ರಚನೆ : ಬೇಲೂರು ರಘುನಂದನ್
ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ
ರಂಗಾಭಿನಯ : ಗೋಕುಲ ಸಹೃದಯ

ತುಂಬಾ ಬರೆಯೋದಿದೆ..ಅಲ್ಲಲ್ಲ,ಹೇಳೋದಿದೆ, ಹೇಳಿಕೊಳ್ಳೋದಿದೆ,ಹಿಡಿ ಏಕಾಂತಕ್ಕೂ ಧಕ್ಕೆ.
ಗೋಕುಲನಿಗೆ ಹಾರೈಸುವುದಿತ್ತು. ಹಾಗಾಗಿ ಈ ಪೋಸ್ಟ್ ಹಾಕಲೇ ಬೇಕೆಂದು ನಿರ್ಧರಿಸಿದೆ. ಗೋಕುಲ ಪುಟ್ಟ ಮಗುವ, ಅಥವ ಅವನ ಮುಂದೆ ನಾವ್ಗಳೇ ಸಣ್ಣವ್ರಾ? ಎನ್ನುವಷ್ಟು ಪ್ರಬುದ್ಧತೆ ಈ ಪುಟ್ಟ ದೇವರಿಗ್ಯಾಕೆ ಕೊಟ್ಟನೋ ಆ ಕಣ್ಣಿಗೆ ಕಾಣದ ಕಳ್ಳ ದೇವರು…!

ಚಿಟ್ಟೆ …..

ಇದು ನಾಟಕವೋ, ಸಿನಿಮಾವೋ ಅಥವಾ ಬದುಕೋ!?ಎನ್ನುವಷ್ಟು ಎದೆಗೆ ನಾಟಿದ ಅಪ ರೂಪದ, ಆದರೆ ಬದುಕಿಗೆ ವಿಪರೀತ ಹತ್ತಿರವೆ ನ್ನಿ ಸುವ ಏಕವ್ಯಕ್ತಿ ರಂಗಪ್ರಯೋಗ. ನಾಟಕದ ರಚನೆ, ನಿರ್ದೇಶನದ ಬಗ್ಗೆ ಬರೆಯುವುದಾ? ಪಾತ್ರದೊಳಗೆ ಪರಕಾಯಪ್ರವೇಶಿಸಿ,ಕೈಹಿಡಿದು ನಮ್ಮನ್ನೂ ಕೈ ಎಳೆದುಕೊಂಡೊಯ್ದ ಗೋಕುಲ ನ ಅಭಿನಯದ ಬಗ್ಗೆ ಬರೆಯುವುದಾ? ಕಾನ್ಸೆಪ್ಟ್ ಬಗ್ಗೆ ಬರೆಯುವುದಾ ಅಥ್ವ ಕಾನ್ಸೆಪ್ಟ್ ಹಿಂದಿರುವ Arts ಮತ್ತು science ಬಗ್ಗೆ ಬರೆಯುವುದಾ?!

ಸೃಷ್ಟಿಯೊಡನೆ ನೇರ ಸಂಪರ್ಕಕ್ಕೆ ಬರುವ ಬೆರಳೆಣಿಕೆಯ ಜೀವಗಳಿಗೆ ಮಾತ್ರ ದಕ್ಕುವ, ಮಾತು ಮತ್ತು ಮೌನಕ್ಕೆ ಮೀರಿದ ಸುಪ್ತಾವಸ್ಥೆ ಯಲ್ಲಿ ಜಾಗೃತರಾದವರಿಗೆ ಹಾಗೂ, ಜಾಗೃತ ಸ್ಥಿತಿಯಲ್ಲೇ ಪ್ರಜ್ಞಾಹೀನ ಒಲವ ಬದುಕ ಬದುಕು ವವರಿಗೆ ಮಾತ್ರ ಒಲಿಯುವ ಕಾವ್ಯ ಲಹರಿಯ ಕಥಾನಕ ರೂಪ ಈ #ಚಿಟ್ಟೆ. ಏನೇ ಬರೆದರೂ ಸಾಲದೇನೋ!? ಅಥವ ಬರೆಯು ವಷ್ಟು ಶಕ್ತಿ ನಮ್ಮಗಳಿಗಿಲ್ಲವೇನೋ!? (ನನಗಂತೂ ಇಲ್ಲ) ನಿಜಕ್ಕೂ ಜಸ್ಟೀಸ್ ಕೊಡಲು ಸಾಧ್ಯವಾಗ್ತಿಲ್ಲ.

