ಕರ್ನಾಟಕದ ವಾಸ್ತುಶಿಲ್ಪಗಳ ದೇವಾಲಯಗಳ ದರ್ಶನ ಮಾಡಿದವರು ಹಲವು ಸುಂದರವಾದ ದೇವಾಲಯಗಳನ್ನು ನೋಡಿರುತ್ತಾರೆ. ಇವುಗಳ ಲ್ಲಿ ಹಲವು ದೇವಾಲಯಗಳು ಮನಸಿನಲ್ಲಿ ಪಡಿ ಯಚ್ಚು ಮೂಡಿಸಿದರೆ ಕೆಲವು ದೇವಾಲಯಗಳ ಶಿಲ್ಪಗಳು ಗಮನ ಸೆಳೆಯುತ್ತವೆ. ಕೆಲವು ಕಡೆ ಎರಡೂ ಸುಂದರವಾಗಿರುತ್ತವೆ. ಆದರೆ ಇನ್ನು ಕೆಲವು ದೇವಾಲಯಗಳು ಸಾಮಾನ್ಯವಾದರೂ ಮೂರ್ತಿಗಳು ಮನಸ್ಸಿನಲ್ಲಿ ಹಾಗೆಯೇ ಉಳಿದು ಗಮನ ಸೆಳೆದಿರುತ್ತವೆ. ಅಂತಹ ದೇವಾಲಯಗಳ ಲ್ಲಿ ಚನ್ನ ಗಿರಿಯ ಚನ್ನಕೇಶವನ ಮೂರ್ತಿಯೂ ಒಂದು.

ಮೂಲತಹ ೧೨ ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನವೀಕರ ಣಗೊಂಡಿದೆ.ದೇವಾಲಯ ಹೊರನೋಟದಲ್ಲಿ ಸಾಧಾರಣವಾದ ದೇವಾಲಯದಂತೆ ಕಾಣಬಂದ ರೂ ಒಳ ಹೊಕ್ಕಲ್ಲಿ ಚಾಲುಕ್ಯರ ಕಾಲದ ವೈಭವ ವನ್ನು ಕಟ್ಟಿಕೊಡುತ್ತದೆ.ಇಲ್ಲಿ ಕಲ್ಯಾಣ ಚಾಲುಕ್ಯರ ರ ಕಾಲದಲ್ಲಿನ ಕಲ್ಲೇಶ್ವರ ಹಾಗು ನಂತರದ ಹೊಯ್ಸಳರ ಕಾಲದಲ್ಲಿ ಸೇರ್ಪಡೆಗೊಂಡ ಕೇಶವ ನ ಶಿಲ್ಪದಿಂದ ಈ ದೇವಾಲಯವನ್ನು  ಕೇಶವ ಮತ್ತು ಕಲ್ಲೇಶ್ವರ ದೇವಾಲಯ ಎಂದು ಕರೆಯು ವ ಈ ದೇವಾಲಯ ನೆಲ ಮಟ್ಟಕಿಂತ ತಗ್ಗಿನಲ್ಲಿದ್ದು ತ್ರಿಕೂಟಾಚಲ ಶೈಲಿಯಲ್ಲಿದೆ. ಮೂರು ಗರ್ಭ ಗುಡಿ, ಅಂತರಾಳ ಮತ್ತು ಒಂದೇ ನವರಂಗ ಹೊಂದಿದೆ.

ಇಲ್ಲಿನ ಎಲ್ಲಾ ಗರ್ಭಗುಡಿಗಳು ಚತರ್ರುಶ ಮಾದ ರಿಯಾಗಿದ್ದು ಪಶ್ಚಿಮದ ಗರ್ಭಗುಡಿ ಯಲ್ಲಿ ಶಿವ ಲಿಂಗವಿದ್ದು, ಪ್ರವೇಶದ್ವಾರ ಪುಷ್ಪ ಶಾಖೆಗಳಿಂದ ಅಲಂಕೃತಗೊಂಡಿದೆ. ಲಲಾಟದಲ್ಲಿ ಗಜಲಕ್ಷ್ಮೀ ಕೆತ್ತೆನೆ ಇದೆ.ಇಲ್ಲಿನ ಶಿವಲಿಂಗ ಮೂಲತ: ಕಲ್ಯಾಣ ಚಾಲುಕ್ಯರ ಕಾಲದ್ದು. ಗರ್ಭ ಗುಡಿಗೆ ಹೊಂದಿ ದಂತೆ ಅಂತರಾಳವಿದ್ದು, ಇಲ್ಲಿಯಾವುದೇ ಶಿಲ್ಪಗಳಾಗಲಿ ಕಾಣಬರುವದಿಲ್ಲ. ಆದರೆ ಉಳಿದ ಎರಡು ಗರ್ಭಗುಡಿಗಳಲ್ಲಿ ಅವರ ಕಾಲದ ಶಿಲ್ಪ ಗಳು ಇಲ್ಲ. ಕಾಲಾಂತರದಲ್ಲಿ ನಾಶವಾಗಿರುವ ಅಥವಾ ಸ್ಥಳಾಂತರವಾಗಿರುವ ಸಾಧ್ಯತೆಯೂ ಇದೆ.

ಆದರೆ ಈಗ ‌‌ ಉತ್ತರದ ಗರ್ಭಗುಡಿಯಲ್ಲಿ ದೇವಾಲಯದ ಮುಕುಟ ಎನ್ನಬಹುದಾದ ಸುಂದರ ಕೇಶವನ ಮೂರ್ತಿ ಇದೆ. ಹೊಯ್ಸಳರ ಕಾಲದ ಈ ಮೂರ್ತಿಯನ್ನು ಗರ್ಭಗುಡಿಯ ನಿರ್ಮಾಣದ ನಂತರ ಕಾಲದಲ್ಲಿ ಇರಿಸಲಾಗಿದೆ, ಕೇಶವನ ಮೂರ್ತಿ ಸುಂದರವಾಗಿ ಕೆತ್ತಲಾಗಿದ್ದು, ಪ್ರಭಾವಳಿಯಲ್ಲಿ ದಶವಾತಾರದ ಸುಂದರ ಕೆತ್ತೆನೆ ಇದೆ.  ಕೈನಲ್ಲಿ ಶಂಖ, ಚಕ್ರ,‌ ಗಧಾ ಮತ್ತು ಕಮಲ ಹಿಡಿದಿದ್ದು ಸುಂದರವಾದ ಕೆತ್ತೆನೆಯ ಕಿರೀಟವಿದೆ. ಕೊರಳಲ್ಲಿನ ಹಾರ, ಉದರ ಭಂದ, ಉಪವೀತ, ಕೈಗಡಗ, ಕಾಲ್ಗಡಗ ಮುಂತಾದ ಆಭರಣಗಳಿಂದ ಅಲಂಕೄತಗೊಂಡಿದ್ದು, ಶಿಲ್ಪದ‌ ಇಕ್ಕೆಲದಲ್ಲೂ ಶ್ರೀದೇವಿ ಮತ್ತು ಭೂದೇವಿಯ ಸುಂದರ ಕೆತ್ತೆನೆ ಇದೆ. ಸುಮಾರು ೬ ಅಡಿ ಎತ್ತರದ ಈ ಶಿಲ್ಪವು ಪ್ರವೇಶದ್ವಾರಕ್ಕಿಂತ ಎತ್ತರವಾಗಿದ್ದು ಹೊಯ್ಸಳ ಶೈಲಿಯನ್ನು ಹೋಲುತ್ತಿದ್ದು ನಂತರದ ಸೇರ್ಪಡೆ ಯಂತೆ ತೋರುತ್ತದೆ.  ಪೂರ್ವದ ಗರ್ಭಗುಡಿ ಖಾಲಿ ಇದ್ದು ಯಾವ. ಶಿಲ್ಪವೂ ಇಲ್ಲ.  ಬಹುಷ: ನಾಶ ಆಗಿರಬಹುದು ಅಥವಾ ಸ್ಥಳಾಂತರಗೊಂಡಿರಬಹುದು.

ನವರಂಗದ ಮಧ್ಯದಲ್ಲಿ ನಾಲ್ಕು ಕಂಭಗಳಿದ್ದು ತಿರುಗಣೆಯಿಂದ ಕಡೆದ ಕಂಭಗಳು. ಕಂಭಗಳ ಪಾದಭಾಗದಲ್ಲಿ ಉಬ್ಬು ಶಿಲ್ಪಗಳಿದ್ದು, ವಿತಾನ (ಭುವನೇಶ್ವರಿ)ದಲ್ಲಿ ಸುಂದರ ಅರಳಿದ ಪದ್ಮದ ಅಲಂಕಾವಿದೆ. ನವರಂಗದ ಕಂಬದ ಮಧ್ಯದಲ್ಲಿ ಬಳೆಗಳ ಕೆತ್ತೆನೆಕಲಾತ್ಮಕವಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ನಿರಾಲಂಕಾರವಾಗಿದ್ದು ಅರ್ಧ ಕಂಭಗಳು ಮಾತ್ರ ಕಾಣಸಿಗುತ್ತದೆ. ದೇವಾಲಯ ತಗ್ಗಿನಲ್ಲಿರುವುದರಿಂದ ಬಹುಶ: ಅಧಿಷ್ಟಾನ ಹೂತು ಹೋಗಿರಬಹುದು. ಮೇಲ್ಚಾವಣಿ ಸಮ ತಟ್ಟಾಗಿದ್ದು ಗರ್ಭಗುಡಿಯ ಮೇಲೆ ಇರಬಹು ದಾಗಿದ್ದ ಶಿಖರದ ಭಾಗ ನಾಶವಾಗಿದೆ.

