ವ್ಯಕ್ತಿತ್ವ ವಿಕಸನ ಸರಳ ಶಬ್ದಗಳಲ್ಲಿ ವ್ಯಕ್ತಿತ್ವ ವಿಕಸನವನ್ನು ಹೇಗೆ ಹೇಳುವದು? ವ್ಯಕ್ತಿತ್ವದ ಅರ್ಥ, ವ್ಯಾಪ್ತಿ ಮತ್ತು ಅದರ ವಿವಿಧ ಆಯಾ ಮಗಳನ್ನು ತಿಳಿದುಕೊಂಡು ಅದರ ವಿಕಸನ ಅಥವಾ ಅಭಿವೃದ್ಧಿ ಹೊಂದುವದು, ಪಡೆಯು ವದು, ಸಾಕಾರಗೊಳಿಸಿಕೊಳ್ಳುವದು ಇಡಿಯಾ ದ ವ್ಯಕ್ತಿತ್ವಕ್ಕೆ ಒಂದು ಮೆರಗು ಗಳಿಸಿಕೊಂಡು, ಎಲ್ಲರೂ ಬೆರಗಾಗುವ ಹಾಗೆ ಪ್ರಭಾವ ಬೀರುವ ಒಂದು ವ್ಯಕ್ತಿತ್ವದ ರೂಪುಗೊಳ್ಳುವಿಕೆಯ ಸಂಶೋಧನೆ, ಪ್ರಯತ್ನ ಯಾವಾಗಿನಿಂದಲೂ ನಡೆದೇ ಇದೆ. ಇದೇ ಸರಿಯಾದ ವಿಧಾನ ಅಂಥ ಇನ್ನೂ ಸಿಕ್ಕಿಲ್ಲ, ಸಿಗುವದೂ ಇಲ್ಲ ಅಂದರೆ ಅಶ್ಚರ್ಯವಿಲ್ಲ.

ವ್ಯಕ್ತಿತ್ವ ಅಂದರೆ ಏನು ಅಂತ ಹೇಳುವದು ?

1.ವ್ಯಕ್ತಿಯ ಉದ್ದ ಗಿದ್ದ ಎತ್ತರ ದಪ್ಪ,ತೆಳ್ಳಗೆ, ಕರಿ, ಬಿಳಿ ಗೋದಿ ಬಣ್ಣ ಕಣ್ಣು ಕಿವಿ ಮೂಗು ಹೊಟ್ಟೆ, ಕೈಕಾಲು ಬೆರಳು, ತಲೆಗೂದಲು ಮಾಡಿಕೊಂಡ ಮೇಕಪ್ ಇವು ವ್ಯಕ್ತಿತ್ವ ಅಳೆಯಲು ಉಪಯೋ ಗಿಸುವ ಶಬ್ದಗಳು ಸಾಕೆ?

2.ವ್ಯಕ್ತಿಯ ಧ್ವನಿ, ಹಸನ್ಮುಖಿತನ, ಮಾತುಗಾ ರಿಕೆ, ಹಾಸ್ಯಪ್ರಿಯತೆ, ಆಕರ್ಷಕ ಹವ್ಯಾಸಗಳು ಹುರುಪು ಹುಮ್ಮಸ್ಸುಗಳು ಸದಾ ಕ್ರಿಯಾಶೀಲ ತೆ ತುಂಬಿಕೊಂಡಿರುವದು.

3.ಶಿಕ್ಷಣ, ಸಚ್ಚಾರಿತ್ರ್ಯ , ಸಮಾಜ ಒಪ್ಪುವ ನಡಾ ವಳಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೊಂದಿರ ಬಹುದಾದ ಕೌಶಲ್ಯಗಳು, ಪ್ರಾವೀಣ್ಯತೆ ಪ್ರಕಟಿ ಸುತ್ತ ಎಲ್ಲರ ಮನ ಗೆಲ್ಲುವ ಪ್ರತಿಭಾ ಸಂಪತ್ತು.