ರಾತ್ರಿ 7 ರಿಂದ 8,ಆ ಒಂದು ಗಳಿಗೆ ಬಾಲ್ಯ, ಹಸಿವು, ಬಡತನ, ಇವೆಲ್ಲವನ್ನೂ ಮೀರಿ ಪುಟಿ ಯುವ ಜೀವನ ಪ್ರೀತಿಯೆಡೆಗಿನ ಮುಗ್ಧ ಪುಳಕದ ಝಲಕ್ ನಮ್ಮ ಪಾಲಿಗೆ ! ಒಂದ್ಸಲ ಅವಿಜ್ಞಾನಿ ಏನೂ ಅರಿಯದವ,ಮತ್ತೊಂದ್ಕಡೆ ಮುರಳೀ, ಇನ್ನೊಂದ್ಕಡೆ ಸಾಕಿಯ ಮಧುಶಾಲೆ ಕಣ್ಮುಂದೆ ಬಂದ್ಹೋದ್ರು. (ಸ್ವಗತ: ಅಫ್ಕೋರ್ಸ್ ನನ್ಹುಡುಗ ನನ್ನೆದೆಯೊಳಗೇ ಇರುವಾಗ, ಅವನಿಗಾಗಿ ಹುಡುಕಾಡುವ ಕಾಟ ನನಗಿಲ್ಲ )

ಚಿಟ್ಟೆ – A creature’s birth out of the status of life and death ! ಸೃಷ್ಟಿಯ ಅಪರೂಪದ ವಿಸ್ಮಯ…!

ನಟನೆಯಿಂದಾಚೆಗೂ, ರಂಗಭೂಮಿಯಿಂದಾ ಚೆಗೂ, ಗೋಕುಲ ವೈಯಕ್ತಿಕವಾಗಿ ವಿಪರೀತ ಭಾವುಕತೆಯುಳ್ಳ ಮಗು. ಮಾತು ಮಾತಿನ ನಡುವೆ ಸರ್ ಹಂಚಿಕೊಂಡ ಒಂದೆರಡು ಘಟನೆ ಗಳನ್ನು ಹಂಚಿಕೊಳ್ಳುವುದಾದರೆ, ಈ ಹಿಂದೆ ಬೇಲೂರು ರಘುನಂದನ್ ರವರೊಮ್ಮೆ ಶಾಪಿಂಗಿ ಗೆ ಹೊರಟಾಗ, ಜೊತೆಯಲ್ಲಿ ಗೋಕುಲ ಕೂಡ ಜೊತೆಯಲ್ಲಿ ಹೋಗಿದ್ದನಂತೆ. ಮಾಲೊಂದರಲ್ಲಿ ಬೆಡ್ಷೀಟ್ ಆಫರ್ – Buy 1 get 1 Free. ಗೋಕುಲ’ಅಪ್ಪ ಇದನ್ನ ಪರ್ಚೇಸ್ ಮಾಡಿ’ಎಂದ ನಂತೆ.ಇವ್ರು ಅವನ ಬಾಯಿ ಮುಚ್ಚಿಸಲು ‘ಮನೆ ಯಲ್ಲಿ ಎಷ್ಟೊಂದಿ ವೆ,ನಮಗ್ಯಾಕೆ ಬೇಡವಾದ ವಸ್ತುಗಳು’ ಎಂದಾಗ…’ ಪ್ಲೀಸ್ ಅಪ್ಪ, ಲಾಸೆಂತದು?! Buy 1 get 1 free ಇದೆಯಲ್ವ?! ಸಾಮಾನ್ಯವಾಗಿ ಮಕ್ಕಳು ತಿನ್ನಲಿಕ್ಕೋ, ಆಡಲಿಕ್ಕೋ ಬೇಕಾದ ವಸ್ತುಗಳ ಬಗ್ಗೆ ಹಠ ಮಾಡುವುದುಂಟು. ಆದ್ರೆ ಗೋಕುಲನ ಹಠ ಬೆಡ್ಷೀಟಿಗಾಗಿ. ಸರಿ…, ಮಗನ ಹಠಕ್ಕೆ ಸೋತು ಕಡೆಗೂ ರಘುನಂದನ್ ಸರ್ buy 1 get1 free ಬೆಡ್ಷೀಟ್ ಕೊಂಡುಕೊಂಡಿ ದ್ದಾಯ್ತು.

ದಾರಿಯಲ್ಲಿ ಹಿಂದಿರುಗುವಾಗ, ಒಂದ್ಕಡೆ ಕಾರ್ ನಿಲ್ಲಿಸಲು ಗೂಕುಲನ ರಿಕ್ವೆಸ್ಟ್-ಪ್ಲೀಸ್ ಅಪ್ಪಾ…ಕಾರ್ ನಿಲ್ಸಿ ಸ್ವಲ್ಪ. ಗೊಂದಲದಲ್ಲೇ ಕಾರ್ ನಿಲ್ಲಿಸಿ ದಾಗ, ಅಪ್ಪನೊಂದಿಗೆ ಮಾತಿಗಿಳಿದ ಗೋಕುಲ – ‘ ಪ್ಪಾ….buy 1 get 1 free ಬೆಡ್ಷೀಟ್ ಇದೆಯ ಲ್ವಾ…? ಆ ಫ್ರೀಯಾಗಿ ಬಂದ ಬೆಡ್ಷೀಟ್ ಅಲ್ಲಿ ಮಲಗಿರುವ ತಾತನಿಗೆ ಕೊಡಣ್ವ…ಇಲ್ಲ ಅನ್ಬೇಡಿ ‘

ಅವನ ಅಂತಃಕರಣದ ಮುಂದೆ ನಾವ್ಗಳು ಕುಬ್ಜರೆ ನ್ನಿಸದೇ ಇರದು.

ಮತ್ತೊಮ್ಮೆ ಸಿಕ್ಕಿಂ ಗಡಿಗೆ ಹೋಗಿದ್ದಾಗ, ಭಾರತ- ಚೀನಾ ಬಾರ್ಡರ್ ಕಾಯುತ್ತಿದ್ದ ಚೀನಾದ ಸೈನಿಕ ರೊಬ್ಬರು smile ಕೊಟ್ಟಾಗ, fencing ನೊಳ ಗಿಂದಲೇ ಗೋಕುಲ ಕೈ ಕುಲು ಕುತ್ತಾ ‘Come this side’ಎಂದು ಕರೆದಿದ್ದಾನೆ. ಅವರು, No we cannot ಎಂದು ಉತ್ತರಿಸಿ ದ್ದಾರೆ. ಇವನು ಸುಮ್ಮನಿರಬಾರ್ದ….’ See, air is coming ! It has no issues to cross the border.. why not U ? ಈ ಬಯಲ ಜಂಗಮತ್ವ ಇಷ್ಟು ಸಣ್ಣ ವಯಸ್ಸಿನಲ್ಲಿ !!!?

ರಾತ್ರಿ ಚೂರು ಡಿಸ್ಟರ್ಬ್ ಆಗಿದ್ದಂತೂ ನಿಜ…ಕಲೆ ಎನ್ನುವುದೇ ಹುಚ್ಚುತನದ ಪರಮಾವಧಿ…ಆ ಹುಚ್ಚುತನದಲ್ಲೇ ಬದುಕ ಸಾರ್ಥಕತೆ ಕಂಡು ಕೊಂಡ ಅದೆಷ್ಟೋ ಕಲಾವಿದರು ಇಂದಿಗೂ ಎಷ್ಟೋ ಜನರ ಮನಗಳಲ್ಲಿ ಅಳಿಸಲಾಗದ ನೆರಳ ಬಿಟ್ಹೋಗಿದ್ದಾರೆ. ಕಲ್ಪನಾ, ಮಂಜುಳಾ, ಶ್ರೀದೇವಿ,ಗಂಗಾಧರ್, ವಜ್ರಮುನಿ, ರಾಮಕೃಷ್ಣ, ರಾಜಕಪೂರ್,ದೇವಾನಂದ್,ಕಮಲ್ ಹಾಸನ್ ರಿಂದ ಹಿಡಿದು, ಫಹಾದ್, ಜೋಕರ್ ನ ಫಿಯೋ ನಿಕ್ಸ್ ವರೆಗೂ ಒಂಥರ ನಟನೆಯನ್ನೇ ಜೀವಿಸಿದ್ದ ವರು,ಜೀವಿಸುತ್ತಿರುವವರು.ಈ ಸಾಲಿನಲ್ಲಿ ಭಾವ ತೀವ್ರತೆಯ ರುಚಿ ಮತ್ತು ರುಚಿಹಿಂದಿನ ಅಪಾಯ …ಎರಡನ್ನೂ ಬ್ಯಾಲೆನ್ಸ್ ಮಾಡುವು ದೆಂದರೆ ಒಂಥರ ಯುದ್ಧ ದ ಹಾಗೇ ಭೀಕರ ಸವಾಲು! Highly valuable&extremely dangerous… ಆದ್ರೆ ನಟನೆಯನ್ನೇ ಪ್ರೇಮಿಸು ವವರಿಗೆ? ಅದು ಜೀವ…ಉಸಿರು!

ಸುಮ್ಮನಿರಲಾರ್ದೇ ರಘುನಂದನ್ ಸರ್ರಿಗೆ ಕರೆ ಮಾಡ್ದೆ…ಸರ್ ಗೋಕುಲ ತುಂಬಾ ಸೂಕ್ಷ್ಮ ಮನಸ್ಸಿನ ದೇವರಂಥ ಮಗು. ಅವ್ನಿಗೆ ಚೂರು ಪ್ರಾಕ್ಟಿಕಲ್ ಬದುಕಿನ ಬಗ್ಗೆಯೂ ಈಗ್ಲಿಂದೇ ಅರಿವು ಮೂಡಿಸಿ…!

ಅವ್ವನ ಅಂಗಳಕ್ಕೆ ಸವಿತಾ ಮೇಡಮ್ ಮೂರು ವರ್ಷಗಳಿಂದ ಕರೆಯುತ್ತಿದ್ರು…ಹೋಗಲು ಸಮಯ ಕೂಡಿ ಬಂದಿರಲಿಲ್ಲ. ನಿನ್ನೆ ರಾತ್ರಿ ಚಿಟ್ಟೆಯೊಂದು ಪ್ರೀತಿಯಿಂದ ತೋಳ್ತೆರೆದು ಆಹ್ವಾನವಿತ್ತಿತ್ತು…!

“ನೋವಾಯಿತೇ ಕೆರೆಯೇ…,ನನ್ನ ಪುಟ್ಟ ಮರಿಯೇ…,ದೊರೆಯೇ ” ಕಾಡಿದ ಹಾಡಿದು !

ಅಳುತ್ತಲೇ ನಗುವ, ನಗುತ್ತಲೇ ಅಳುವ ನಡುಕ ದೊಂದಿಗೆ ಗಂಟಲುಬ್ಬಿಸಿ, ಮತ್ತೆ ನಿರಾಳತೆಯೆ ಡೆಗೆ ಸರಾಗವಾಗಿ ಹರಿಯುವ ಗೋಕುಲನ ನಟನೆ, ಬರಿಯ ನಟನೆ ಮಾತ್ರವಂತೂ ಅಲ್ಲ !

ಕಣ್ಮಿಟುಕಿಸುವ micro moment ನೊಳಗೆ, ಅರಿವಿಲ್ಲದ ಹಾಗೆ ಭಾವನೆಗಳ ಪಲ್ಲಟಕ್ಕೆ ಸಹಜ ವಾಗಿ ತೆರೆದುಕೊಳ್ಳುವ ತಲ್ಲೀನ ಅಭಿನಯ !

ಗೋಕುಲ…ನನ್ನ ಕಡೆಯಿಂದ ಬೊಗಸೆ ಪ್ರೀತಿ ಯನ್ನಷ್ಟೇ ಕೊಡಬಲ್ಲೆ. ಶುಭವಾಗಲಿ! ಅಂದ ಹಾಗೆ, ನಾಟಕದ ಬಗ್ಗೆ ನಾನೆಳ್ಳಷ್ಟೂ ಬರೆದಿಲ್ಲ…ಮುಂದೆ ಎಂದಾದರೂ ಅವಕಾಶ ಸಿಕ್ಕಾಗ, ಗೋಕುಲನಿ ಗಾಗಿ, ಮಿಸ್ ಮಾಡಿಕೊಳ್ಳದೇ ನೋಡಿ ಎಂದಷ್ಟೇ ಹೇಳಬಲ್ಲೆ.

✍️ಸುರಭೀ ರೇಣುಕಾಂಬಿಕೆ
04/09/2021