ಮನೆ-ಮನಗಳಲ್ಲಿ ಬೆಳಗಲಿ
ಶಾಂತಿಯ ದೀಪ
ಎಲ್ಲರ ಮನೆಗಳಲ್ಲಿ ಪಸರಿಸಲಿ
ಖುಷಿಯ ಕಂಪ
ನಿಮ್ಮ ಕುಟುಂಬಗಳಿಗೆ ತಟ್ಟದಿರಲಿ
ದ್ವೇಷ-ಹಗೆಗಳ ಶಾಪ
ಸುಟ್ಟು ಹಾಕಿ ನಿಮ್ಮ ಮನದಲ್ಲಿರುವ
ಕೋಪ-ತಾಪ
ಜಗತ್ತಿಗೊಬ್ಬನೆ ಸೊರ್ಯ ದೀಪದ
ಮಹಾರೂಪ
ಒತ್ತಡದ ಜೀವನದಲ್ಲಿ ಇಂತಹ
ಖುಷಿಯ ಕ್ಷಣಗಳು ಸಿಗುವದು
ಅಪರೊಪ
ಜೀವನ ನಮ್ಮ ಭಾವನೆಗಳ
ಪ್ರತಿರೂಪ
ನಿಮ್ಮ ಮುಖಗಳಲ್ಲಿ ಅರಳಲಿ
ಮಂದಹಾಸದ ರೂಪ
ಕಿತ್ತುಹಾಕಿ ಕೆಟ್ಟ ಮನಸಿನ
ಭಾವನೆಗಳ ಕುರೂಪ
ನಾಡಿನ ಎಲ್ಲ ಜನತೆಗೆ ಸಿಗಲಿ
ದೀಪಾವಳಿಯ ಹುರುಪ

✍️ಕಿರಣ ಯಲಿಗಾರ,ಮುನವಳ್ಳಿ