ಸಂಪೂರ್ಣ ವಿನಾಶದತ್ತ ಸಾಗಿದ್ದ ಈ ದೇವಾಲಯಗಳನ್ನು ಈಗ ವ್ಯವಸ್ಥಿತವಾಗಿ ರಕ್ಷಣೆ ಮಾಡಲಾಗಿದ್ದು, ಶಿಲಾ ಕಲಾ ವೈಭವದ ಬದಲಾಗಿ ಉತ್ತಮ ಕಲಾತ್ಮಕ ಕೆತ್ತೆನೆ ಹೊಂದಿದ ಸುಂದರ ಕೇಶವನ ಮೂರ್ತಿ ನೋಡಬೇಕು ಎನ್ನುವವರಿಗೆ ಮರೆಯಬಾರದ ಜಾಗ.ರಾಜ್ಯದಲ್ಲಿ ದೊರೆತಿರುವ ಸುಂದರ ಕೇಶವ  ಮೂರ್ತಿಗಳಲ್ಲಿ ಇದು ಒಂದು.

ಇಲ್ಲಿ ಮತ್ತೊಂದು ರಾಮಲಿಂಗೇಶ್ವರ ದೇವಾಲ ಯ ಹೊರಭಾಗದಲ್ಲಿ ರಸ್ತೆಯ ಪಕ್ಕದಲ್ಲಿದ್ದು ಈಗ ನವೀಕರಣಗೊಂಡಿದೆ. ಈ ದೇವಾಲಯ ಸಹ ಗರ್ಭಗುಡಿ, ಅಂತರಾಳ ಮತ್ತು ಒಂದೇ ನವರಂಗ ಹೊಂದಿದೆ.ಇಲ್ಲಿ ಪಶ್ಚಿಮ ಗರ್ಭಗುಡಿ ಯಲ್ಲಿ ಮಾತ್ರ ಶಿವಲಿಂಗ ಮತ್ತು ನಂದಿ ಇದ್ದು (ಈಗ ನವೀಕರಣ ನಿಮಿತ್ತ ಊರಿನಲ್ಲಿ ಇರಿಸಲಾಗಿದೆ).

ಪ್ರವೇಶ್ವರ ತ್ರಿಶಾಖ ಕೆತ್ತೆನೆ ಹೊಂದಿದೆ. ಶೈವ ದ್ವಾರ ಪಾಲಕರು ಇದ್ದು ಲಲಾಟದಲ್ಲಿ ಗಜ ಲಕ್ಷ್ಮೀ ಕೆತ್ತೆನೆ ಇದೆ. ಉಳಿದ ಗರ್ಭಗುಡಿಯಲ್ಲಿ ಯಾವ ಶಿಲ್ಪ ಗಳು ಕಾಣಬರುವದಿಲ್ಲ ಪ್ರವೇಶ ದ್ವಾರಗಳು ಸಾಧರಾಣವಾಗಿದೆ. ಹೊರಭಿತ್ತಿಯ ಅಲಂಕಾರ ಸರಳವಾಗಿದ್ದು ಶಿಖರ ನೂತನ ನಿರ್ಮಾಣ. ಈ ದೇವಾಲಯ ಸಹ ೧೨ ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.

ತಲುಪುವ ಬಗ್ಗೆ: ಚನ್ನಗಿರಿಯು ಚಿತ್ರದುರ್ಗ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವು ದರಿಂದ ಸುಲಭವಾಗಿ ತಲುಪಬಹುದು. ಶಿವಮೊಗ್ಗದಿಂದ ಸುಮಾರು ೪೩ ಕಿ ಮೀ ಹಾಗು ಚಿತ್ರದುರ್ಗದಿಂದ ಸುಮಾರು ೫೫ ಕಿ.ಮೀ ದೂರ ದಲ್ಲಿದೆ.

✍️ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು