ಮುಖವಾಡ ಮರೆಯಾಗಿ ಕಾಣದಂತೆ ಕುಳಿತಿದೆ/
ದ್ವೇಷ ಪ್ರೇಮದ ಸೋಗುಹಾಕಿದಂತೆ ಕಾಣುತಿದೆ//

ಬಾಗಿಲು ನೂರಿದ್ದರೂ ಹೊರಗೆ ಹೋಗದಂತಿದೆ/
ಹುಲಿ ಪಂಜರದಿ ಹಾರಿ ಬಂದಂತೆ ಅನಿಸುತಿದೆ//

ಮಾತು ಗಟ್ಟಿ ವ್ಯಾಪಾರದ ಬಂಡವಾಳವಾಗಿದೆ/
ಬಿಚ್ಚುನುಡಿ ಕಿವಿಗಳು ಮುಚ್ಚುವಂತೆ ಕೇಳುತಿದೆ//

ಕಚ್ಚುವ ಕೆರವುಗಳು ದಾರಿಯನು ತಪ್ಪಿಸುತಿದೆ/
ಮೆಚ್ಚುವ ನಡತೆಯು ಕನಸಂತೆ ಮುಗಿಯುತಿದೆ//

ಜಗದ ಜಗುಲಿಯ ಬಿರುಕುಗಳು ದೊಡ್ಡದಾಗಿವೆ/
ತಾಯಿಹೆಜ್ಜೆ ಗುರುತು ಅಳಿಸಿದಂತೆ ತೋರುತಿದೆ//

✍️ರೇಮಾಸಂ,ಹುಬ್ಬಳ್ಳಿ
(ಡಾ.ರೇಣುಕಾತಾಯಿ.ಎಂ.ಸಂತಬಾ)