಲಗಿ ದೇವಾಲಯ ನಿರ್ಮಿಸಿ ದತ್ತಿಯನ್ನು ನೀಡಿದ ಉಲ್ಲೇಖ ನೋಡಬಹುದು. ದೇವಾಲ ಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದ್ದು ಗರ್ಭಗುಡಿ ಯಲ್ಲಿ ಮುಕ್ತೇಶ್ವರ ಎಂದು ಕರೆಯುವ ಶಿವ- ಲಿಂಗವಿದೆ. 1225 ರಲ್ಲಿ ಕಾಳಮುಖರ ಮುನಿ ಯಾಗಿದ್ದ ಶಿವ ದೇವರು ಈದೇವಾಲಯವನ್ನು ನವೀಕರಿಸಿದರು. ಗರ್ಭಗುಡಿ ಹಾಗು ಅಂತರಾ ಳದ ಲಲಾಟದಲ್ಲಿ ಯಾವುದೇ ಶಿಲ್ಪಗಳು ಕಾಣ ಬರುವದಿಲ್ಲ. ನವ ರಂಗದ ಪೂರ್ವದ ಪ್ರವೇಶ ದ್ವಾರವು ಸುಂದರ ವಾಗಿ ಅಲಂಕೃತ ಗೊಂಡಿದೆ. ನವರಂಗದಲ್ಲಿ ಎರಡುಕೋಷ್ಟಕಗಳಲ್ಲಿ ಮಹಿಷ ಮರ್ಧಿನಿ ಹಾಗು ಗಣಪತಿಯ ಶಿಲ್ಪವಿದೆ. ಇನ್ನು ಇಲ್ಲಿ ಸಪ್ತ ಮಾತೃಕೆ ಯ ಶಿಲ್ಪಗಳು, ಏಳು ಸರ್ಪ ಹೊಂದಿರುವ ಸೂರ್ಯನ ಶಿಲ್ಪ ಗಮನ ಸೆಳೆಯುತ್ತದೆ.

ದೇವಾಲಯಕ್ಕೆ ಎತ್ತರವಾದ ಅಧಿಷ್ಟಾನವಿದ್ದು ಹೊರ ಭಿತ್ತಿಯ ಅಲಂಕರಣಗಳು ಕಲಾತ್ಮಕ ವಾಗಿದೆ. ಇಲ್ಲಿನ ಹೂಬಳ್ಳಿಗಳ ಕೆತ್ತೆನಗಳು, ಕಿರುಶಿಖರ ಮಾದರಿಗಳು ಇದ್ದು ಇಲ್ಲಿ ಇರಬಹು ದಾಗಿದ್ದ ಶಿಲ್ಪಗಳು ಕಾಣ ಬರುವದಿಲ್ಲ. ದೇವಾ ಲಯಕ್ಕೆ ಸುಂದರ ಶಿಖರವಿದ್ದು ಅದರಲ್ಲಿನ ಕೀರ್ತಿ ಮುಖ ಹಾಗು ಗಣೇಶ, ಸೂರ್ಯ, ವೀರಭದ್ರ ಯಕ್ಷ್ಯ ಮುಂತಾದ ಶಿಲ್ಪಗಳ ಕೆತ್ತೆನೆ ನೋಡಬಹು ದು. ಇನ್ನು ಪ್ರದಕ್ಷಿಣ ಪಥದಲ್ಲಿ ನೃತ್ಯಗಾರರು,ಯಕ್ಷ್ಯ,ಸರಸ್ವತಿ,ವೇಣುಗೋಪಾಲ, ಶಿವಭಕ್ತರ ಕೆತ್ತೆನೆಗಳು ಸುಂದರವಾಗಿದೆ.

ಇನ್ನು ದೇವಾಲಯಕ್ಕೆ 1288 ರಲ್ಲಿ ಯಾದವ ಅರಸ ರಾಮಚಂದ್ರ ನಿರ್ಮಿಸಿದ ಬೃಹತ್ ದ್ವಜ ಸ್ಥಂಭವಿದೆ.ಇನ್ನು ದೇವಾಲಯದ ಆವರಣ ದಲ್ಲಿ ವೀರಭದ್ರ ದೇವಾಲಯ, ಚಿಕ್ಕದಾದ  ಶಿವಾಲಯ ಗಳು ಹಾಗು ಕಾಳಿಕಾಂಬ ದೇವಾ ಲಯಗಳನ್ನು ನೋಡಬಹುದು.ಇನ್ನು ದೇವಾ ಲಯದ ಸಮೀಪ ದ ತುಂಗಾ ನದಿಯ ತೀರದಲ್ಲಿ ಅಂಬಿಗರ ಚೌಡ ಯ್ಯನ ಗದ್ದುಗೆ ಇದ್ದು ಪ್ರತಿ ವರ್ಷ ಚೌಡಯ್ಯನ ತೆಪ್ಪೋತ್ಸವ ನಡೆಯುತ್ತದೆ.ಇನ್ನು ದೇವಾಲಯದ ಆವರಣ ದಲ್ಲಿ ಶಿಲಾ ಶಾಸನಗಳನ್ನು ಸುಂದರವಾ ಗಿ ಜೋಡಿಸಿರುವುದು ಅಧ್ಯಯನಕ್ಕೆ ಪೂರಕವಾ ಗಿದೆ.

ತಲುಪವ ಬಗ್ಗೆ; ಈ ದೇವಾಲಯವು ರಾಣಿ ಬೆನ್ನೂರಿನಿಂದ ಸುಮಾರು 24 ಕಿ.ಮೀ. ದೂರ ದಲ್ಲಿದ್ದು, ಗುತ್ತಲ ರಸ್ತೆಯಲ್ಲಿ ಹೊನ್ನತ್ತಿಯ ಮೂಲಕ ತಲುಪಬಹುದು.  ಹೊನ್ನತ್ತಿಯಲ್ಲೂ ಚಾಲುಕ್ಯರ ಕಾಲದ ದೇವಾಲಯವಿದೆ.ಇನ್ನು ಪ್ರಸಿದ್ದ ಮೈಲಾರದಿಂದ ಕೇವಲ 10 ಕಿ.ಮೀ. ದೂರದಲ್ಲಿದ್ದು ತಲುಪಬಹುದು.

✍️ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು