ಬೆಳಕು ಹೇಗೆ ಹಬ್ಬುತ್ತದೋ, ದೀಪಾವಳಿ ಹಬ್ಬದ ಹರಿವೂ ಹಾಗೆ.ಜಗದಗಲದ ಹಬ್ಬವಿದು.

ದೀಪಾವಳಿ ಹಬ್ಬ ರಾಮನದು, ಕೃಷ್ಣನದು, ವಿಷ್ಣು- ಲಕ್ಷ್ಮಿಯರದು ಜೊತೆಗೆ ಪಾಂಡವರದ್ದೂ ಅನ್ನುವ ಹಾಗೆ, ಇಡೀ ಜಗತ್ತೇ ಈ ಹಬ್ಬದ ತತ್ವ ದಲ್ಲಿ ಭಾಗಿಯಾಗುತ್ತದೆ.
ಇಂಗ್ಲೆಂಡಿನಲ್ಲಿ ಚುಮು ಚುಮು ಚಳಿ ಮತ್ತು ಗಪ್ಪನೆಕತ್ತಲೆ ಆವರಿಸಿಕೊಳ್ಳಲು ಶುರುವಾಗುವ ಸಮಯಕ್ಕೆ ಸರಿಯಾಗಿ ಬೆಳಕಿನ ಬೆಡಗಿನ ದೀಪಾವಳಿಹಬ್ಬದ ಆಚರಣೆ ಶುರುವಾಗುತ್ತದೆ. ಕಣ್ಣು ಕೋರೈಸುವ ದೀಪಗಳು, ಪಟಾಕಿ, ಮಿಠಾಯಿಗಳನ್ನು ಹೊತ್ತು ತರುವ ದೀಪಾವಳಿ ಪರದೇಶದ ಭಾರತೀಯರ ದುಗುಡಗಳನ್ನು ಬಹುಮಟ್ಟಿಗೆ ಮರೆಸುತ್ತದೆ. ಇಂಗ್ಲೀಷರೂ ಈ ಹಬ್ಬದಲ್ಲಿ ನಮ್ಮೊಂದಿಗೆ ಸೇರಿ ಖುಷಿಪಡುತ್ತಾರೆ.

ಭಾರತದ ಹೊರಗಡೆ ನಡೆಯುವ ದೊಡ್ಡ ದೀಪಾವಳಿಗಳಲ್ಲಿ ಇಂಗ್ಲೆಂಡಿನ ಲೆಸ್ಟರ್ ನಗರ ದಲ್ಲಿ ನಡೆವ ದೀಪಾವಳಿಯೂ ಒಂದು. ಪ್ರತಿ ಅಕ್ಟೋಬರ್ 28 ರಂದು ಸುಮಾರು 35000 ಜನರು ಒಂದೆಡೆ ಸೇರಿ ನಗರದ ಭಾರತೀಯ ಜನರ ಮಳಿಗೆಗಳಿರುವ ಬೆಲ್ಗ್ರೇವ್ ಎನ್ನುವ ಮುಖ್ಯ ರಸ್ತೆಯೊಂದನ್ನು 6000 ಚಿತ್ತಾಕರ್ಷಕ ದೀಪಗಳೊಂದಿಗೆ ಅಲಂಕರಿಸುತ್ತಾರೆ. ಅಂದಿನಿಂದಲೇ ದೀಪಾವಳಿಯ ಸಂಭ್ರಮವೂ ಶುರುವಾಗುತ್ತದೆ. ಸಂಗೀತ, ನೃತ್ಯ, ಸಾಂಸ್ಕೃತಿಕ ಆಚಾರ ವಿಚಾರಗಳೊಂದಿಗೆ ನಗು, ಖುಶಿ ಸಂಭ್ರಮದಲ್ಲಿ ಎರಡು ವಾರಗಳ ಅವಿರತ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಾನಾ ವಿಧದ ಸಿಹಿಮಿಟಾಯಿಯ ಹಂಚಿಕೆಯ ಹೊಂಚಲ್ಲೇ ಕುಟುಂಬದ ಸದಸ್ಯರೆಲ್ಲ ಸಮುದಾಯದವರೊಡನೆ ಸೇರಿ ನರ್ತಿಸಿ ಆನಂದಿಸುತ್ತಾರೆ.

ಬ್ರಿಟನ್ನಿನ ನಾನಾ ಭಾಗದ ಕನ್ನಡಿಗರು ದೊಡ್ಡ ನಗರಗಳಲ್ಲಿ ಒತ್ತಟ್ಟಿಗೆ ಸೇರಿ ದೀಪಾವಳಿಯನ್ನು ಆಚರಿಸುತ್ತಾರೆ. ತಾಯ್ನಾಡಿನ ಕಂಪು ಬೀರಬಲ್ಲ ಹಾಡುಗಾರರು, ಕಲಾವಿದರು, ಸಾಹಿತಿಗಳನ್ನು ಸಿನಿಮಾ ತಾರೆಗಳನ್ನು ತವರುಮನೆಯಿಂದ ಕರೆಸಿ “ಕನ್ನಡ ದೀಪಾವಳಿ” ಯ ಸಡಗರದಲ್ಲಿ ಸಂಭ್ರ ಮಿಸುತ್ತಾರೆ.ಬಂದ ಕಲಾವಿದರುಗಳು ಇಲ್ಲಿನ ಚಳಿಯನ್ನು ಶಪಿಸುತ್ತಲೇ ಅನಿವಾಸಿ ಕನ್ನಡಿಗರ ಬೆಚ್ಚಗಿನ ಆತಿಥ್ಯದಲ್ಲಿ ಮೀಯುತ್ತಾ ರೆ. ಪಟಾಕಿಗ ಳ ಚಿತ್ತಾಕರ್ಷಕ ಪ್ರದರ್ಶನಗಳು ಕಪ್ಪಗಿನ ಆಗಸ ದಲ್ಲಿ ಬೆಳಕಿನ ಚಿತ್ತಾರಗಳನ್ನು ಬಿಡಿಸಿ ಕತ್ತಲೆ ತುಂಬಿದ ಮನಸ್ಸಿನಲ್ಲಿ ದೇದಿಪ್ಯ ಮಾನವಾದ ಹರ್ಷದ ಹಣತೆ ಹೊತ್ತಿಸುತ್ತವೆ.

ಇಂಗ್ಲೆಂಡಿನಲ್ಲಿ‘ಗೈ ಫಾಕ್ಸ್ ಡೇʼಎನ್ನುವ ಪಟಾಕಿ ಸುಡುವ ಹಬ್ಬವು ಕೂಡ ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬದ ಜೊತೆ ಜೊತೆಗೇ ಬರುತ್ತದೆ. ಇಂಗ್ಲೆಂಡಿನ ರಾಜ ಆರನೇ ಜೇಮ್ಸ್ ಮತ್ತು ಪಾರ್ಲಿಮೆಂಟಿನ ಸದಸ್ಯರನ್ನು ಕೊಲ್ಲಲು ಗೈ ಮತ್ತು ಆತನ ಸಹಚರರು ಒಂದು ಒಳಸಂಚನ್ನ ನಡೆಸುತ್ತಾರೆ.ಆದರೆ ಆ ಸಂಚು ವಿಫಲವಾಗುತ್ತ ದೆ. ಕೆಟ್ಟ ಉದ್ದೇಶಗಳ ಮೇಲೆ ಒಳ್ಳೆಯತನದ ಜಯವಾಗುತ್ತದೆ.The gun powder plot of1605ಎಂದೇ ಕರೆಯಲ್ಪಡುವ ಈ ಐತಿಹಾಸಿಕ ಘಟನೆ ನಿಜಕ್ಕೂ ನಡೆದದ್ದು.ಅದರ ನೆನಪಲ್ಲಿ ಜನರು ಈಗಲೂ ಸಂಭ್ರಮಿಸುತ್ತಾರೆ, ಪಟಾಕಿ ಹಚ್ಚುತ್ತಾರೆ.

ದೀಪಾವಳಿಯನ್ನು ಸತತ ಐದು ದಿನಗಳ ಕಾಲ ಆಚರಿಸಬಹುದಾದ ಕಾರಣ ಇವೆರಡೂ ಹಬ್ಬಗ ಳು ಇಲ್ಲಿ ಜೊತೆ ಜೊತೆಯಾಗಿ ನಡೆಯುತ್ತವೆ. ಈ ಎರಡು ಹಬ್ಬಗಳ ಸಂದೇಶವೂ ಒಂದೇ ಆಗಿದೆ.

ಈ ಕಾರಣ ಪಟಾಕಿಗಳು ಇಲ್ಲಿನ ಎಲ್ಲ ಸೂಪರ್ ಮಾರ್ಕೆಟ್ಟುಗಳಲ್ಲಿ ಹೇರಳವಾಗಿ ಸಿಗುತ್ತವೆ. ಜೊತೆಗೆ ಇಲ್ಲಿನ ಬಹುತೇಕ ಜನ ಬ್ರಿಟಿ಼ಷರಿಗೆ ಭಾರತೀಯರ ದೀಪಾವಳಿ ಅಥವಾ ದಿವಾಲಿ ಹಬ್ಬದ ಬಗ್ಗೆ ತಿಳಿದಿದೆ. ಶಾಲೆಯ ಮಕ್ಕಳಿಗೆ ಜಗತ್ತಿ ನ ಹಬ್ಬಗಳ ಬಗ್ಗೆ ತಿಳಿಸುವಾಗ ದೀಪಾವಳಿ ಹಬ್ಬ ದ ಬಗ್ಗೆ ಹೇಳಿಕೊಡುತ್ತಾರೆ.

ದುಷ್ಟರನ್ನು ನಿಗ್ರಹಿಸಿ ಒಳ್ಳೆಯತನವನ್ನು ಮೆರೆದ, ಕತ್ತಲಿನಿಂದ ಬೆಳಕಿನ ಕಡೆಗೆ ನಡೆವ, ಅಜ್ಞಾನ ದಿಂದ ಅರಿವಿನೆಡೆಗೆ ತುಡಿವ -ತತ್ವದ ದೀಪಾವಳಿ ಹಬ್ಬ ಪ್ರತಿ ದೇಶದ ಜನರ ಮನಸ್ಸುಗಳನ್ನು ತಟ್ಟಬಲ್ಲ ಸಂದೇಶವನ್ನು ನೀಡಬಲ್ಲ ಭಾರತೀಯ ಹಬ್ಬ.

ಹಾಗಾಗಿ ಇಂಗ್ಲೆಂಡಿನ ಪ್ರಧಾನ ಮಂತ್ರಿ ಕೂಡ ಈ ಹಬ್ಬಕ್ಕೆ ಇಲ್ಲಿನ ಭಾರತೀಯರೆಲ್ಲರಿಗೂ ಶುಭ ಸಂದೇಶ ನೀಡುತ್ತಾರೆ. ಇಂದಿನ ಆಧುನಿಕ ಇಂಗ್ಲೆಂಡನ್ನು ಸಶಕ್ತವಾಗಿ ಕಟ್ಟಲಾದ ಭಾರತೀಯರ ನಿ಼ಷ್ಠ ದುಡಿಮೆಯನ್ನು ಈ ವರ್ಷವೂ ಅಭಿನಂದಿಸಿದ್ದಾರೆ. ಇಂಗ್ಲೆಂಡಿಗ ಸ್ನೇಹಿತರೂ ನಮ್ಮೊಡನೆ ಸೇರಿ ಪಟಾಕಿ ಹೊಡೆದು ಆಚರಿಸುತ್ತಾರೆ.

ಕನ್ನಡ ಸಮುದಾಯಗಳು ಈ ಹಬ್ಬವನ್ನು ಸಾಮೂಹಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮೇಲೆ ಹೇಳಿದಂತೆ ಆಚರಿಸುವುದು ಇಲ್ಲಿನ ವಾಡಿಕೆ.ಕೋವಿಡ್ ಕಾರಣ ಕಳೆದ ವರ್ಷ ಇಂತಹ ದೊಡ್ಡ ಸಮುದಾಯ ಆಚರಣೆಗಳು ನಡೆಯಲಿ ಲ್ಲ. ಕೇವಲ ಮನೆ ಮನೆಗಳ ಆಚರಣೆಯಾಗಿ ಸೀಮಿತಗೊಂಡಿತ್ತು.ಈ ವರ್ಷವೂ ದೊಡ್ಡ ಸಾಮೂಹಿಕ-ಸಾಂಸ್ಕೃತಿಕ ಆಚರಣೆಗಳು ನಡೆಯಲಿಲ್ಲ. ಆದರೆ, ಒಂದು ಮನೆಯವರು ಇತರೆ ಹಲವು ಮನೆಯವರನ್ನು ಆಹ್ವಾನಿಸುತ್ತ ವಾರವಿಡೀ ದೀಪಾವಳಿ ಹಬ್ಬದ ಆಚರಣೆ ನಡೆಸಿ ಸಂಭ್ರಮಿಸಿದರು.

ಶೆಫೀಲ್ಡ್ ನಗರದ ವಾಸಿಗಳಾದ ಪೂರ್ಣಿಮ ಮತ್ತು ಶಿವಪ್ರಸಾದ್ ವೈದ್ಯ ದಂಪತಿಗಳು ಸುತ್ತ ಮುತ್ತಲಿನ ಹಲವಾರು ಕುಟುಂಬಗಳನ್ನು ಈ ವರ್ಷ ತಮ್ಮ ಮನೆಗೆ ಆಹ್ವಾನಿಸಿದ್ದರು. ನಾವೂ ಹೋಗಿದ್ದೆವು. ಒಟ್ಟಿಗೆ ಪಟಾಕಿ ಹೊಡೆದು, ಸಹ ಭೋಜನ ಮಾಡಿದ್ದಲ್ಲದೇ ಮಕ್ಕಳು-ಹಿರಿಯ ರಿಂದ ಗಾಯನ, ಜೋಕ್ಸ್, ಜೊತೆಗೆ ಎರಡನೇ ತಲೆಮಾರಿನ ಮಕ್ಕಳಿಂದ ಕನ್ನಡದಲ್ಲೇ ದೀಪಾವಳಿ ಹಬ್ಬದ ಮಹತ್ವ, ಕ್ವಿಝ್ ಇತ್ಯಾದಿ ಚಟುವಟಿಕೆ ನಡೆಸಿದೆವು. ಒಬ್ಬರಿಗೊಬ್ಬರು ಹಬ್ಬ ದ ಶುಭ ಕಾಮನೆಗಳನ್ನು ಹಂಚಿಕೊಂಡು ಒತ್ತಟ್ಟಿಗೆ ದೀಪಾವಳಿಯನ್ನು ಆಚರಿಸಿದೆವು.

ಭಾರತದಂತೆ ಈ ಹಬ್ಬಕ್ಕೆ ಇಲ್ಲಿ ನಮಗೇನೂ ರಜೆ ಸಿಗುವುದಿಲ್ಲ. ಹಾಗಾಗಿ ಹಲವರು ಇಡೀ ದಿನ ಕೆಲಸ ಮಾಡಿ ಸಂಜೆಯ ಈ ಆಚರಣೆಗೆ ಬಂದಿ ದ್ದರು. ಎಲ್ಲರೂ ಒಬ್ಬರಿಗೊಬ್ಬರು ಶುಭ ಹಾರೈಸಿ ಖುಷಿಯಿಂದ ಮಧ್ಯರಾತ್ರಿಯನ್ನೂ ಮೀರಿ ಆಚರಣೆಯಲ್ಲಿ ಪಾಲ್ಗೊಂಡರು.ಸುತ್ತ ಮುತ್ತಲಿನ ಊರು-ಕೇರಿಗಳ ಕನ್ನಡಿಗರ ಜೊತೆ ದೂರದ ಊರುಗಳಿಂದಲೂ ಹಲವು ಕುಟುಂಬಗಳು ಬಂದು ಅತಿಥೇಯರ ತುಂಬು ಹೃದಯದ ಆತಿಥ್ಯ ವನ್ನು ಸವಿದರು.

ಇಲ್ಲಿ ಕೆಲವು ನಗರಗಳಲ್ಲಷ್ಟೆ ಕನ್ನಡ ಕುಟುಂಬ ಗಳು ಒತ್ತಟ್ಟಿಗೆ ನೆಲೆಸಿರುವುದು. ಹಾಗಾಗಿ ನಾವು ೧೦೪ಕಿ.ಮೀ. ದೂರ ಪ್ರಯಾಣ ಕೈಗೊಂಡು ನಮಗೆ ತಿಳಿದ ಹತ್ತಾರು ಕನ್ನಡ ಕುಟುಂಬಗಳ ಜೊತೆ ಹಬ್ಬದ ಸಂಭ್ರಮದಲ್ಲಿ ಸಂತೋ಼ಷವಾಗಿ ಭಾಗಿಗಳಾಗಿದ್ದೆವು.ಮತ್ತದೇ ದೂರ ಕ್ರಮಿಸಿ ಮನೆ ಗೆ ಮರಳಿದಾಗ ಮುಂಜಾವಿನ ಎರಡು ಗಂಟೆ. ಆದರೆ ರಸ್ತೆಯ ಇಕ್ಕೆಲಗಳ ಕಡುಗಪ್ಪು ಆಗಸ ದಲ್ಲಿ ರೊಯ್ಯನೆ ಬಂದು ಹರಡಿಕೊಳ್ಳುತ್ತಿದ್ದ ಪಟಾಕಿಯ ಕಣ್ಮನ ತಣಿಸುವ ಸುಂದರ ವಿನ್ಯಾಸ ಗಳು ಭಾರತದ ಬಾಲ್ಯಕ್ಕೇ ನಮ್ಮನ್ನು ಕೊಂಡೊ ಯ್ದು ಸಂತಸಪಡುವಂತೆ ಮಾಡಿದವು. ತಟ್ಟನೆ ದೇಶ-ವಿದೇಶದ ಗಡಿಗಳು ಅಳಿಸಿಹೋಗಿ ಹಬ್ಬದ ಸಂಭ್ರಮ ಮಾತ್ರವೇ ಮನದುಂಬಿಕೊಂಡು ಇನ್ಯಾವುದೋ ಮಾಯಾ ಲೋಕಕ್ಕೆ ಒಯ್ದವು. ದೀಪಾವಳಿಗೆ ಮನೆಯಲ್ಲೇ ಮಾಡಿದ ಕಜ್ಜಾಯ ಮತ್ತಿತರ ಸಿಹಿತಿಂಡಿಗಳು ಇಂತಹದ್ದೊಂದು ಉತ್ತಮ ಆಚರಣೆಯ ಕಾರಣ ಮತ್ತಷ್ಟು ಸಿಹಿಯೆನೆಸಿದವು.

✍️ಡಾ.ಪ್ರೇಮಲತ ಬಿ.
ದಂತವೈದ್ಯರು, ಲಂಡನ್ ಇಂಗ್ಲೆಂಡ್
ತುಂಬಾ ಚನ್ನಾಗಿದೆ.
ಉತ್ತಮ ಮಾಹಿತಿ..
ಸಂತೋಷ್ ಬಿದರಗಡ್ಡೆ.
ನನ್ನ ಕವನ: ದೀಪಾವಳಿ
ದೀಪಾವಳಿ
ಬಂದಿತು ಬಂದಿತು ದೀಪಾವಳಿ
ತಪ್ಪಲಿ ಜಗಕೆ ಕೊರೊನಾ ಹಾವಳಿ
ಕತ್ತಲೆ ಕಳೆದು ಬೆಳಕು ಹರಿದು
ಗರಿಗೆದರುವ ಹಬ್ಬ ದೀಪಾವಳಿ.
ಕಾರ್ತಿಕ ಮಾಸದಲಿ ಸಂಭ್ರಮ
ಮನೆ ಮನ ಶುದ್ಧತೆಯ ಆಗಮ
ಮಣ್ಣಿನ ದೀಪಗಳ ಸರತಿ ಸಾಲು
ಅಮಾವಾಸ್ಯೆ ಬೆಳಗುವ ದೀಪಾವಳಿ.
ಸಂಹರಿಸಿದ ರಾವಣನ ಶ್ರೀರಾಮ
ಸೀತಾಲಕ್ಷ್ಮಣರೊಡೆ ಅಯೋಧ್ಯಾಗಮ
ಅಜ್ಞಾತವಾಸ ಮುಕ್ತ ಪಾಂಡವರಿಗೆ
ಸಂಭ್ರಮಾಚರಣೆಯ ದೀಪಾವಳಿ.
ನರಕಾಸುರನ ಉಪಟಳವಿರಲು
ಸಂಹರಿಸಿದ ಅವತರಿಸಿ ಶ್ರೀಕೃಷ್ಣನು
ಸಕಲ ಶ್ರೇಯಸ್ಸುಗಳ ಮಾತೆ ಲಕ್ಷ್ಮೀ
ಪೂಜಿಸಿ ಆಚರಿಸುವ ದೀಪಾವಳಿ.
ಪತಿ ಸತಿಗೆ ಉಡುಗೊರೆ ನೀಡುವರು
ಗೋ ಪೂಜಿಸಿ ಭಕ್ತಿ ನಮಿಸುವರು
ಮಾಡುವರು ದನಕರುಗಳಿಗೆ ಓಕಳಿ
ಜಗಕೆ ಬೆಳಕಾಗಲಿ ದೀಪಾವಳಿ.
ರಚನೆ:-
ಸಂತೋಷ್ ಬಿದರಗಡ್ಡೆ
ಸಾಹಿತಿಗಳು, ಹಾನಗಲ್ಲ.
LikeLike