4.ವೇಷಭೂಷಣ, ಮೇಕಪ್,ವಾಹನ, ಡ್ರೈವಿಂಗ್ ಶೈಲಿ ಕ್ಯಾಮೆರಾ, ಮೊಬೈಲ್, ಪಾದರಕ್ಷೆ. ಆ ವ್ಯಕ್ತಿ ಧರಿಸುವ, ತೋರಿಸುವ, ಹೊಂದಿದ ಯಾವದೇ ಗುಣಾವಗುಣಗಳು ವ್ಯಕ್ತಿತ್ವದ ರೂಪುಗೊಳ್ಳುವಿಕೆ ಗೆ ಸಹಾಯವಾಗುತ್ತವೆ.

ಆದರೆ ಇವೆಲ್ಲ ನಿಜವೇ ಅಥವಾ ಭ್ರಮೆಗಳೇ. ಒಬ್ಬ ವ್ಯಕ್ತಿ ಇನ್ನೊಬ್ಬರಲ್ಲಿ ಹುಟ್ಟಿಸಬಹುದಾದ ವೈಚಾರಿಕ ಚಿಂತನೆಗಳ ಮೂಲಕ ಪ್ರಭಾವ ಬೀರ ಬಲ್ಲ ಒಟ್ಟು ಸಮಷ್ಟಿಯ ರೂಪವೇ ವ್ಯಕ್ತಿತ್ವ. ಇದರಲ್ಲಿ ಯಾವವು ಎಷ್ಟಿರಬೇಕೆಂಬ ನಿಯಮ ಇಲ್ಲದಿದ್ದರೂ ಸಹ ಇವೆಲ್ಲವುಗಳ ಬೀಜಗಣಿತದ ಮೊತ್ತವೆ ನಾವು ವ್ಯಕ್ತಿತ್ವ ಅನ್ನಬಹುದು. ಆದರೆ ಹೀಗೆಲ್ಲಾ ಇರಲು ಸಾಧ್ಯವೇ ಅಂತ ವಿಚಾರ ಮಾಡ ಬಹುದು.

ಗ್ರೀಕ್ ಭಾಷೆಯಲ್ಲಿ ಪರಸೋನಾ ಅಂದರೆ ಮಾಸ್ಕ್. ಮುಖವಾಡ ಮುಖವನ್ನೇ ಮುಚ್ಚಿ ಕೊಂಡು ಯಾವ ಯಾವ ಪಾತ್ರ ಅಭಿನಯಿಸ ಬೇಕು ಅದನ್ನು ಧರಿಸಿ ಹಿಂದಿನ ವ್ಯಕ್ತಿಯ ಗುಣ ಮುಚ್ಚಿ ಮುಖವಾಡದ ವ್ಯಕ್ತಿಯ ಅನಾವರಣ ಗೊಳಿಸಿದ್ದ ಆ ಪಾತ್ರದ ವ್ಯಕ್ತಿತ್ವ .ಈ ಶಬ್ದ ಮತ್ತು ಗುಣಗಳ ಮೇಲೆಯೇ ಪರಸೋನಾ ಎಂಬ ಶಬ್ದ-ಮಾತು ಪರಸಾನಿಲಿಟಿ ಬಂದಿದ್ದು. ಇದನ್ನು ಪಡೆದುಕೊಳ್ಳುವದು ಹೇಗೆ ಎಂದರೆ, ಉತ್ತಮ ವ್ಯಕ್ತಿತ್ವ ಹೊಂದುವ ಮನಸ್ಸಿರಬೇಕು ಅಷ್ಟೇಅಲ್ಲ, ವ್ಯಕ್ತಿತ್ವ ವಿಕಸನ ಅನ್ನುವದೇ ಒಂದು ನಿರಂತರ ಕಲಿಕಾ ಕ್ರಿಯೆ. ಕೆಲವು ಅನುಭವದಿಂದ, ಕೆಲವು ಶಿಕ್ಷಣ ಕೆಲವು ಉತ್ತಮ ಹವ್ಯಾಸಗಳನ್ನು ಮೈ ಮನಸ್ಸುಗಳಲ್ಲಿ ಅಳವಡಿಸಿಕೊಳ್ಳುವದು ಕ್ರಿಯೆ ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವದೇ ವ್ಯಕ್ತಿತ್ವ ವಿಕಸನ.

