ದೀಪಗಳ ಹಬ್ಬ ದೀಪಾವಳಿ ಎಂದರೆ ಎಲ್ಲರೂ ಇಷ್ಟಪಡುವ,ಮನಸು ಮನಸುಗಳು ಸೇರಿ ಖುಷಿ, ಸಂತೋಷದಿಂದ ಆಚರಿಸುವ ಹಬ್ಬವಾಗಿದೆ. ದೀಪಾವಳಿ ಎಂದ ಕೂಡಲೆ ನಮಗೆ ನೆನಪಾಗು ವುದು ಪಟಾಕಿ,3 ದಿನಗಳ ಕಾಲ ಮಾಡುವ ರುಚಿ ರುಚಿಯಾದ ಅಡಿಗೆ, ಮಕ್ಕಳೆಲ್ಲ ಸೇರಿ ಆಡುವ ಆಟ, ಮನೆಯ ಸುತ್ತಮುತ್ತ ಹಚ್ಚಿದ ದೀಪಗಳು, ಹೊಸ ಬಟ್ಟೆ ಇತ್ಯಾದಿ.

ದೀಪಾವಳಿ ಬಂತು ಎಂದರೆ ಸಾಕು ಮನೆಯಲೆಲ್ಲ ಪಟಾಕಿಯನ್ನು ಹೊಡೆಯಬೇಕೆಂಬ ಖುಷಿಯೇ ಹೆಚ್ಚಿರುತಿತ್ತು. ಆದರಲ್ಲಿಯೂ ಮನೆಗೆ ಹಬ್ಬಕ್ಕೆಂ ದು ದೊಡ್ಡಪ್ಪ, ಚಿಕ್ಕಪ್ಪಂದಿರ ಮಕ್ಕಳು ಬರುವುದ ರಿಂದ ಎಲ್ಲರೂ ಸೇರಿ ಪಟಾಕಿ ಹೊಡೆಯುವುದ ರಲ್ಲಿ ಏನೊ ಒಂದು ಖುಷಿ ತುಂಬಿರುತ್ತಿತ್ತು. ಈ ಪಟಾಕಿ ಕೊಳ್ಳುವ ಮತ್ತು ಹೊಡೆಯುವ ವಿಷಯ ದಲ್ಲಿಯೂ ತಾನು ಹೆಚ್ಚು ಹೊಡಯಬೇಕು, ತನಗೆ ಸುರ್ಸುರ್ ಬತ್ತಿಯೇ ಬೇಕು, ನೆಲ ಚಕ್ರವೇ ಬೇಕು ಎಂಬ ಹಠ ಇರುತಿತ್ತು. ಹಾಗೆಯೇ ಆ 3 ದಿನ ಮುಗಿಯುವದರೊಳಗೆ ತಂದ ಪಟಾಕಿಗೆ ಎಲ್ಲ ರೂ ಸೇರಿ ಒಂದು ಗತಿ ತೋರಿಸುತ್ತಿದ್ದೆವು.

ಇನ್ನೊಂದು ಕಡೆ ಮನೆಯಲ್ಲಿ ನೆಡೆಯುವ ಪೂಜೆ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಆ ಮಡಿ, ಮೈಲಿಗೆಯ ನಡುವೆ ಅದೆಷ್ಟು ಬಾರಿ ದೊಡ್ಡವರ ಹತ್ತಿರ ಬೈಸಿಕೊಳ್ಳುತ್ತಿದ್ದೆವೋ ಅದಕ್ಕೆ ಲೆಕ್ಕವೇ ಇಲ್ಲ. ದೀಪಾವಳಿ ಹಬ್ಬ ಪ್ರಾರಂಭವಾಗು ವ ಹಿಂದಿನ ದಿನ ಹಂಡೆಗೆ ನೀರನ್ನು ತುಂಬಿಸ ಬೇಕಿತ್ತು. ಮಾರನೆ ದಿನ ಬೇಗ ಎದ್ದು ಮನೆಯಲ್ಲಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ದೇವರಿಗೆ ಪೂಜೆ ಮಾಡಬೇಕಿತ್ತು.ಅದಾದ ನಂತರ ಎಣ್ಣೆ ಹನಿಸುವ ಶಾಸ್ತ್ರ ನೆಡೆಯುತಿತ್ತು. ಹೀಗೆ ಒಂದೊಂದು ದಿನ ಒಂದೊಂದು ರೀತಿಯ ಶಾಸ್ತ್ರ,ಪದ್ಧತಿಯ ಮೂಲ ಕ ದೇವರುಗಳಿಗೆ ಪೂಜೆ, ಪುನಸ್ಕಾರವನ್ನು ನೆರ ವೇರಿಸುತ್ತಿದ್ದರು.

ಲಕ್ಷ್ಮಿ ಪೂಜೆಯ ದಿನ ಊರಿನ ಲ್ಲಿರುವ ಎಲ್ಲಾ ಅಂಗಡಿಗಳಿಗೆ ಹೋಗಿ ಅವರು ಕೊಡುವ ಪ್ರಸಾ ದವನ್ನು ತಿಂದು ಬರುತ್ತಿದ್ದೆವು.ಈ ದೀಪಾವಳಿಯ ಮೂರು ದಿನ ಮುಗಿಯುತ್ತಾ ಬಂದಂತೆ ನಮ್ಮಲ್ಲಿ ನ ಉತ್ಸಾಹ,ಖುಷಿಯೂ ಕಡಿಮೆ ಆಗುತ್ತಾ ಬರು ತ್ತಿತ್ತು.ದೀಪಾವಳಿ ಹಬ್ಬ ಮುಗಿಯುವುದೇ ಬೇಡ ಎಂಬ ಭಾವನೆ ಮೂಡುತಿತ್ತು.

ಆ ಬಾಲ್ಯದ ದಿನದ ದೀಪಾವಳಿ ಆಚರಣೆಗೂ ಇಂದಿನ ದಿನದ ದೀಪಾವಳಿ ಆಚರಣೆಗೂ ತುಂಬಾನೆ ವ್ಯತ್ಯಾಸವಿದೆ. ಅಂದಿನ ದಿನಗಳಲ್ಲಿ ಆಚರಣೆ ಮಾಡಿದ ಹಬ್ಬದ ನೆನಪುಗಳನ್ನು ಮರೆ ಯಲು ಸಾಧ್ಯವೇ ಇಲ್ಲ. ಇಂದು ತಂತ್ರಜ್ಞಾನ ಮುಂದುವರೆದ ಕಾರಣ ಮೊದಲಿದ್ದ ಪದ್ಧತಿ ಇಂದು ಆಚರಣೆಯಲ್ಲಿ ಕಾಣುವುದು ಕಷ್ಟ. ಆದರೆ ಇರುವುದರಲ್ಲಿಯೇ, ಗೊತ್ತಿರುವಷ್ಟು ಅಂಶಗಳನ್ನು ಅರಿತುಕೊಂಡು ಇಂದಿನ ದಿನದ ದೀಪಾವಳಿ ಹಬ್ಬವನ್ನು ಆಚರಿಸೋಣ.

✍️ಮಧುರಾ ಎಲ್ ಭಟ್ಟ
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