ದರ್ದೇ ದಿಲ್ ಯಾರಿಗೂ ವರ್ಗಾಯಿಸಲಾಗದು ಸೂಫಿ/
ಗತಗಳಿಗೆಗಳು ಯಾರಿಗೂ ಹಸ್ತಾಂತರಿಸಲಾಗದುಸೂಫಿ//

ಸದ್ದಿಲ್ಲದೆ ಹೃದಯ ಒಡೆದು ಹೋಯಿತು ಸಂತೆಯಲಿ/
ಚೂರಾದ ಅಟಿಕೆ ಯಾರಿಗೂ ಮಾರಲಾಗದು ಸೂಫಿ//

ಅದೇ ಹಳೇ ಮಾತುಕತೆಗಳಿಗೆ ಕೊನೆಯೆಂಬುದು ಇಲ್ಲ/
ನಿತ್ಯ ಅಳುವವರ ಕಣ್ಣೀರು ಯಾರಿಂದಲೂ ಒರೆಸಲಾಗದು ಸೂಫಿ//

ಯಾರು ನನ್ನವರು ಯಾರು ತನ್ನವರು ತಿಳಿಯದ ರಹಸ್ಯ/
ತನ್ನವರೇ ಮಾಡಿದ ಗಾಯ ಹಂಚಿಕೊಳ್ಳಲಾಗದು ಸೂಫಿ//

ನರಳುವದೆಂದರೆ ಸಿಹಿಸುಖವೆನ್ನುವ ಸತ್ಯ ಕವಿಗಷ್ಟೇ ಗೊತ್ತು/
ಎಲ್ಲ ಕಹಿಕ್ಷಣ ಮರೆಯಬೇಕೆಂದರೆ ಮರೆಯಲಾಗದು ಸೂಫಿ//

ಇಂದೂ ಕೂಡ ಮನಸು ತುಂಬ ವ್ಯಾಕುಲತೆಯಿಂದ ಕೂಡಿದೆ/
ಜೊತೆಗಿರುವ ಸಖಿಗೂ ವೇದನೆ ನಿವೇದಿಸಲಾಗದು ಸೂಫಿ//

ಅಶ್ಫಾಕ್ ಪೀರಜಾದೆ,
ಗೋಕಾಕ