ಸುಲಭ ಮಾರ್ಗಗಳು ಹಾಗೂ ವೆಚ್ಚವಿಲ್ಲದ ಸುಲಭೋಪಾಯಗಳು.

1. ಯಾವಾಗಲೂ ಹಸನ್ಮುಖಿ ಆಗುವದು 2.ಸನ್ನಿವೇಶಕ್ಕೆ ತಕ್ಕಂತೆ ಪೋಷಾಕು ಧರಿಸು ವದು 3.ಯಾವಾಗಲೂ ಹುರುಪು ಕುತೂಹಲ, ಹುಮ್ಮಸ್ಸು ಉತ್ಸಾಹಗಳನ್ನು ತುಂಬಿಕೊಂಡು‌‌ ಕ್ರಿಯಾಶೀಲರಾಗಿರುವದು.
4.ಉತ್ತಮವಾದ ಮಾತುಗಾರಿಕೆ ಮತ್ತು ಬರಹ ಸಾಮರ್ಥ್ಯ ಸಾವಕಾಶವಾಗಿ ರೂಢಿಸಿಕೊಳ್ಳು ವದು.
5.ಮತ್ತೊಬ್ಬರಿಗೆ ಅಥವಾ ಕಷ್ಟದಲ್ಲಿ ಇರುವರಿಗೆ ಕೇಳದೆ ಆದ ಸಹಾಯ ಮಾಡುವದು.
6.ಹೆಚ್ಚು ಭಾಷೆಗಳನ್ನು ಆಡುವದು ಬರೆಯು ವದು ರೂಢಿಸಿಕೊಳ್ಳುವದು. ‌‌‌‌‌‌‌‌ 7.ಸಮಯ ಪ್ರಜ್ಞೆ ಮತ್ತು ನಿಯಮಿತತನದ  ಪರಿಪಾಲನೆ. 8.ನಾಯಕತ್ವದ ಆರಂಭಿತನವನ್ನು ಸಾಧಿಸುವ ದು ಎಲ್ಲರ ಜತೆ ಸಹಕಾರ ಮಾಡುತ್ತ ಯಾವಾಗ ಲೂ ಸಕಾರಾತ್ಮಕ ಧೋರಣೆಯ ಪ್ರದರ್ಶನ ತೋರಿಸುವದು. 9.ನಿರಂತರ ಓದು ಮತ್ತು ವಿಷಯ ಸಂಗ್ರಹ ಮತ್ತು ಹಂಚಿಕೊಳ್ಳುವಿಕೆ.

ರಂಗಭೂಮಿ ಸಂಘಟನೆಯ ನಿಷ್ಠ ವ್ಯಕ್ತಿಗಳಿಗೆ ಮೇಲಿನ ಎಲ್ಲವೂ ಒಂದು ರೀತಿಯಿಂದ ಫ್ರೀ ಆಗಿ ಪ್ರಯೋಗಾತ್ಮಕ ಕಲಿಕೆಯಾಗಿ ಪ್ರತಿ ಎದು ರಿಸುವ ಸನ್ನಿವೇಶದಲ್ಲಿ ಪ್ರತಿ ವ್ಯಕ್ತಿಯು ಕಲಿಯು ತ್ತಲೇ ತನ್ನ ವ್ಯಕ್ತಿತ್ವನ್ನು ರೂಪಿಸಿಕೊ ಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ರೀತಿಯಿಂದ ನಾವೆಲ್ಲ ರಂಗಭೂಮಿ ಸಂಘಟನೆಯಿಂದಲೇ ಇವನ್ನೆಲ್ಲ ರೂಢಿಸಿಕೊಂಡದ್ದು.

✍️ಅರವಿಂದ ಕುಲಕರ್ಣಿ,
ರಂಗಭೂಮಿ ಚಿಂತಕರು,ಧಾರವಾಡ